ಶಾಲೆ ಆರಂಭವಾದ ಆರು ತಿಂಗಳ ಬಳಿಕ ಮಕ್ಕಳಿಗೆ ಸೈಕಲ್ ಭಾಗ್ಯ

ಬೆಂಗಳೂರು, ಸೆಪ್ಟೆಂಬರ್ 19: ಶಾಲೆಗಳು ಆರಂಭವಾಗಿ ಇದೀಗ ಅರ್ಧ ವರ್ಷ ಪೂರೈಸುತ್ತಿದೆ, ಅರ್ಧ ವಾರ್ಷಿಕ ಪರೀಕ್ಷೆಯೂ ಸಮೀಪಿಸುತ್ತಿದೆ ಇದೀಗ ಸರ್ಕಾರ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಮುಂದಾಗಿದೆ.

ರಾಜ್ಯದ ಹಲವು ಶಾಲೆಗಳಲ್ಲಿ ಇನ್ನುವರೆಗೂ ಎರಡನೇ ಹಂತದ ಸಮವಸ್ತ್ರವೇ ದೊರೆತಿಲ್ಲ. ಇದೀಗ ಎಂಟನೇ ತರಗತಿ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆಯೂ ನೆಲಕಚ್ಚುವಂತೆ ಗೋಚರಿಸುತ್ತಿದೆ. ಈಗ ಬರಲಿರುವ ಅಕ್ಟೋಬರ್ ರಜೆಯಲ್ಲಿ ಮಕ್ಕಳಿಗೆ ಸೈಕಲ್ ವಿತರಿಸಲು ಸರ್ಕಾರ ಮುಂದಾಗಿದೆ.

ಗ್ರಾಮೀಣ ಮಕ್ಕಳ ಕಲಿಕೆಗೆ ಪೂರಕವಾಗಿ ಸೌಲಭ್ಯ ಕಲ್ಪಿಸಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸುವ ಯೋಜನೆ 2006-2007ರಲ್ಲಿ ಜಾರಿಗೆ ಬಂದಿತ್ತು.

Five lakhs students will get bicycles in October

ಕಳೆದ ವರ್ಷದಿಂದ ಸೈಕಲ್ ಗಳ ತಯಾರಿಕಾ ಹಂತ ಮತ್ತು ವಿತರಣೆಯ ನಂತರವೂ ಗುಣಮಟ್ಟ ಪರಿಶೀಲನೆ ಕೈಗೆತ್ತಿಕೊಳ್ಳಲಾಗುತ್ತಿದೆ. ತಯಾರಿಕಾ ಹಂತದಲ್ಲಿ ಸಂಸ್ಥೆಗಳ ಉತ್ಪಾದನಾ ಘಟಕಗಳಿಂದ ಪ್ರತಿ 100 ಸೈಕಲ್ ಗಳಿಗೆ ಒಂದರಂತೆ ದೃಖ್ ಪರಿಶೀಲನೆ ಮಾಡಲು ವಿಭಾಗೀಯ ಹಂತದಲ್ಲಿ ವಿಭಾಗೀಯ ಸಹ ನಿರ್ದೇಶಕರು, ಜಿಲ್ಲಾ ಉಪ ನಿರ್ದೇಶಕರು ಹಾಗೂ ಜಿಲ್ಲಾ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿದೆ.

ಈ ತಂಡಗಳು ತಾಲೂಕು ಮತ್ತು ಬ್ಲಾಕ್ ಗಳಲ್ಲಿ ಬೈಸಿಕಲ್ ಗಳ ಬಿಡಿ ಭಾಗಗಳ ಜೋಡಣಾ ಸಮಯದಲ್ಲಿ ಬಳಕೆಗೆ ಯೋಗ್ಯವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರ ರಾಜ್ಯದ ನಾಲ್ಕು ಶೈಕ್ಷಣಿಕ ವಿಭಾಗಗಳಲ್ಲಿ ಪ್ರತಿ ವಿಭಾಗದಿಂದ ತಲಾ 10 ಬೈಸಿಕಲ್ ಗಳನ್ನು ಪಡೆದು ಲೂಧಿಯಾನದ ಆರ್ ಅಂಡ್ ಡಿ ಸೆಂಟರ್ ಕಳುಹಿಸಿ ಪರೀಕ್ಷಿಸಲಾಗುತ್ತದೆ. ನಂತರ ಮಕ್ಕಳಿಗೆ ವಿತರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+