ಅಕ್ರಮ ತಡೆ: ಸಕಾಲ ವ್ಯಾಪ್ತಿಗೆ ಇನ್ನು ಅಬಕಾರಿ ಇಲಾಖೆ
ಬೆಂಗಳೂರು, ನವೆಂಬರ್ 19: ಅಬಕಾರಿ ಇಲಾಖೆಯಲ್ಲಿನ ಅಕ್ರಮ ತಡೆಗಟ್ಟಲು ಇಲಾಖೆಯನ್ನು ಸಕಾಲದಡಿ ತರಲಾಗಿದೆ. ಆನ್‌ಲೈನ್ ಮದ್ಯದಂಗಡಿ ಪರವಾನಗಿ ನವೀಕರಣ ಯೋಜನೆ ಜಾರಿಗೆ ಬಂದ ಬಳಿ ಈಗ ವಿವಿಧ ಸೇವೆಗಳನ್ನು ಸಕಾಲದಡಿ ಜಾರಿಗೆ ತರಲಾಗಿದೆ. ಆನ್‌ಲೈನ್ ಮದ್ಯ ಮಾರಾಟ ನಿಷೇಧಿಸುವ ಕುರಿತು ಚಿಂತನೆ ನಡೆದಿದೆ.
ಇಲಾಖೆಯ ಸೇವೆಗಳನ್ನು ಪಡೆಯಲು ಸಾಕಷ್ಟು ಬಾರಿ ಅಲೆದಾಡಿದ್ದರೂ ಲಂಚ ನೀಡದಿದ್ದರೆ ಕೆಲಸಗಳು ಆಗುತ್ತಿರಲಿಲ್ಲ, ಅಬಕಾರಿ ಇಲಾಖೆಯನ್ನು ಈಗ ಸಕಾಲ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಮಗೆ ತುಂಬ ಅನುಕೂಲವಾಗಿದೆ ಲಂಚದ ಕಾಟ ಇಲ್ಲವಾಗಿದೆ ಎಂದು ಬರ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಡಿಸ್ಟಲರಿ, ಬ್ರೆವರಿ, ಮೈಕ್ರೋಬ್ರೆವರಿ ಮತ್ತು ವೈನರಿ ಸನ್ನದುಗಳ ನವೀಕರಣ ಹಾಗೂ ವರ್ಗಾವಣೆ, ಮದ್ಯಸಾರ ಆಮದಿಗೆ, ರಫ್ತಿಗೆ ನಿರಾಪೇಕ್ಷಣ ಪತ್ರ, ಮದ್ಯ ರಫ್ತು, ಸಹಮತಿ ಪತ್ರ, ಸ್ಥಳೀಯ ಲೇಬಲ್ ಅನುಮೋದನೆ ಡಿಪಿ , ಎಂಆರ್‌ಪಿ ಮತ್ತು ಆರ್‌ಎಂಆರ್‌ಪಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಅನುಮೋದನೆ ಸೇವೆಗಳು ಲಭ್ಯವಾಗಲಿದೆ.

ಅಷ್ಟೇ ಅಲ್ಲದೆ ಅಂತಾರಾಜ್ಯ ಕಾಕಂಬಿ ಎತ್ತುವಳಿ ನಿರಾಪೇಕ್ಷಣ ಪ್ರಮಾಣ ಪತ್ರ, ರಾಜ್ಯ ಪಾನೀಯ ಇಗಮ ನಿಯಮಿತದಿಂದ ಸ್ವೀಕೃತವಾದ ಹೊರ ದೇಶದ ಲೇಬಲ್ ಅನುಮೋದನೆ, ಪ್ರಾಥಮಿಕ ಡಿಸ್ಟಲರಿ, ಮದ್ಯ ಉತ್ಪಾದನಾ ಡಿಸ್ಟಲರಿ, ವೈನರಿಗಳಿಗೆ ಮದ್ಯಸಾರ ಹಂಚಿಕೆ, ನೀಲಿನಕ್ಷ ಅನುಮೋದನೆ, ವಿಶೇಷ ಸಾಂದರ್ಭಿಕ ಸನ್ನದುಗಳ ಮಂಜೂರಾತಿ ಸೇರಿದಂತೆ 38 ಸೇವೆಗಳು ಲಭ್ಯವಾಗಲಿವೆ.












Click it and Unblock the Notifications