Good News: 6 ತಿಂಗಳ ಬಳಿಕ ಬೆಂಗಳೂರು-ಮಂಗಳೂರು-ಕಾರವಾರ ಕರಾವಳಿ ರೈಲು ಸೇವೆ ಪುನಾರಂಭ
Bengaluru-Coastal Train Service Updates: ರಾಜಧಾನಿ ಬೆಂಗಳೂರು-ಕರಾವಳಿ ರೈಲು ಸಂಪರ್ಕ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಇದೀಗ ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆ ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಕರಾವಳಿಗೆ ಸಂಚಾರ ಮಾಡುವ ವಿವಿಧ ರೈಲುಗಳಲ್ಲಿ ಒಂದಾದ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು (16575/16576) ಸೇವೆ ಮತ್ತೆ ಶುರುವಾಗಿದ್ದಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೊದಲಿನಂತೆ ಬೆಂಗಳೂರಿನ ಯಶವಂತಪುರದಿಂದ ಈ ರೈಲು ಸಂಚಾರ ಸೇವೆ ಆರಂಭಿಸಲಿದೆ. ವಾರದಲ್ಲಿ ಮೂರು ದಿನ ಸೇವೆ ಪಡೆಯಬಹುದಾಗಿದೆ. ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸೇವೆಯನ್ನು ನವೆಂಬರ್ವರೆಗೆ ಆರು ತಿಂಗಳ ಕಾಲ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಸೇವೆ ಪುನಾರಂಭಿಸುವ ಮೂಲಕ ನೈಋತ್ಯ ರೈಲ್ವೆ ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ: ವಿಸ್ಟಾಡೋಮ್ ಕೋಚ್
ಪ್ರವಾಸೋದ್ಯಮಕ್ಕೆ ಉತ್ತೇಜಿಸುವ ಉದ್ದೇಶದಿಂದ ಪ್ರಯಾಣಿಕರು ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಈ ಗೊಮ್ಮಟೇಶ್ವರ ರೈಲಿಗೂ ವಿಸ್ಟಾಡೋಮ್ ಕೋಚ್ ಅಳವಡಿಸಿದೆ. ಅಗಲ ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣೆ, ವ್ಯವಸ್ಥಿತ ಆಸನಗಳಲಿದ್ದವು. ಇದರಿಂದ ಹಾಸನ, ಸಂಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಮಂಗಳೂರು ಮಾರ್ಗದುದ್ದಕ್ಕೂ ಕಾಣುವ ಪ್ರಕೃತಿಯನ್ನು ಸವಿಯಬಹುದಾಗಿತ್ತು. ಪ್ರವಾಸಿಗರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಆದರೆ ಈ ರೈಲಿನ ರದ್ದತಿಯಿಂದ ಪ್ರಯಾಣಿಕರಿಗೆ ಒಂದಷ್ಟು ನಿರಾಸೆಯಾಗಿತ್ತು.
ಗೊಮ್ಮಟೇಶ್ವರ ರೈಲು ಮಾರ್ಗ, ನಿಲುಗಡೆ ನಿಲ್ದಾಣಗಳು
ಯವಂತಪುರದಿಂದ ಈ ರೈಲು ವಾರದಲ್ಲಿ ರವಿವಾರ, ಮಂಗಳವಾರ ಮತ್ತು ಗುರುವಾರ ಹೀಗೆ ಮೂರು ದಿನ ಪ್ರಯಾಣ ಮಾಡುತ್ತದೆ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟವಾಳ ಮೂಲಕ ಮಂಗಳೂರಿಗೆ ಹೋಗುತ್ತದೆ. ರೈಲು ಶ್ರವಣಬೆಳಗೊಳ (ಗೊಮ್ಮಟೇಶ್ವರನಿಗೆ), ಹಾಸನ ಮತ್ತು ಸಕಲೇಶಪುರದಲ್ಲಿ ಹೆಚ್ಚು ಕಾಲ ನಿಲ್ಲುತ್ತದೆ. ಈ ರೈಲನ್ನು ಮುಂದಿನ ಕೆಲವು ನಿಲ್ದಾಣಗಳವರೆಗೆ ವಿಸ್ತರಣೆಗೆ ಕರಾವಳಿ ಜನರು ಆಗ್ರಹಿಸಿದ್ದಾರೆ.
ರೈಲು ಟಿಕೆಟ್ ಬುಕ್ಕಿಂಗ್ ಆರಂಭ
ಗೊಮ್ಮಟೇಶ್ವರ ರೈಲು ಸೇವೆ ಪುನಾರಂಭಗೊಳ್ಳುತ್ತಿದ್ದಂತೆ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಲಿದೆ. ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ https://www.indianrail.gov.in ಭೇಟಿ ನೀಡಬೇಕು. ರೈಲಿನ ಸೇವೆ ಬಗ್ಗೆ ಮಾಹಿತಿ, ಟಿಕೆಟ್, ಮಾರ್ಗ ಇತರ ಮಾಹಿತಿಗಾಗಿ ಸಹಾಯವಾಣಿ 139ಕ್ಕೆ ಕರೆ ಮಾಡುವಂತೆ ಕೋರಲಾಗಿದೆ.
-
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications