ಓಡ್ರೋ.. ಓಡ್ರೋ ಅಂತ ವಿಶ್ ಮಾಡಿದ ಗೂಗಲ್!
ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲಾ ಕಡೆನೂ ಮನೆ ಮಾಡಿದೆ. ಇದೀಗ ಗೂಗಲ್ ಕನ್ನಡಿಗರಿಗೆ ಮುದ್ದು ಮುದ್ದಾಗಿ, ಚಂದವಾಗಿ ವಿಶ್ ಮಾಡಿದೆ. ಕನ್ನಡ ರಾಜ್ಯೋತ್ಸವ ಕರ್ನಾಟಕ ಹಬ್ಬ. ಕನ್ನಡ ರಾಜ್ಯೋತ್ಸವಕ್ಕೆ ವಿಭಿನ್ನವಾಗಿಯೇ ವಿಶ್ ಮಾಡಿರುವ ಗೂಗಲ್ ಅ ಅಂದರೆ ಅಪ್ಪು ಎನ್ನುವುದರಿಂದ ಪ್ರಾರಂಭಿಸಿ ವಿಶ್ ಮಾಡಿದೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಲ್ಲೂ, ಎಲ್ಲೆಡೆಯೂ ಕನ್ನಡ. ಕನ್ನಡ ಕನ್ನಡ ಹ! ಸವಿಗನ್ನಡ ಎನ್ನುವ ವಿಶೇಷ ದಿನ. ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎನ್ನುವ ಸಾಲುಗಳನ್ನು ಕೇಳಿ ರೋಮಾಂಚಿರಾಗದ ಕನ್ನಡಿಗರುಂಟೆ. ಇದೀಗ ಗೂಗಲ್ ಸಹ ನಮ್ಮ ಕನ್ನಡಿಗರ ಖುಷಿಯನ್ನು ಪ್ರೀತಿ, ಭಾವನಾತ್ಮಕ ಹಾಗೂ ಹಾಸ್ಯದ ಸಾಲುಗಳ ಮೂಲಕ ಹೆಚ್ಚಿಸಿದೆ.

ಕನ್ನಡ ಸ್ವರಗಳೊಂದಿಗೆ ಶಾಲಾ ದಿನಗಳ ಸಿಹಿ ನೆನಪುಗಳನ್ನು ನೆನಪಿಸಿಕೊಳ್ಳೋಣ 🥹
ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️💛 ಎಂದು ಶುಭಕೋರಿದೆ.
ಅಷ್ಟೇ ಅಲ್ಲ ಅಯಿಂದ ಅಃ ವರೆಗೂ ಗೂಗಲ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಕನ್ನಡದ ಒಂದೊಂದು ಅಕ್ಷರಕ್ಕೂ ಒಂದು ವಾಕ್ಯ ರಚಿಸಿ ಕನ್ನಡಿಗರನ್ನು ರಂಜಿಸಿದೆ. ಗೂಗಲ್ ಕನ್ನಡ ಅಕ್ಷರಗಳಿಗೆ ಕೊಟ್ಟಿರುವ ಸಾಲುಗಳ ವಿವರ ಇಲ್ಲಿದೆ.
ಅ - ಅಪ್ಪು
ಆ - ಆಕಾಶ ದೀಪವು ನೀನು
ಇ - ಇತಿಹಾಸ
ಈ - ಈ ಸಲ ಕಪ್ ನಮ್ದೇ
ಉ - ಉಪ್ಪು, ತುಪ್ಪ, ಅನ್ನ
ಊ - ಊಟ ಆಯ್ತಾ
ಋ - ಋತು
ಎ - ಎಲ್ಲಿ ಮಗ
ಏ - ಏನು ಕೊಡ ಏನು ಕೊಡವಾ
ಐ - ಐದು ಆರು ಬೇಳೆ ಸಾರು
ಒ - ಒಂದು ಕಪ್ ಫಿಲ್ಟರ್ ಕಾಫಿ
ಓ - ಓಡ್ರೋ ಓಡ್ರೋ ಓಡ್ರೋ
ಔ - ಔತಣ
ಅಂ - ಅಂಬಾರಿ ಆನೆ
ಅಃ ...
ಇದು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಗೂಗಲ್ ಮಾಡಿರುವ ಶುಭಾಶಯದ ಸಾಲುಗಳು. ಇದಕ್ಕೆ ಕನ್ನಡಿಗರು ಅಷ್ಟೇ ಚಂದವಾಗಿ ಪ್ರತಿಕ್ರಿಯಿಸಿದ್ದಾರೆ. ಶರಣು ಗೂಗಲ್ ನಿಮ್ಮ ಕನ್ನಡ ಪ್ರೀತಿ ನೋಡಿ ಖುಷಿ ಆಯ್ತು ಎಂದಿದ್ದಾರೆ.
ಕನ್ನಡಿಗರ ಪ್ರಶಂಸೆಯ ಸುರಿಮಳೆ: ಕನ್ನಡ ರಾಜ್ಯೋತ್ಸವಕ್ಕೆ ಗೂಗಲ್ ಕೋರಿರುವ ಶುಭಾಶಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಪೋಸ್ಟ್‌ಗೆ ಕನ್ನಡಿಗರು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಅಪ್ಪು ಅವರನ್ನು ಸ್ಮರಿಸಿದ್ದಕ್ಕೆ, ಈ ಸಲ ಕಪ್ ನಮ್ದೇ ಅನ್ನೋದಕ್ಕೆ ಹೊಸದಾಗಿ ಸೇರಿರುವ ಓಡ್ರೋ.. ಓಡ್ರೋ.. ಓಡ್ರೋ.. ಅನ್ನೋ ಸಾಲಿಗಂತಲೂ ಜನ ಖುಷಿಯಾಗಿದ್ದಾರೆ.
ಕಾಮೆಂಟ್ ಮಾಡಲು ಕರೆ: ಗೂಗಲ್‌ನ ಕನ್ನಡ ಶುಭಾಶಯವನ್ನು ಸೋಷಿಯಲ್ ಮೀಡಿಯಾ ಹಾಗೂ ವಾಟ್ಸಪ್‌ಗಳಲ್ಲಿ ಹಂಚಿಕೊಂಡಿರುವ ಜನ ಈ ಪೋಸ್ಟ್‌ಗೆ ಕನ್ನಡಲ್ಲಿ ಕಾಮೆಂಟ್ (ಪ್ರತಿಕ್ರಿಯೆ) ಮಾಡಿ ಎಂದು ಕೇಳಿದ್ದಾರೆ. ಗೂಗಲ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವುದರಿಂದ ಮುಂದೆ ಗೂಗಲ್ ಇನ್ನಷ್ಟು ಕನ್ನಡಿಗರಿಗೆ ಹತ್ತಿರವಾಗುತ್ತದೆ ಎನ್ನುವ ಆಶಯವೂ ಇದೆ.
ಗೂಗಲ್ ಅಥವಾ ಯಾವುದೇ ಸಂಸ್ಥೆಗಳಿರಲಿ ಗ್ರಾಹಕರ ಬೇಡಿಕೆ ಹಾಗೂ ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಗೆ ಗೌರವ ಕೊಡುವ ಮೂಲಕ ಹತ್ತಿರವಾಗುತ್ತವೆ. ನಮ್ಮದೇ ಭಾಷೆಯಲ್ಲಿ ವಿವರಣೆ ಕೇಳುವ ಖುಷಿ ಕೊಡುತ್ತಲ್ಲ ಆ ರೀತಿ. ಇದೀಗ ಗೂಗಲ್ ಕರ್ನಾಟಕ ಜನ್ಮದಿನಕ್ಕೆ ಕೋರಿರುವ ಶುಭಾಶಯ ಭಾರೀ ವೈರಲ್ ಆಗ್ತಿದೆ. ನೀವೂ ಸಹ ಕಾಮೆಂಟ್ ಮಾಡಿ, ಎಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!












Click it and Unblock the Notifications