Good news for Tulu: ತುಳು ಭಾಷೆಗೆ ಸಿಕ್ಕಿತು ಮತ್ತೊಂದು ಮನ್ನಣೆ...
Tulu script: ತುಳುಭಾಷೆ ಇತ್ತೀಚಿನ ದಿನಗಳಲ್ಲಿ ತನ್ನ ಮನ್ನಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕನ್ನಡ ನೆಲದ ಮತ್ತೊಂದು ಭಾಷೆ ತುಳು. ಕನ್ನಡ ಮತ್ತು ತುಳುವಿನ ನಡುವೆ ಸೌಹಾರ್ದತೆ ಮೊದಲಿನಿಂದಲೂ ಇದೆ. ತುಳು ಭಾಷೆಯನ್ನು ಅಕ್ಷರ ರೂಪಕ್ಕೆ ಇಳಿಸಲು ಇಂದಿಗೂ ಹಲವು ತುಳುಭಾಷಿಕರು ಕನ್ನಡವನ್ನೇ ಆಸರೆಯನ್ನಾಗಿಸಿಕೊಂಡಿದ್ದಾರೆ. ಆದರೆ, ಈ ನಡುವೆ ಕೆಲವು ಚಪ್ರಾಸಿಗಳಿಂದ ಕನ್ನಡ ಮತ್ತು ತುಳು ಭಾಷಿಕರ ನಡುವೆ ವೈಮನಸ್ಸು ಮೂಡುತ್ತಿದೆ. ಈಗ ಹೇಳಲು ಹೊರಟಿರುವುದು ತುಳು ಭಾಷಿಕರು ಸಂಭ್ರಮಿಸಲು ಮತ್ತೊಂದು ಕಾರಣವಿರುವ ವಿಷಯ.
ತುಳುಭಾಷೆಯ ಲಿಪಿ ಇದೀಗ ಯುನಿಕೋಡ್‌ಗೂ ಸೇರ್ಪಡೆಯಾಗಿದೆ. ಈಗಾಗಲೇ ತುಳು ಭಾಷೆ ಗೂಗಲ್ ಹಾಗೂ ಯುನಿಕೋಡ್‌ಗೆ ಸೇರ್ಪಡೆಯಾಗಿದೆ. ಯುನಿಕೋಡ್‌ಗೆ ತುಳು ಲಿಸಿ ಸೇರ್ಪಡೆಯಾಗುವುದರೊಂದಿಗೆ ಹೊಸ ದಾಖಲೆ ಸೃಷ್ಟಿಯಾಗಿದೆ. ಇನ್ನು ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಡ್ ಅವರು, ತುಳುಲಿಪಿಗೆ ಯುನಿಕೋಡ್ ಮಾನ್ಯತೆ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಇದು ತುಳುಭಾಷಿಕರ ಹಲವು ವರ್ಷಗಳ ಕನಸು ಎಂದಿದ್ದಾರೆ.

ತುಳುಲಿಪಿ ಇದೀಗ ಯುನಿಕೋಡ್ ಮಾನ್ಯತೆ ಗಳಿಸಿರುವುದರಿಂದಾಗಿ ತುಳು ಲಿಪಿಯಲ್ಲಿನ ಪಠ್ಯಗಳನ್ನು ಓದಲು ಅವಕಾಶ ಸಿಗಲಿದೆ. ಅಲ್ಲದೇ ತುಳುಭಾಷೆಯನ್ನು ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆ ಎಂದು ಪರಿಗಣಿಸುವ ನಿಟ್ಟಿನಲ್ಲಿ ಸಹಕಾರವಾಗಲಿದೆ. ಇನ್ನಷ್ಟು ಮನ್ನಣೆ ತುಳು ಭಾಷೆಗೆ ಸಿಗಲಿದೆ ಎಂದು ಹೇಳಿದ್ದಾರೆ.
ತುಳು ಭಾಷೆ 8ನೇ ಪರಿಚ್ಛದಕ್ಕೆ ಹಲವು ವರ್ಷಗಳ ಹೋರಾಟ
ಇನ್ನು ತುಳು ಭಾಷೆಯನ್ನು 8ನೇ ಪರಿಚ್ಛದಕ್ಕೆ ಸೇರಿಸಬೇಕು ಎಂದು ಹಲವು ದಶಕಗಳಿಂದ ತುಳು ಭಾಷಿಕರು ಒತ್ತಾಯ ಮಾಡುತ್ತಲ್ಲೇ ಇದ್ದಾರೆ. ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹ ಹಲವು ವರ್ಷಗಳಿಂದ ಇದೆ. ಈ ನಿಟ್ಟಿನಲ್ಲಿ ತುಳು ಭಾಷಿಕರು ಹೋರಾಟಗಳನ್ನೂ ಸಹ ಮಾಡಿದ್ದಾರೆ. ತುಳು ಭಾಷೆಯು ಸಹ ಡ್ರಾವಿಡ ಭಾಷೆಗಳ ಪರಂಪರೆಗೆ ಸೇರಿದೆ. ಈಗಾಗಲೇ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳು 8ನೇ ಪರಿಚ್ಛದಕ್ಕೆ ಸೇರಿವೆ. ಇದೇ ಪರಂಪರೆಯ ತುಳು ಭಾಷೆಯನ್ನು ಸಹ 8ನೇ ಪರಿಚ್ಛೆದಕ್ಕೆ ಸೇರ್ಪಡೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಕೇಂದ್ರ ಸರ್ಕಾರವು ನಮ್ಮ ಭಾಷೆಯನ್ನು 8ನೇ ಪರಿಚ್ಛೆದಕ್ಕೆ ಸೇರ್ಪಡೆ ಮಾಡದೆ ಇರುವುದರಿಂದ ನಮ್ಮ ಕಲೆ ಹಾಗೂ ಸಂಸ್ಕೃತಿಗೂ ಹಿನ್ನೆಡೆ ಉಂಟಾಗುತ್ತಿದೆ ಎನ್ನವ ಆತಂಕವನ್ನೂ ಸಹ ತುಳು ಭಾಷಿಕರು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ?
ಇನ್ನು ಕರ್ನಾಟಕದಲ್ಲಿಯೂ ಕನ್ನಡ ಭಾಷೆಯ ನಂತರ, ಎರಡನೇ ಭಾಷೆಯನ್ನಾಗಿ ತುಳು ಭಾಷೆಯನ್ನು ಪರಿಗಣಿಸಬೇಕು ಎನ್ನುವ ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆ ಎಂದು ಪರಿಗಣಿಸಲು ಬೇಕಾದ ಅರ್ಹತೆ ತುಳು ಭಾಷೆಗೆ ಇದೆ ಎಂದು ಈಚೆಗಷ್ಟೇ ಡಾ.ಎಂ ಮೋಹನ ಆಳ್ವ ಅವರ ಅಧ್ಯಕ್ಷತೆಯ ಸಮಿತಿಯು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವರದಿಯನ್ನು ಸಹ ಸಲ್ಲಿಸಿತ್ತು. ಈ ನಿಟ್ಟಿನಲ್ಲೂ ಚರ್ಚೆಗಳು ನಡೆದಿತ್ತು.
ಎಲ್ಲೆಲ್ಲಿ ಇದ್ದಾರೆ ತುಳು ಭಾಷಿಕರು
ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಾಗಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದ್ದಾರೆ. ಇನ್ನು ಕೇರಳದ ಕಾಸರಗೋಡಿನಲ್ಲಿಯೂ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಟ್ಟಾರೆ ತುಳು ಭಾಷಿಕರ ಸಂಖ್ಯೆ ದೇಶ - ವಿದೇಶದಲ್ಲಿ ಬರೋಬ್ಬರಿ 1 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications