ಇನ್ನೆರಡು ತಿಂಗಳಲ್ಲಿ ವ್ಯವಸ್ಥೆ ಹದೆಗೆಡಲಿದೆ: ಕೋಡಿಶ್ರೀ ಭವಿಷ್ಯ

Posted By:
Subscribe to Oneindia Kannada

ಗದಗ, ಆಗಸ್ಟ್ 24: ಕಳೆದ ತಿಂಗಳು ಸಿದ್ದರಾಮಯ್ಯ ಸರಕಾರಕ್ಕೆ ಕಂಟಕವಿಲ್ಲ ಎಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು, ಈಗ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿಯಲಿದೆ ಎಂದು ಭವಿಷ್ಯ ನುಡಿದು, ಸರಕಾರಕ್ಕೆ ನಡುಕ ತಂದಿದ್ದಾರೆ.

ಗದಗದಲ್ಲಿ ಮಂಗಳವಾರ (ಆ 23) ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೋಡಿಶ್ರೀಗಳು, ಅಧಿಕಾರಿಗಳ ತಪ್ಪಿಂದ ಕಾರ್ಯಾಂಗ ವ್ಯವಸ್ಥೆ ಹದೆಗೆಡಲಿದೆ ಎಂದಿದ್ದು, ರಾಜಕೀಯ ವಲಯದಲ್ಲಿ ಸಂಚಲವನ್ನುಂಟು ಮಾಡಿದ್ದಾರೆ. (ಬಾಗಲಕೋಟೆಯಲ್ಲಿ ಕೋಡಿಶ್ರೀ ನುಡಿದ ಭವಿಷ್ಯ)

ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಗಳೂ ನಡೆಯುತ್ತಲೇ ಇರುತ್ತದೆ. ಆದರೆ ಈ ಯಾವ ಪ್ರಯತ್ನಕ್ಕೂ ಫಲ ಸಿಗದು ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಕಳೆದ ತಿಂಗಳು ಬಾಗಲಕೋಟೆಯಲ್ಲಿ ಭವಿಷ್ಯ ನುಡಿದಿದ್ದರು.

ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧ ಹದೆಗೆಡಲಿದ್ದು, ಇದರಿಂದ ಜನಪ್ರತಿನಿಧಿಗಳು ಸಾರ್ವಜನಿಕರ ವಿಶ್ವಾಸಗಳಿಸುವಲ್ಲಿ ವಿಫಲರಾಗಲಿದ್ದಾರೆಂದು ಕೋಡಿ ಶ್ರೀಗಳು ಹೇಳಿದ್ದಾರೆ.

ದುರ್ಮುಖಿ ನಾಮ ಸಂವತ್ಸರದಲ್ಲಿ ವಾತಾವರಣದಲ್ಲಿ ಏರುಪೇರು ಸಂಭವಿಸುವ ಸಾಧ್ಯತೆ ಹೆಚ್ಚು. ಬೆಂಕಿ, ಗಾಳಿಯಿಂದ ಅವಘಡ ಸಂಭವಿಸಬಹುದಾದರೂ, ಜನರಿಗೆ ತೊಂದರೆಯಾಗುವುದಿಲ್ಲ ಎಂದು ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ. ಮುಂದೆ ಓದಿ..

ಗೋ ವಿಚಾರದಲ್ಲಿ ಕೋಡಿಶ್ರೀಗಳ ಭವಿಷ್ಯ

ಗೋ ವಿಚಾರದಲ್ಲಿ ಕೋಡಿಶ್ರೀಗಳ ಭವಿಷ್ಯ

ನಕಲಿ ಗೋರಕ್ಷಕರಿಗೆ ಇತ್ತೀಚೆಗೆ ಪ್ರಧಾನಿ ಮೋದಿ ಚಾಟಿ ಬೀಸಿದಂತೆಯೇ, ಕೋಡಿಶ್ರೀಗಳೂ ನಕಲಿ ಗೋರಕ್ಷಕರ ವಿಚಾರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ಗೋವಿನ ವಿಚಾರದಲ್ಲಿ ಅನಾವಶ್ಯಕ ಗೊಂದಲ ಹುಟ್ಟುಹಾಕಿ ಅದಕ್ಕೆ ಧರ್ಮದ ಲೇಪನವನ್ನು ತರಬಾರದೆಂದು ಶ್ರೀಗಳು ಮನವಿ ಮಾಡಿದ್ದಾರೆ.

ಅಧಿಕಾರಿಗಳು

ಅಧಿಕಾರಿಗಳು

ಸಚಿವರ ಮತ್ತು ಜನಪ್ರತಿನಿಧಿಗಳ ಆದೇಶವನ್ನು ಅಧಿಕಾರಿಗಳು ಪಾಲಿಸದೇ, ಮುಂದಿನ ಎರಡು ತಿಂಗಳಲ್ಲಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿಯಲಿದೆ - ಕೋಡಿಶ್ರೀ.

 ಜನರ ಮೇಲೆ ಹಲ್ಲೆ ಮಾಡಬಾರದು

ಜನರ ಮೇಲೆ ಹಲ್ಲೆ ಮಾಡಬಾರದು

ಮಹದಾಯಿ ಹೋರಾಟಗಾರರ ಮೇಲೆ ನಡೆದ ಹಲ್ಲೆಯ ಬಗ್ಗೆ ಮಾತನಾಡುತ್ತಾ, ಹೋರಾಟ, ಸತ್ಯಾಗ್ರಹ ಎಲ್ಲಾ ಪ್ರಭಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ. ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ್ದು ತಪ್ಪು, ಇದರಿಂದ ಸರಕಾರದ ಮೇಲೆ ಜನರಿಗೆ ವಿಶ್ವಾಸ ಹೋಗುತ್ತದೆ ಎಂದು ಶ್ರೀಗಳು ನುಡಿದಿದ್ದಾರೆ.

ಮುಂಗಾರು ವೈಫಲ್ಯ

ಮುಂಗಾರು ವೈಫಲ್ಯ

ನಾಡಿನಲ್ಲಿ ಮುಂಗಾರು ವೈಫಲ್ಯಗೊಂಡಿದ್ದರೂ, ಹಿಂಗಾರು ಉತ್ತಮವಾಗಲಿದೆ. ರೈತಾಪಿ ವರ್ಗ ಆತಂಕ ಪಡಬೇಕಾಗಿಲ್ಲ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಗುಜರಾತ್ ನಲ್ಲಿ ಬಿಜೆಪಿಗೆ ಸೋಲು

ಗುಜರಾತ್ ನಲ್ಲಿ ಬಿಜೆಪಿಗೆ ಸೋಲು

ಗುಜರಾತಿನಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ. ಪ್ರಧಾನಿ ಮೋದಿ ಒಬ್ಬ ಸಜ್ಜನ ರಾಜಕಾರಣಿ ಜೊತೆಗೆ ಧರ್ಮದಿಂದ ನಡೆದುಕೊಳ್ಳುತ್ತಿರುವುದರಿಂದ ಎದುರಾಗುವ ಯಾವುದೇ ತೊಂದರೆಗಳನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದು ಕೋಡಿಶ್ರೀಗಳು ಯುಗಾದಿಗೆ ಮುನ್ನ ಭವಿಷ್ಯ ನುಡಿದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kodimath seer Dr Shivanand Shivayogi Rajendra Swamy has come out with another prediction, which will shake Siddaramaiah govt. This time his prediction says, Karnataka govt administration will collapse due to officials' fault. He was speaking to media in Gadag on Tuesday.
Please Wait while comments are loading...