ರಾಜ್ಯ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ಬಡ್ತಿ ಕುರಿತು ಮಹತ್ವದ ಮಾಹಿತಿ
ಕರ್ನಾಟಕ, ಏಪ್ರಿಲ್, 9: ರಾಜ್ಯದಲ್ಲಿ ಇತ್ತೀಚೆಗಷ್ಟೇ ಪರೀಕ್ಷೆಗಳು ಮುಗಿದಿದೆ. ಮತ್ತೊಂದೆಡೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕೂಡ ಹೊರಬಿದ್ದಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಕರ ಬಡ್ತಿ ಕುರಿತು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಹಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ: 2025 ಮಾರ್ಚ್ 27ರ ಕರ್ನಾಟಕ ಸರ್ಕಾರದ ಅಧಿಸೂಚನೆಯ ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ಜಿಪಿಟಿ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ್-2 ಶಿಕ್ಷಕರಾಗಿ ಬಡ್ತಿ ನೀಡುವ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಮುಂಬಡ್ತಿ ನೀಡುವ ಕುರಿತು ಸ್ಪಷ್ಟಿಕರಣ: ಉಲ್ಲೇಖ1ರ ಸರ್ಕಾರದ ಅಧಿಸೂಚನೆಯ ಯನ್ವಯ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ ಜಿಪಿಟಿ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ್-2 ಶಿಕ್ಷಕರಾಗಿ ಮುಂಬಡ್ತಿ ನೀಡುವ ಕುರಿತು ಸ್ಪಷ್ಟಿಕರಣ ನೀಡಲಾಗಿದೆ.
ಈ ಅಧಿಸೂಚನೆಯನ್ನು ಅನುಷ್ಠಾನಗೊಳಿಸಲು ವಿಭಾಗದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರುಗಳು ಕಾರ್ಯ ಪ್ರವೃತ್ತರಾಗಬೇಕಿದೆ. ಅಲ್ಲದೆ, ಈ ಕೆಳಕಂಡ ನಿರ್ದೇಶನದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
* ಕಲ್ಯಾಣ ಕರ್ನಾಟಕದಲ್ಲಿ 2025 ಮಾರ್ಚ್ 10 ರಲ್ಲಿದಂತೆ, ಒಟ್ಟಾರೆ ಮಂಜೂರಾದ ಜಿಪಿಟಿ ಹುದ್ದೆಗಳು: 12609 ಇರುತ್ತದೆ. ಕಾರ್ಯ ನಿರ್ವಹಿಸುತ್ತಿರುವ ಜಿಪಿಟಿ ಶಿಕ್ಷಕರ ಸಂಖ್ಯೆ: 6977.
* ಕಲ್ಯಾಣ ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು ಮಂಜೂರಾದ ಹುದ್ದೆಗಳು: 27027 ಇರುತ್ತದೆ. ಇದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ: 18498 ಇರುತ್ತದೆ. ಅದರಲ್ಲಿ LC-DR 15376 RPC-DR 3,122 ಹುದ್ದೆಗಳಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
* ಕಲ್ಯಾಣ ಕರ್ನಾಟಕದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಲ್ಲಿ 2,256 LC-PR. 622 RPC-PR.
* ಈ ಖಾಲಿ ಹುದ್ದೆಗಳನ್ನು ಉಲ್ಲೇಖ(1)ರ ಅಧಿಸೂಚನೆ ಯಂತೆ 60:30:04:02:02:02 ಅನುಪಾತದಂತೆ ತುಂಬಬೇಕಾಗುತ್ತದೆ. ಇದರಲ್ಲಿ PST LC-PR 1354, GPT LC-PR 677 ಶಿಕ್ಷಕರಿಂದ ಹಾಗೂ ಇನ್ನುಳಿದಂತೆ ಚಿತ್ರಕಲೆ, ವೃತ್ತಿ ಶಿಕ್ಷಕರು, ಸಂಗೀತ ಮತ್ತು ನರ್ಸರಿ ಶಾಲಾ ಶಿಕ್ಷಕರುಗಳಿಂದ 225 ಹುದ್ದೆಗಳನ್ನು ತುಂಬಬೇಕು. ಸದರಿ ಖಾಲಿ ಹುದ್ದೆಗಳ ಜಿಲ್ಲಾವಾರು ಹಾಗೂ ವಿಷಯವಾರು ಮಾಹಿತಿಯನ್ನೊಳಗೊಂಡ ಪಟ್ಟಿ ಅನುಬಂಧ-1ರಂತೆ ಲಗತ್ತಿಸಿದೆ.
* 622 RPC-PR (1) ಅಧಿಸೂಚನೆಯಂತೆ 60:30:04:02:02:02 ಅನುಪಾತದಂತೆ ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ PST RPC-PR 374 GPT RPC-PR 186 ಶಿಕ್ಷಕರಿಂದ ಹಾಗೂ ಇನ್ನುಳಿದಂತೆ ಚಿತ್ರಕಲೆ, ವೃತ್ತಿ ಶಿಕ್ಷಕರು, ಸಂಗೀತ ಮತ್ತು ನರ್ಸರಿ ಶಾಲಾ, ಶಿಕ್ಷಕರುಗಳಿಂದ 62 ಹುದ್ದೆಗಳನ್ನು ತುಂಬಬೇಕು. ಸದರಿ ಖಾಲಿ ಹುದ್ದೆಗಳ ಜಿಲ್ಲಾವಾರು ಹಾಗೂ ವಿಷಯವಾರು ಮಾಹಿತಿಯನ್ನೊಳಗೊಂಡ ಪಟ್ಟಿ ಅನುಬಂಧ-1ರಂತೆ ಲಗತ್ತಿಸಿದೆ.
ಅಲ್ಲದೆ, ಬಡ್ತಿ ನೀಡಿ, ಕೌನ್ಸಿಲಿಂಗ್ ವೇಳೆ C ವಲಯ ಭರ್ತಿಯಾದ ನಂತರ ನಿಯಮಾನುಸಾರ ಕ್ರಮೇಣವಾಗಿ B ಹಾಗೂ A ವಲಯದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.












Click it and Unblock the Notifications