ಕೇಂದ್ರದಿಂದ ಲಸಿಕೆ ಬಂದ ಬಳಿಕ ಕರ್ನಾಟಕದಲ್ಲಿ ಲಸಿಕೆ ಅಭಿಯಾನ ಚುರುಕು

ಬೆಂಗಳೂರು, ಏಪ್ರಿಲ್ 29: ಕೇಂದ್ರದಿಂದ ಲಸಿಕೆ ಬಂದ ಬಳಿಕ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುವುದು, ಅಲ್ಲಿಯವರೆಗೂ ನೋಂದಣಿ ಕಾರ್ಯ ಮುಂದುವರೆಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಕೋವಿನ್ ಅಪ್ಲಿಕೇಷನ್‌ನಲ್ಲಿ ಜನರು ನೋಂದಣಿ ಮಾಡಿಕೊಳ್ಳಬಹುದು ಆದರೆ ನಾವು ಕೇಳಿದಷ್ಟು ಕೊರೊನಾ ಲಸಿಕೆ ನಮಗೆ ತಲುಪಿದ ಬಳಿಕವಷ್ಟೇ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ರಾಜ್ಯದಲ್ಲಿ ನಿತ್ಯ 100 ರಿಂದ 200 ಮಂದಿ ಕೊರೊನಾ ಸೋಂಕಿನಿಂದ ಮೃತಪಡುತ್ತಿದ್ದಾರೆ. 23 ಜಾಗವನ್ನು ತಾತ್ಕಾಲಿಕ ಚಿತಾಗಾರವನ್ನಾಗಿ ನಿರ್ಮಿಸಲಾಗಿದೆ. ಹೆಚ್ಚು ಕೊರೊನಾ ಲಸಿಕೆಗಳು ಬಂದಾಗ ಮಾತ್ರ 18 ರಿಂದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಸಾಧ್ಯವಾಗುತ್ತದೆ. ಮೇ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಎಂದಿನಂತೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Karnataka Govt Non-Committal On Vaccinating 18 To 44 From May 1

ಕರ್ನಾಟಕದಲ್ಲಿ 24 ಗಂಟೆಯಲ್ಲಿ 39047 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 14,39,822ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 24 ಗಂಟೆಯಲ್ಲಿ 229 ಜನರು ಮೃತಪಟ್ಟಿದ್ದಾರೆ.

ಒಟ್ಟು ಮೃತಪಟ್ಟವರ ಸಂಖ್ಯೆ 15036. ಸಕ್ರಿಯ ಪ್ರಕರಣಗಳ ಸಂಖ್ಯೆ 3,28,884. 24 ಗಂಟೆಯಲ್ಲಿ ಆಸ್ಪತ್ರೆಯಿಂದ 11,833 ಜನರು ಡಿಸ್ವಾರ್ಜ್‌ ಆಗಿದ್ದಾರೆ. ಒಟ್ಟು ಡಿಸ್ಚಾರ್ಜ್ ಆದವರು 1095883. ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 2,192 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+