ಗ್ರಾಮ ಪಂಚಾಯಿತಿ ಚುನಾವಣೆ: ಎಲ್ಲೆಲ್ಲಿ ಎಷ್ಟು ಮತದಾನ? ಇಲ್ಲಿದೆ ಸಂಪೂರ್ಣ ಮಾಹಿತಿ!
ಬೆಂಗಳೂರು, ಡಿ. 23: ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರಾಮೀಣ ಭಾಗದ ಮತದಾರರು ಭರ್ಜರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರೇ ನಿಜವಾದ ಪ್ರಜಾಫ್ರಭುತ್ವದ ಪಾಲಕರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ (ಡಿಸೆಂಬರ್ 22) ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸರಾಸರಿ ಶೇಕಡಾ 84.3ರಷ್ಟು ಮತದಾನವಾಗಿದೆ. ಹೆಚ್ಚು ಮತದಾನ ಮಾಡುವ ಮೂಲಕ ರಾಜ್ಯ ಚುನಾವಣಾ ಆಯೋಗದ ಪ್ರಯತ್ನಕ್ಕೆ ಗ್ರಾಮೀಣ ಮತದಾರರು ಸ್ಪಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನ (ಶೇಕಡಾ 92.35) ವಾಗಿದ್ದು, ಅತಿ ಕಡಿಮೆ ಮತದಾನ ಯಾದಗಿರಿ ಜಿಲ್ಲೆಯಲ್ಲಿ (ಶೇಕಡಾ 74.04) ಆಗಿದೆ. ಒಟ್ಟು 30 ಜಿಲ್ಲೆಗಳ 114 ತಾಲೂಕುಗಳ 3,014 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆದಿತ್ತು. ಜಿಲ್ಲಾವಾರು ಮತದಾನದ ವಿವರ ಹೀಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ
Recommended Video
ಕಾಲೇಜು ಶುರು ಆಗತ್ತೆ ಆದ್ರೆ ಪರೀಕ್ಷೆ ಇರಲ್ಲ ! | SSLC | PUC | Oneindia Kannada













Click it and Unblock the Notifications