ECI: ಜ್ಞಾನೇಶ್ ಕುಮಾರ್ ಮೋದಿ ಸರ್ಕಾರದ ವಿರುದ್ಧ ಮಾಫಿ ಸಾಕ್ಷಿಯಾಗಲಿ: ಸಚಿವ ಕೆ.ಎಂ ಶಿವಲಿಂಗೇಗೌಡ

ECI: ಭಾರತೀಯ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ಮೋದಿ ಸರ್ಕಾರದ ವಿರುದ್ಧ ಮಾಫಿ ಸಾಕ್ಷಿಯಾದರೆ ತಾವು ಎಸಗಿದ ದೇಶದ್ರೋಹದ ಪ್ರಮಾಣದಲ್ಲಿ ಕೊಂಚ ತಗ್ಗಬಹುದು ಎಂದು ಕರ್ನಾಟಕದ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟದ ವತಿಯಿಂದ ನಡೆದ ಸುಪ್ರೀಂ ಕೋರ್ಟ್‌ ವರೆಗಿನ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಮತದಾನವೇ ಶ್ರೇಷ್ಠ. ಇಂತಹ ಸಾರ್ವಭೌಮತ್ವವನ್ನು ಹೊಂದಿರುವಂತಹ ಈ ನಾಡಿನಲ್ಲಿ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿದುಕೊಳ್ಳಲಾಗುತ್ತಿದೆ.

ECI Row Let Gyanesh Kumar Turn Approver Against Modi Government Says Minister K M Shivalingegowda

ಇಂತಹ ಒಂದು ಕೆಟ್ಟ ಪ್ರವೃತ್ತಿಗೆ ಇಂದಿನ ಬಿಜೆಪಿ ಸರ್ಕಾರ ಇಳಿದಿದೆ. ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿದೆ. ಪ್ರಜಾಪ್ರಭುತ್ವದ ನೆಲೆಗಟ್ಟನ್ನು ಸೃಷ್ಟಿ ಮಾಡುವ ಚುನಾವಣಾ ಆಯೋಗದ ಮುಖ್ಯಸ್ಥರನ್ನೇ ತಮ್ಮ ಬಲೆಗೆ ಹಾಕಿಕೊಂಡಿದೆ. ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿ ಸರ್ಕಾರ ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿರುವ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕರ್ನಾಟಕದಿಂದ ಮಾತ್ರ ಅಲ್ಲ, ಇಡೀ ದೇಶಾದ್ಯಂತ ದೊಡ್ಡ ಕೂಗು ಕೇಳಿಬರುತ್ತಿದೆ. ಕೇಂದ್ರ ಸರ್ಕಾರಕ್ಕೆ ಆತ್ಮಗೌರವ ಎಂಬುದು ಇದ್ದರೆ ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಬೇಕು. ಪ್ರಸ್ತುತ ಆಗಿರುವ ತಪ್ಪುಗಳನ್ನು ಸರಿಪಡಿಸಿ, ಪ್ರಜಾಪ್ರಭುತ್ವ ಶ್ರೇಯಸ್ಸಿಗೆ ಕಾರಣೀಭೂತರಾಗಬೇಕು. ಯಾರೂ ಇಂತಹ ಅಪವಿತ್ರ ರಾಜಕಾರಣವನ್ನ ಮಾಡಬಾರದು ಎಂದರು.

ಎಷ್ಟು ದಿನ ಬಂದ್ ಮಾಡಿ ಈ ಪ್ರಜಾಪ್ರಭುತ್ವ ವ್ಯವಸ್ಥೆನ ಹತ್ತಿಕ್ಕಲಿಕ್ಕೆ ಸಾಧ್ಯ? ಜನರ ಮನಸ್ಸನ್ನು ಕೆದಕಬಾರದು. ಜನರ ಮನಸ್ಸು ಕದಡಿದರೆ ಯಾರೂ ಈ ಪ್ರಜಾಪ್ರಭುತ್ವದಲ್ಲಿ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ರಮ ಚುನಾವಣೆ ಮೂಲಕ ಅಧಿಕಾರ ಹಿಡಿದಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ. ಬಿಜೆಪಿ ಜೊತೆ ಸೇರಿಕೊಂಡು ಜ್ಞಾನೇಶ್‌ ಕುಮಾರ್‌ ಎಸಗಿರುವ ಅನ್ಯಾಯ ಏನು ಎಂಬುದು ಜನರ ಮನಸ್ಸಿಗೆ ನಾಟಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಜ್ಞಾನೇಶ್‌ ಕುಮಾರ್‌ ಅವರು ಒಂದು ಕ್ಷಣವೂ ಮುಖ್ಯ ಚುನಾವಣಾ ಆಯುಕ್ತರಾಗಿ ಮುಂದುವರಿಯಬಾರದು. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದರು.

ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತಗಳ್ಳರ ವಿರುದ್ಧ ಸಂಘಟಿತ ಹೋರಾಟ ನಡೆಯುತ್ತಿದೆ. ಇದೊಂದು ಜನಾಂದೋಲನವಾಗಿ ಪರಿವರ್ತನೆಗೊಂಡಿದೆ. ಈ ಹೋರಟದಲ್ಲಿ ಹಿಂದಡಿಯಿಡುವ ಪ್ರಶ್ನೆಯೇ ಇಲ್ಲ. ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆ ಒಂದೇ ಅಲ್ಲ, ಚುನಾವಣಾ ಮೋಸದಿಂದ ಸ್ಥಾಪಿತವಾಗಿರುವ ಮೋದಿ ಸರ್ಕಾರವೂ ವಜಾ ಆಗಬೇಕು ಎಂದರು.

ಈ ದಿವಸ ಕರ್ನಾಟಕದಿಂದ ದೆಹಲಿಯ ಯಾತ್ರೆಯನ್ನು ಕೈಗೊಂಡಿದ್ದೇವೆ. ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ರಾಜ್ಯದ ಶಾಸಕರು, ಮಂತ್ರಿಗಳು, ಪದಾಧಿಕಾರಿಗಳು ಒಟ್ಟಾಗಿ ಇಂದು ದೆಹಲಿಗೆ ಲಗ್ಗೆ ಇಟ್ಟಿದ್ದೇವೆ. ಎಲ್ಲ ಜನಪ್ರತಿನಿಧಿಗಳು ಬಂದಿದ್ದೇವೆ. ಕಾರಣ, ಪ್ರಜಾಪ್ರಭುತ್ವವನ್ನು ಉಳಿಸಬೇಕು, ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಉಳಿಸಬೇಕು ಎಂಬ ದೃಷ್ಟಿಯಿಂದ ಈ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+