Khata: ಇ - ಖಾತಾ ಅಲೆದಾಟ ತಪ್ಪಲಿದೆ, ಈಗ ಖಾತಾ ಪಡೆಯುವುದು ಇನ್ನಷ್ಟು ಸುಲಭ!
ಆಸ್ತಿದಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಆಸ್ತಿ ಹಾಗೂ ಇ -ಖಾತಾಗೆ ಸಂಬಂಧಿಸಿದಂತೆ ಸಮಸ್ಯೆ ಹೆಚ್ಚಳವಾಗಿದೆ. ಸಾಕಷ್ಟು ಗೊಂದಲಗಳ ನಂತರ ಇದೀಗ ಸರ್ಕಾರ ಕೊನೆಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಇ-ಖಾತಾ ಅಭಿಯಾನ ಆರಂಭಿಸಲಾಗಿದೆ. ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ಪಡೆದುಕೊಳ್ಳಬಹುದು. ಈ ಅಭಿಯಾನದಲ್ಲಿ ಭಾಗವಹಿಸುವುದು ಹೇಗೆ ಹಾಗೂ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ಬಿ - ಖಾತಾ ಹಾಗೂ ಇ - ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರಮುಖ ನಿರ್ದೇಶಗಳನ್ನು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಿಂದಲೂ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು. ಕೆಲವೊಂದು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ಮುಖ್ಯವಾಗಿ ಇ - ಖಾತಾ ಅಭಿಯಾನ ಪ್ರಾರಂಭಿಸುವುದಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಪಾಲಿಕೆ ಸೇರಿದಂತೆ ವಿವಿಧೆಡೆ ಇ -ಖಾತಾ ಅಭಿಯಾನ ನಡೆಯಲಿದ್ದು. ಆಸ್ತಿದಾರರು ಅಲ್ಲಿಯೇ ಇ -ಖಾತಾವನ್ನು ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದಲ್ಲಿ ಎಲ್ಲಾ ಮಾದರಿಯ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು ಹಾಗೂ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಲೋಪವನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ಇ - ಖಾತಾವನ್ನು ತೆಗೆದುಕೊಳ್ಳಲೇಬೇಕು ಎಂದು ಸೂಚನೆ ನೀಡಿದೆ. ಇದರ ಹಿಂದೆ ರಾಜ್ಯದಲ್ಲಿ ಎಲ್ಲಾ ಮಾದರಿಯ ಆಸ್ತಿಗಳನ್ನು ಇ - ಖಾತಾ ಹಾಗೂ ಬಿ - ಖಾತಾ ವ್ಯಾಪ್ತಿಗೆ ತರುವುದು ಹಾಗೂ ಇದರಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ರಾಜ್ಯ ಸರ್ಕಾರವು ಇ - ಖಾತಾ ನೀಡುವಾಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಆಸ್ತಿದಾರರು ಆರೋಪ ಮಾಡಿದ್ದು. ಇದೀಗ ಇ - ಖಾತಾ ಅಭಿಯಾನ ಮಾಡಿ ಸರ್ಕಾರಿ ಕಚೇರಿಗಳಲ್ಲೇ ಆಸ್ತಿದಾರರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ನೀವು ಸರ್ಕಾರಿ ಕಚೇರಿಗೆ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಇ - ಖಾತಾ ಮಾಡಿಸಿಕೊಳ್ಳಬಹುದಾಗಿದೆ. ಯಾವೆಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ನೋಡೋಣ..
ಇ - ಖಾತಾ ಆಸ್ತಿಗಳ ಸಮಸ್ಯೆ ತಪ್ಪಿಸಲು ಅಭಿಯಾನ: ರಾಜ್ಯದಲ್ಲಿ ಆಸ್ತಿಗಳಿಗೆ ಇ - ಖಾತಾ ಕಡ್ಡಾಯ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಬೃಹತ್ ಅಭಿಯಾನವನ್ನ ಆಯೋಜಿಸುತ್ತಿದೆ.
ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಾಂಕ 10.05.2025 ರವರೆಗೆ ಇ-ಖಾತಾ ಅಭಿಯಾನ ನಡೆಸಲು ಸರ್ಕಾರ ಮುಂದಾಗಿದೆ.
ಇ-ಖಾತಾ ಪಡೆಯಲು ಸರಳ ವಿಧಾನಗಳು
* ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ
* ಆಸ್ತಿ ಮಾಲೀಕರ ಫೋಟೊ
* ಮಾಲೀಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು
* ಸ್ವತ್ತಿನ ಋಣಭಾರ ಪ್ರಮಾಣ ಪತ್ರ
* ಸ್ವತ್ತಿನ ಛಾಯಾಚಿತ್ರ
* ಆಸ್ತಿ ತೆರಿಗೆ ಪಾವತಿಸಿದ ರಶೀದಿ ಬೇಕಾಗುತ್ತದೆ.
ಈ ದಾಖಲೆಗಳೊಂದಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ದಾಖಲೆಯನ್ನು ಪಡೆದುಕೊಳ್ಳಬಹುದು. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತಾ ಪಡೆಯಿರಿ ಎಂದು ಸರ್ಕಾರ ಹೇಳಿದೆ.
ಇ-ಖಾತೆ ಪಡೆಯಲು ಯಾವುದಾದರೂ ಸಮಸ್ಯೆ ಇದ್ದಲ್ಲಿ ಸಂಪರ್ಕಿಸಿ : ಸಹಾಯವಾಣಿ : 080-23003100 / ವಾಟ್ಸಾಪ್ : 6366674001












Click it and Unblock the Notifications