E-khata Good News: ಇ - ಖಾತಾ ಹೊಸ ಅಪ್ಡೇಟ್ಸ್, ಇನ್ಮುಂದೆ ಈ ನಿಯಮ ಪಾಲಿಸಿ
ಇ -ಆಸ್ತಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊಸ ಹಾಗೂ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಇ - ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 7ರಿಂದ ಕಾವೇರಿ ತಂತ್ರಾಂಶಗಳ ಮೂಲಕ ಮಹತ್ವದ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ.
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ ತಂತ್ರಾಂಶ ಹಾಗೂ ಇ - ಆಸ್ತಿಯ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿದೆ. ಇದರಲ್ಲಿ ಇ - ಆಸ್ತಿ ಖಾತಾ ಬಗ್ಗೆ ವಿಶೇಷ ಅಪ್ಡೇಟ್ಸ್ ನೀಡಲಾಗಿದೆ. ಕಾವೇರಿ - 2 ತಂತ್ರಾಂಶದಲ್ಲಿ ಇ - ಆಸ್ತಿ ತಂತ್ರಾಂಶಗಳ (E-property software integration) ಸಂಯೋಜನೆ ನಾಳೆಯಿಂದ ಅಂದರೆ ಅಕ್ಟೋಬರ್ 7ರಿಂದ ಪ್ರಾರಂಭವಾಗಲಿದೆ ಎಂದು ಹೇಳಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದೀಗ ಬಾಕಿ ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

ಯಾವ ಜಿಲ್ಲೆಗಳಲ್ಲಿ ಸ್ಥಿರಾಸ್ತಿಗಳ ನೋಂದಣಿ: ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ನಾಳೆಯಿಂದ ಸ್ಥಿರಾಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ, ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ವಿಜಯನಗರ, ಕಾರವಾರ, ಶಿವಮೊಗ್ಗ, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಕೋಲಾರ ಮತ್ತು ತುಮುಕೂರು ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ (ಸಿಎಂಸಿ, ಟಿಎಂಸಿ) ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ - ಆಸ್ತಿ ಕಡ್ಡಾಯವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇ- ಆಸ್ತಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೆಲವು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದೆ. ಅದರಲ್ಲಿ ಪ್ರಮುಖ ವಿಷಯಗಳು ಈ ರೀತಿ ಇವೆ.
ಇ - ಆಸ್ತಿ ಖಾತಾ ಈ ವಿಷಯಗಳನ್ನು ಗಮನಿಸಿ: ಇ - ಆಸ್ತಿ ಖಾತಾ (ಪಿಐಡಿ ಸಂಖ್ಯೆ Pid No) ಇಲ್ಲದ ಸ್ವತ್ತುಗಳ ನೋಂದಣಿ ಸಾಧ್ಯವಿಲ್ಲ. ನಿಮ್ಮ ಸ್ವತ್ತಿಗೆ ಪಿಡಿಐ ಸಂಖ್ಯೆ ಇದೆಯೇ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳಿ ಎಂದು ಹೇಳಲಾಗಿದೆ.

ಇ - ತಂತ್ರಾಂಶಕ್ಕೆ ಮಾತ್ರ ಅನುಮತಿ: ನೋಂದಣಿ ವೇಳೆ ಸ್ವತ್ತಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಇ - ಆಸ್ತಿ ತಂತ್ರಾಂಶದಿಂದ ಮಾತ್ರ ಪಡೆದುಕೊಳ್ಳಲಾಗುವುದು, ಭೌತಿಕ (Physical Khata)ಗಳನ್ನು ನೋಂದಣಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ನೋಂದಣಿ ಮಾಡುವ ಸಂದರ್ಭದಲ್ಲಿ ಪತ್ರ ವ್ಯವಹಾರವನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಲಾಗಿದೆ.
ತಂತ್ರಾಂಶ ಸಂಯೋಜನೆ: ಇನ್ನು ಇ - ಆಸ್ತಿ ಖಾತಾದಲ್ಲಿ ಆಸ್ತಿಗಳ ಸಂಯೋಜನೆಯನ್ನು ತಾಂತ್ರಾಂಶಗಳ ಸಂಯೋಜನೆ ವಿಧಾನ ಹೊರತುಪಡಿಸಿ, ಬೇರೆ ಯಾವುದೇ ವಿಧಾನದಿಂದ ನೋಂದಣಿ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಇ - ಆಸ್ತಿ ಖಾತಾ ಕಡ್ಡಾಯ: ರಾಜ್ಯದಲ್ಲಿ ಆಸ್ತಿ ಹೊಂದಿರುವವರಿಗೆ ಮತ್ತೊಂದು ಅಪ್ಡೇಟ್ ನೀಡಲಾಗಿದೆ ಇನ್ನು ಈ ಆಸ್ತಿ ಖಾತಾ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದೂ ರಾಜ್ಯ ಸರ್ಕಾರವು ಮಾಹಿತಿ ನೀಡಿದೆ.
ಇ - ಆಸ್ತಿ ಗೊಂದಲವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ: ಇನ್ನು ನಿಮಗೆ ಇ - ಆಸ್ತಿಯ ತಂತ್ರಾಂಶಗಳ ಸಂಯೋಜನೆಯಲ್ಲಿ ಯಾವುದಾದರೂ ಗೊಂದಲವಿದ್ದರೆ, (E-property software integration) ನೀವು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯವಾಣಿ ಸಂಖ್ಯೆ 080 -68265316 ಕ್ಕೆ ಕರೆ ಮಾಡಬಹುದಾಗಿದೆ. ಇ - ಆಸ್ತಿ ತಂತ್ರಾಂಶ ಸಂಯೋಜನೆ ಹೇಗೆ, ಎಲ್ಲಿ, ಯಾವಾಗ ಎನ್ನುವ ಮಾಹಿತಿಯನ್ನು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.












Click it and Unblock the Notifications