ಕರ್ನಾಟಕ ವಿಧಾನಸಭಾ ಚುನಾವಣೆ: ಇಂದು ದಿನಾಂಕ ಘೋಷಣೆ
Recommended Video

ಕರ್ನಾಟಕ ವಿಧಾನಸಭಾ ಚುನಾವಣೆ 2018 ದಿನಾಂಕ ಇಂದು ನಿಗದಿಯಾಗಲಿದೆ
ನವದೆಹಲಿ, ಮಾರ್ಚ್ 27: ಬಹುದಿನಗಳಿದ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು(ಮಾ.27) ದಿನಾಂಕ ನಿಗದಿಯಾಗಲಿದೆ. ನವದೆಹಲಿಯಲ್ಲಿಂದು ಭಾರತೀಯ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯ ದಿನಾಂಕವನ್ನು ಬೆಳಿಗ್ಗೆ 11 ಗಂಟೆಗೆ ಘೋಷಿಸುವ ನಿರೀಕ್ಷೆಯಿದೆ.
ಕರ್ನಾತಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಿರೀಕ್ಷೆಯಂತೆ ಇಂದೇ ದಿನಾಂಕ ಘೋಷಣೆಯಾದರೆ, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಆಡಳಿತ ಪಕ್ಷವಾದ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಜಿದ್ದಿಗೆ ಬಿದ್ದಿದ್ದರೆ, ಬಿಜೆಪಿ, ಜೆಡಿಎಸ್ ಗಳು ತೀವ್ರ ಪ್ರತಿಸ್ಪರ್ಧೆ ನೀಡ ಅಧಿಕಾರ ಮರುಪಡೆಯಲು ಉತ್ಸುಕತೆಯಲ್ಲಿವೆ.













Click it and Unblock the Notifications