Get Updates
Get notified of breaking news, exclusive insights, and must-see stories!

Father's Day: ನಿಮ್ಮ ತಂದೆಯನ್ನು ಸಂತೋಷಪಡಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌!

ಎಲ್ಲಾ ಮಕ್ಕಳ ಸೂಪರ್‌ ಹೀರೋ ತಂದೆ. ತಂದೆ ಎನ್ನುವ ಜೀವ ನಮ್ಮ ಜೀವನದ ಆಧಾರ ಸ್ತಂಭ. ಜೀವನದಲ್ಲಿ ಎಡವಿದಾಗ, ಸವಾಲುಗಳನ್ನು ಎದುರಿಸುವಾಗ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುವ ಗುರು ತಂದೆ. ನಮ್ಮ ಜೀವನ ವಿಶೇಷ ವ್ಯಕ್ತಿ ತಂದೆಗಾಗಿ ಈ ದಿನ. ಜೂನ್‌ 18 ಇಂದು ತಂದೆಯಂದಿರ ದಿನ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ನಿಮ್ಮ ಜೀವನದ ವಿಶೇಷ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡಿ.

ಸಾಮಾನ್ಯವಾಗಿ ನಿಮ್ಮ ತಂದೆಯ ಅಭಿರುಚಿಯ ಬಗ್ಗೆ ನಿಮಗೆ ತಿಳಿದಿರುತ್ತದೆ. ಅವರ ಇಷ್ಟದ ಬಣ್ಣ, ಪ್ರಿಯವಾದ ಊಟ, ತಿಂಡಿ, ಅವರಿಗೆ ಖುಷಿ ಕೊಡುವ ಸ್ಥಳಗಳು ಹೀಗೆ ಅನೇಕ ವಿಚಾರಗಳು ನಿಮಗೆ ತಿಳಿದಿರುತ್ತದೆ. ಹೀಗಾಗಿ ತಂದೆಯಂದಿರ ದಿನಕ್ಕೆ ಅವರಿಗೆ ಇಷ್ಟವಾದ ಕೆಲಸಗಳನ್ನು ಮಾಡಿ ಖುಷಿ ಪಡಿಸಿ. ತಂದೆ-ತಾಯಿಯನ್ನು ಪ್ರತಿ ನಿತ್ಯ ಖುಷಿಯಲ್ಲಿರಿಸುವುದು ನಮ್ಮ ಕರ್ತವ್ಯ. ಆದರೆ ಈ ದಿನ ನಿಮ್ಮ ತಂದೆಗಾಗಿ ನೀವು ಏನು ಮಾಡಬಹುದು ಎನ್ನುವುದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Fathers Day 2023: Here Is The Some Best Gifts For Your Dad

ಮನೆಗೆ ಸಪ್ರೈಸ್‌ ಭೇಟಿ!

ವಿದ್ಯಾಭ್ಯಾಸಕ್ಕಾಗಿಯೋ ಅಥವಾ ಉದ್ಯೋಗದ ನಿಮಿತ್ತವೋ ನೀವು ನಿಮ್ಮ ಮನೆಯಿಂದ ದೂರವಿದ್ದು, ಹಾಸ್ಟೆಲ್‌ ಅಥವಾ ಪಿಜಿಯಲ್ಲಿದ್ದರೆ. ನಿಮ್ಮ ತಂದೆಗೆ ತಿಳಿಸಿದೇ ಮನೆಗೆ ಸಪ್ರೈಸ್‌ ಭೇಟಿ ನೀಡಿ. ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದ ಅವರಿಗೆ ಇದಕ್ಕಿಂತ ಬೆಸ್ಟ್‌ ಗಿಫ್ಟ್‌ ಇನ್ನೊಂದಿಲ್ಲ. ನಿಮ್ಮ ತಂದೆಯೊಡನೆ ಸಮಯ ಕಳೆದು ಅನೇಕ ವಿಚಾರಗಳ ಬಗ್ಗೆ ಕುಳಿತು ಮಾತನಾಡಿ. ಅವರಿಗೆ ನಿಮ್ಮ ಆಗಮನವೇ ಅತ್ಯಮೂಲ್ಯ ಉಡುಗೊರೆಯಾಗಿರುತ್ತದೆ.

ಇಷ್ಟವಾದ ಅಡುಗೆ ಮಾಡಿ!

ನಿಮ್ಮ ತಂದೆಯ ಅಭಿರುಚಿಯ ಬಗ್ಗೆ ಸಾಮಾನ್ಯವಾಗಿ ನಿಮಗೆ ತಿಳಿದಿರುತ್ತದೆ. ಅವರಿಗೆ ಯಾವ ರೀತಿಯ ಅಡುಗೆ ಇಷ್ಟ, ಯಾವ ತಿಂಡಿ ಇಷ್ಟ ಎಂದು ತಿಳಿದಿರುತ್ತದೆ. ಹೀಗಾಗಿ ತಂದೆಯಂದಿರ ದಿನದ ವಿಶೇಷವಾಗಿ ನಿಮ್ಮ ತಂದೆಗೆ ಇಷ್ಟವಾದ ಅಡುಗೆ ನೀವೇ ಸ್ವತಃ ಬಡಿಸಿ. ನಿಮ್ಮ ತಂದೆಯೊಂದಿಗೆ ಕುಳಿತು ಅವರಿಷ್ಟದ ಊಟವನ್ನು ಜೊತೆಯಾಗಿ ಸವಿಯಿರಿ. ಜೊತೆಗೆ ಅವರಿಗೆ ಇಷ್ಟವಾದ ಸಿಹಿ ತಿನಿಸುಗಳನ್ನು ಸಹ ನೀಡಿ.

ಇಷ್ಟವಾದ ಸ್ಥಳಗಳಲ್ಲಿ ಸಮಯ ಕಳೆಯಿರಿ!

ತಂದೆಯಂದಿರ ದಿನದ ವಿಶೇಷವಾಗಿ ನಿಮ್ಮ ತಂದೆಯನ್ನು ಅವರಿಷ್ಟದ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ. ಒಂದೊಳ್ಳೆ ಟ್ರಿಪ್‌ ಪ್ಲಾನ್‌ ಮಾಡಿ ಅವರನ್ನು ಕರೆದುಕೊಂಡು ಹೋಗಿ. ಹೊಸ ಸ್ಥಳಗಳು ಅಥವಾ ನೆಚ್ಚಿನ ಸ್ಥಳಗಳು ಅತೀವ ಖುಷಿಕೊಡುತ್ತದೆ. ದೇವಸ್ಥಾನ, ಸಮುದ್ರ ಪ್ರದೇಶಗಳು, ಈಗಿನ ಟ್ರೆಂಡ್‌ಗೆ ತಕ್ಕಂತೆ ರೆಸಾರ್ಟ್‌ಗಳು, ಒಳ್ಳೆಯ ಹೋಟೆಲ್‌ಗಳು ಹಾಗೂ ನಿಮ್ಮ ತಂದೆಯ ಬಾಲ್ಯದ ದಿನಗಳನ್ನು ಕಳೆದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಬಹುದು.

Fathers Day 2023: Here Is The Some Best Gifts For Your Dad

ಒಂದೊಳ್ಳೆ ಪುಸ್ತಕ ನೀಡಿ!

ಒಂದು ಉತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತನಿಗಿಂತ ಉತ್ತಮ ಎನ್ನುವ ಮಾತಿದೆ. ಹೀಗಾಗಿ ನಿಮ್ಮ ತಂದೆಗೆ ಓದು ಅಭ್ಯಾಸವಿದ್ದರೆ. ಒಂದೊಳ್ಳೆ ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಿ. ಜೊತೆಗೆ ಕೆಲವರಿಗೆ ಚಿತ್ರ ಬಿಡಿಸುವುದು, ಕರ ಕುಶಲ ಕಲೆಗಳ ಬಗ್ಗೆ ಅತೀವ ಆಸಕ್ತಿ ಇರುತ್ತದೆ. ಹೀಗಾಗಿ ಅವರ ಬಿಡುವಿನ ವೇಳೆಯನ್ನು ಉತ್ತಮವಾಗಿ ಕಳೆಯಲು ಅವರಿಗೆ ಅಗತ್ಯವಾಗಿರುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.

ಸ್ಮಾರ್ಟ್ ಪೋನ್‌ ಉಡುಗೊರೆ!

ಸಾಮಾನ್ಯವಾಗಿ ತಂದೆ ಮಕ್ಕಳಿಗೆ ಹೊಸ ಮಾಡೆಲ್‌ ಟ್ರೆಂಡ್‌ಗೆ ತಕ್ಕಂತೆ ಮೊಬೈಲ್‌ ಫೋನ್‌ಗಳನ್ನು ಕೊಡಿಸುತ್ತಾರೆ. ಆದರೆ ತಮಗೆ ಮಕ್ಕಳ ಹಳೆಯ ಫೋನ್‌ ಅಥವಾ ಯಾವುದೋ ಹಳೆಯ ಮೊಬೈಲ್‌ ಫೋನ್‌ಗಳನ್ನು ಬಳಸುತ್ತಿರುತ್ತಾರೆ. ಹೀಗಾಗಿ ಅವರಿಗೆ ಸ್ಮಾರ್ಟ್‌ ಫೋನ್‌ವೊಂದನ್ನು ಉಡುಗೊರೆಯಾಗಿ ನೀಡಿ. ಅದರಿಂದ ಅವರಿಗೆ ಖುಷಿಯಾಗಬಹುದು.

ಶಾಂಪಿಂಗ್‌ಗೆ ಕರೆದುಕೊಂಡು ಹೋಗಿ!

ನಿಮ್ಮ ತಂದೆಗೆ ನೀವು ನೀವೇ ಉಡುಗೊರೆಗಳನ್ನು ಆರಿಸಿ ತರುವುದಕ್ಕಿಂತ, ಅವರಿಷ್ಟದ ವಸ್ತುಗಳನ್ನು ತೆಗೆದುಕೊಳ್ಳಲು ಅವರನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ತಂದೆಯೊಂದಿಗೆ ಸಮಯ ಕಳೆದಂತಾಗುತ್ತದೆ ಜೊತೆಗೆ ಅವರಿಷ್ಟದ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಜೊತೆಗೆ ಅವರಿಗೆ ಕೊಂಡುಕೊಳ್ಳುವ ವಸ್ತುಗಳ ಬಗ್ಗೆ ಸಲಹೆ ನೀಡಿ.

Fathers Day 2023: Here Is The Some Best Gifts For Your Dad

ಗ್ರೀಟಿಂಗ್‌ ಕಾರ್ಡ್‌ಗಳನ್ನು ನೀಡಿ !

ನೀವು ನೀಡುವ ಪ್ರತಿ ಉಡುಗೊರೆಯು ಕೂಡ ನಿಮ್ಮ ತಂದೆಗೆ ಅತ್ಯಮೂಲ್ಯವಾದುದು. ಹೀಗಾಗಿ ನಿಮ್ಮ ತಂದೆಗೆ ನೀವು ಒಂದೊಳ್ಳೆ ಗ್ರೀಟಿಂಗ್‌ ಕಾರ್ಡ್‌ ರಚಿಸಿ ನೀಡಬಹುದು. ಜೊತೆಗೆ ಒಂದೊಳ್ಳೆ ಕೋಟ್‌ ಬರೆದು ನೀವು ಅವರೊಂದಿಗೆ ಕಳೆದ ಅಮೂಲ್ಯವಾದ ವಿಚಾರಗಳ್ನನು ಬರೆದು ನೀಡಿ. ಇದು ಅವರನ್ನು ಖುಷಿಯಾಗಿಸಬಹುದು. ಒಂದು ವೇಳೆ ನಿಮ್ಮ ತಂದೆ ಭಾವನಾತ್ಮಕ ಜೀವಿಯಾದರೆ ಅವರು ಕಣ್ತುಂಬಿಕೊಳ್ಳುವ ಸಾಧ್ಯತೆ ಕೂಡ ಇದೆ.

ಫೋಟೋಗಳ ಸಂಗ್ರಹವನ್ನು ನೀಡಿ !

ನಿಮ್ಮ ಹಾಗೂ ನಿಮ್ಮ ತಂದೆ ಜೊತೆಯಾಗಿ ಕಳೆದ ಕ್ಷಣಗಳ ಫೋಟೋ ಸೆರೆಹಿಡಿದಿರಬಹುದು. ಅವುಗಳನ್ನು ಒಗ್ಗೂಡಿಸಿ ಫೋಟೋ ಅಲ್ಬಾಮ್‌ಗಳನ್ನು ನೀಡಿ. ಈ ಫೋಟೋಗಳ ಜೊತೆಗೆ ಅವುಗಳನ್ನು ತೆಗೆದ ಸಮಯ ಹಾಗೂ ಸ್ಥಳಗಳನ್ನು ನಮೂದಿಸಿದರೆ ಮತ್ತಷ್ಟು ಉತ್ತಮ. ಇದರಿಂದ ನಿಮಗೂ ನಿಮ್ಮ ತಂದೆಗೂ ಇದೊಂದು ಸ್ವೀಟ್‌ ಮೆಮೊರಿಯಾಗಿರುತ್ತದೆ.

ತಂದೆಗೆ ನೀಡಬಹುದಾಗ ಉಡುಗೊರೆಗಳು!

ತಂದೆಯಂದಿರ ದಿನಕ್ಕೆ ನೀವು ನಿಮ್ಮ ತಂದೆಗೆ ನೀಡಬುದುದಾಗ ಸುಲಭವಾದ ಉಡುಗೊರೆಗಳಿವು. ಶರ್ಟ್‌, ಸನ್‌ಗ್ಲಾಸ್‌, ಇಯರ್‌ ಬಡ್ಸ್‌, ರಿಂಗ್‌, ಪರ್ಸ್‌, ವಾಚ್‌, ಶೂ, ಚಾಕಲೇಟ್‌ ಕಿಟ್‌ ಸೇರಿದಂತೆ ಇತರ ವಸ್ತುಗಳನ್ನು ನೀವು ನಿಮ್ಮ ತಂದೆಗೆ ನೀಡಬಹುದು.

ನಿಮ್ಮ ಪೋಷಕರಿಗೆ ಸಮಯ ಕೊಡಿ !

ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತಮ್ಮ ಬ್ಯುಸಿ ಜೀವನದಲ್ಲಿ ಪೋಷಕರಿಗೆ ಸಮಯ ಕೊಡುವುದೇ ಅತ್ಯಮೂಲ್ಯವಾದ ಉಡುಗೊರೆಯಾಗಿದೆ. ನಿಮ್ಮ ಪೋಷಕರೊಂದಿಗೆ ಕುಳಿತು ಆಹಾರ ಸೇವಿಸುವುದು, ಅವರೊಂದಿಗೆ ಉತ್ತಮವಾದ ಸಿನಿಮಾ ನೋಡುವುದು, ವಾಕಿಂಗ್‌ ಹೋಗುವುದು, ಮನೆಯಲ್ಲೇ ಆಡಬಹುದಾದ ಆಟಗಳನ್ನು ಆಡುವುದು, ಹೀಗೆ ಚಿಕ್ಕ ಚಿಕ್ಕ ವಿಚಾರಗಳಲ್ಲಿ ಸಮಯ ನೀಡುವ ಮೂಲಕ ನಿಮ್ಮ ತಂದೆ-ತಾಯಿಗಳನ್ನು ಸಂತೋಷವಾಗಿಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+