Good News: ಸರ್ಕಾರದಿಂದ ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು, ಸೆಪ್ಟೆಂಬಬರ್‌, 25: ರಾಜ್ಯ ಸರ್ಕಾರ ಹಾಗೂ ಪ್ರೇಮ್‌ಜಿ ಫೌಂಡೇಷನ್ ಸೇರಿ ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ವಿತರಣೆ ಮಾಡುವುದಾಗಿದೆ ಇತ್ತೀಚೆಗಷ್ಟೇ ಹೇಳಲಾಗಿತ್ತು. ಇದೀಗ ಈ ಯೋಜನೆ ಇಂದಿನಿಂದ ಅಂದರೆ, ಸೆಪ್ಟೆಂಬರ್‌ 25ರಿಂದ ಜಾರಿಗೆ ತರಲಾಗಿದೆ. ಹಾಗಾದರೆ ಈ ಯೋಜನೆಯ ಲಾಭ ಯಾವ್ಯಾವ ತರಗತಿ ಮಕ್ಕಳಿಗೆ ಸಿಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ 56,00,000 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸೆಪ್ಟೆಂಬರ್ 25ರಿಂದ ಅಂದರೆ ಇಂದಿನಿಂದ 6 ದಿನ ಮೊಟ್ಟೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

Good News for Government School Students in state 6 day eggs distribution start from today

ಯೋಜನೆಗೆ ಚಾಲನೆ ನೀಡಿದ ಶಿಕ್ಷಣ ಸಚಿವರು: ಯಾದಗಿರಿ ಜಿಲ್ಲೆ ಅರಕೇರಾ ಕೆ.ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡುವ ಮೂಲಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಯೋಜನೆಗೆ ಚಾಲನೆ ನೀಡಿದರು.

ಅಜೀಂ ಪ್ರೇಮ್‌ಜಿ ಫೌಂಡೇಷನ್ ಜೊತೆ ಒಪ್ಪಂದ: ಸರ್ಕಾರ ಎರಡು ದಿನ ಮೊಟ್ಟೆ ಪೂರೈಸಲಿದೆ. ಇನ್ನು ಉಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಕೊಡಲಿದೆ. ಮೂರು ವರ್ಷ ಮೊಟ್ಟೆ ನೀಡಲು 1,500 ಕೋಟಿ ನೆರವು ನೀಡಲು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ನಡುವೆ ಜುಲೈನಲ್ಲಿ ಒಪ್ಪಂದ ಆಗಿತ್ತು. ಇದೀಗ ಈ ಯೋಜನೆ ಜಾರಿಗೆ ಬಂದಿದೆ.

ಪೂರಕ ಪೌಷ್ಟಿಕ ಆಹಾರ, ಬಿಸಿಹಾಲು, ಮೊಟ್ಟೆ ಬಾಳೆಹಣು ಹಾಗೂ ರಾಗಿ ಮಾಲ್ಟ್ ವಿತರಣೆ ಮಾಡುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮುನ್ನಡೆಸಿಕೊಂಡು ಬರುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಜೀಂ ಪ್ರೇಮ್‌ಜಿ ಪೌಂಡೇಶನ್ ಅವರ ಸಹಯೋಗದಲ್ಲಿ ವಾರದ 6 ದಿನಗಳ ಕಾಲ ಮೊಟ್ಟೆ ವಿತರಿಸುವ ಕಾರ್ಯಕ್ರಮವನ್ನು ಜುಲೈ 20, 2024ರಂದು ಉದ್ಘಾಟಣೆ ಮಾಡಲಾಗಿತ್ತು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಸೆಪ್ಟೆಂಬರ್‌ 25ಕ್ಕೆ ಅಂದರೆ ಇಂದು.

ಇಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮತ್ತು ಎಲ್ಲಾ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ವತಿಯಿಂದ ವಾರದ ಉಳಿದ 6 ದಿನಗಳ ಕಾಲ ಮೊಟ್ಟೆ ವಿತರಣೆಯನ್ನು ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+