ಸೇನೆಯಲ್ಲಿರುವ ಮತದಾರರಿಗೆ ವಿಶೇಷ ಸವಲತ್ತು ?

ಬೆಂಗಳೂರು, ಮೇ 10: ದೇಶದ ಬೇರೆ ಬೇರೆ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ 28,622 ಸೈನಿಕರಿಗೆ ಸುಲಭವಾಗಿ ಮತದಾನ ಮಾಡಲು ಸಾಧ್ಯವಾಗುವಂತೆ ಚುನಾವಣಾ ಆಯೋಗ ವಿದ್ಯುನ್ಮಾನ ಪ್ರಸರಿತ ಅಂಚೆ ವ್ಯವಸ್ಥೆ ಕಲ್ಪಿಸಿದೆ.

ಸೈನಿಕರಿಗೆ ಮತ ಚಲಾಯಿಸುವುದು ಅಸಾಧ್ಯವಾಗಿತ್ತು. ಇದೀಗ ಈ ಕೆಲಸ ಸುಲಭಗೊಳಿಸಲಾಗಿದೆ. ಇಟಿಬಿಪಿ ಮೂಲಕ ಮತಪತ್ರ ಕಳುಹಿಸಲಾಗುತ್ತದೆ. ಮತಹಕ್ಕು ಹೊಂದಿರುವ ಸೈನಿಕರು ಅದನ್ನು ಡೌನ್‌ಲೋಡ್ ಮಾಡಿಕೊಂಡು ಮತ ಚಲಾಯಿಸಿ ವಿಭಾಗದ ಮುಖ್ಯಸ್ಥರ ಸನುಮೋದನೆಯೊಂದಿಗೆ ಅಂಚೆ ಮೂಲಕ ಕಳುಹಿಸಬಹುದು. ಇದರಿಂದ ಈ ಪ್ರಕ್ರಿಯೆಗೆ ಬೇಕಾಗುತ್ತಿದ್ದ ಸಮಯ ಉಳಿತಾಯವಾಗಲಿದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ 27,988 ಪುರುಷ, 364 ಮಹಿಳಾ ಮತದಾರರಿದ್ದಾರೆ. ಪೊಲೀಸ್‌, ಅರೆ ಸೇನಾ ಸಿಬ್ಬಂದಿ, ಚುನಾವಣಾ ಸಿಬ್ಬಂದಿ ಸೇರಿ 5 ಲಕ್ಷ ಅಂಚೆ ಮತದಾರರಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ 600 ಸಖಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ETBPS voting facility for 28k army personnel

ಈ ಮತಗಟ್ಟೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಂಗಳೂರಿನಲ್ಲಿ 100, ಬೆಳಗಾವಿ 50, ಚಿಕ್ಕೋಡಿ ಹಾಗೂ ಬೀದರ್‌ನಲ್ಲಿ ತಲಾ 30 ಪಿಂಕ್ ಮತಗಟ್ಟೆಗಳಿರಲಿವೆ.

3500 ವೆಬ್‌ ಕಾಸ್ಟಿಂಗ್ ಮತಗಟ್ಟೆ: ರಾಜ್ಯದಲ್ಲಿ 12,೦೦1 ಗಂಭೀರ ಮತಗಟ್ಟೆಗಳನ್ನು ಗುರುತಿಸಲಾಗಿದೆ, ಈ ಮತಗಟ್ಟೆಗಳಿಗೆ ಪೊಲೀಸ್, ಅರೆ ಸೇನಾ ಪಡೆ, ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+