ಸರ್ಕಾರದಿಂದ ಶಾಲಾ-ಕಾಲೇಜುಗಳ ಬಳಿ ಬಾರ್ ತೆರೆದವರಿಗೆ ಖಡಕ್‌ ಸೂಚನೆ

ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳ ಬಳಿಯಲ್ಲಿ ತೆರೆದಿರುವಂತಹ ಮದ್ಯದಂಗಡಿಗಳಿಗೆ ಬ್ರೇಕ್ ಹಾಕಲಾಗಿದೆ. ಒಂದು ವೇಳೆ ತೆರೆದಿದ್ದರೆ, ಶೈಕ್ಷಣಿಕ ಸಂಸ್ಥೆಗಳಿಂದ ಅಬಕಾರಿ ಇಲಾಖೆಗೆ ದೂರು ನೀಡಲು ಸೂಚಿಸಿದೆ. ಈ ಕುರಿತಂತೆ ಪ್ರೌಢ ಶಿಕ್ಷಣದ ನಿರ್ದೇಶಕರು ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಅದರಲ್ಲಿಯೂ ಮಾನ್ಯ ಆಯುಕ್ತರು ಅಬಕಾರಿ ಇಲಾಖೆಯವರು ಸರ್ಕಾರಕ್ಕೆ ಬರೆದಿರುವ ತಮ್ಮ ಪತ್ರದಲ್ಲಿ ಉಪ ಕಾರ್ಯದರ್ಶಿಗಳು, ಜುವಿನೈಲ್ ಜಹೀ ಕಮಿಟಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ರವರು ದಿನಾಂಕ 12.10.2023ರಂದು ನಡೆಸಿರುವ ಸಭೆಯಲ್ಲಿ, ವುಸ್ತಾಪಿಸಿರುವ ಅಂಶಗಳಂತೆ ಎಂದಿದ್ದಾರೆ.

Government Strict Warning to Bars Near Schools and Colleges

ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು, ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದರೆ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸಬೇಕು. ಈ ಕುರಿತು ಅಬಕಾರಿ ಇಲಾಖೆಯಿಂದ ಕಮಕೈಗೊಳ್ಳಲಾಗುವುತ್ತದೆ ಎಂದು ತಿಳಿಸಿದ್ದಾರೆ.

ವ್ಯಸನ ಮುಕ್ತಗೊಳಿಸು ಬಗ್ಗೆ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಮತ್ತು ಅಬಕಾರಿ ಇಲಾಖೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಲಾಗಿದೆ ಎಂದಿದ್ದಾರೆ.

ಅದರಂತೆಯೇ ತಮ್ಮ ಜಿಲ್ಲಾ ವಾಪ್ತಿಯಲ್ಲಿ ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು, ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆ ಆಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+