Viral : ದುಪ್ಪಟ್ಟು ಸಂಬಳ ಕೊಟ್ರೂ ಕಾರ್ಪೊರೇಟ್ ಕೆಲಸಕ್ಕೆ ವಾಪಸ್ ಹೋಗಲ್ಲ: 5 ಕಾರಣ ಬಿಚ್ಚಿಟ್ಟ ದುಬೈ ಮೂಲದ ಮಹಿಳೆ

ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ-ಯುವತಿಯರು ತಮ್ಮ ಕಾರ್ಪೊರೇಟ್ ಉದ್ಯೋಗದ ಒತ್ತಡವನ್ನು ತಾಳಲಾರದೆ ಕೆಲಸ ತೊರೆಯುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ದುಬೈನಲ್ಲಿ ನೆಲೆಸಿರುವ ಸ್ಪೇನ್ ಮೂಲದ ಮಹಿಳೆಯೊಬ್ಬರು, ಸಂಬಳವನ್ನು ದುಪ್ಪಟ್ಟು ಮಾಡಿದರೂ ತಾನು ಮತ್ತೆ ಎಂದಿಗೂ ಕಾರ್ಪೊರೇಟ್ ಜಗತ್ತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ರೊಸಿಯೋ ಫಾಲಗನ್ (Rocio Falagan) ಎಂಬುವವರು, ತಮ್ಮ ಉದ್ಯೋಗವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂಬುದಕ್ಕೆ 5 ಪ್ರಮುಖ ಕಾರಣಗಳನ್ನು ವಿವರಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 'ರೋಚಿ' (Rochi) ಎಂದು ಗುರುತಿಸಿಕೊಂಡಿರುವ 31 ವರ್ಷದ ಈ ಸ್ಪ್ಯಾನಿಷ್ ಮಹಿಳೆ, ಕೈತುಂಬಾ ಸಂಬಳ ಬರುತ್ತಿದ್ದರೂ ತಮ್ಮ 30ನೇ ವಯಸ್ಸಿನಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದಿದ್ದಾರೆ. "ಕಳೆದ ವರ್ಷ ಇದೇ ಸಮಯಕ್ಕೆ ನನ್ನ ಬಳಿ ಉತ್ತಮ ವೇತನ ನೀಡುವ ಕೆಲಸವಿತ್ತು. ಸ್ಪೇನ್‌ನಲ್ಲಿದ್ದಾಗ ಕನಸಿನಲ್ಲೂ ಯೋಚಿಸಲಾಗದಂತಹ ಐಷಾರಾಮಿ ಜೀವನವನ್ನು ಆ ಕೆಲಸ ನನಗೆ ನೀಡಿತ್ತು," ಎಂದು ಅವರು ಹೇಳಿಕೊಂಡಿದ್ದಾರೆ. ಇಂದು ಅವರು ತುಂಬ ಕಡಿಮೆ ಸಂಪಾದಿಸುತ್ತಿದ್ದಾರೆ ಹಾಗೂ "ಹೆಚ್ಚಾಗಿ ಉಳಿತಾಯದ ಹಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ". ಆದರೂ ಅವರು ಮತ್ತೆಂದಿಗೂ ಕಾರ್ಪೊರೇಟ್ ಕೆಲಸಕ್ಕೆ ಹಿಂದಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Dubai Woman

ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, 2 ಪಟ್ಟು ಹೆಚ್ಚು ವೇತನ ನೀಡಿದರೂ ಕಾರ್ಪೊರೇಟ್ ಕ್ಷೇತ್ರಕ್ಕೆ ಮರಳದಿರಲು 5 ಪ್ರಮುಖ ಕಾರಣಗಳನ್ನು ನೀಡಿದ್ದಾರೆ:

1. ಮುಂಜಾನೆಯ ಪ್ರಶಾಂತತೆಯ ಮಹತ್ವ: ಕೆಲಸ ಮಾಡುತ್ತಿದ್ದಾಗ ಪ್ರತಿದಿನ ಬೆಳಿಗ್ಗೆ ಒಂದು ರೀತಿಯ ಭಯದಿಂದಲೇ ಎಚ್ಚರಗೊಳ್ಳುತ್ತಿದ್ದೆ ಎಂದು ರೋಚಿ ವಿವರಿಸಿದ್ದಾರೆ. ಇಂದು ಆ ಆತಂಕದ ಜಾಗವನ್ನು ಪ್ರಶಾಂತತೆ ಆವರಿಸಿದೆ. "ನಾನು ಅಲಾರಂ, ಆತಂಕ ಮತ್ತು ಯಂತ್ರದಂತೆ ಎಚ್ಚರಗೊಳ್ಳುತ್ತಿದ್ದೆ. ಆದರೆ ಈಗ ನಾನು ಎದ್ದಾಗ ನನ್ನ ಮೊದಲ ಯೋಚನೆ ಬೇರೊಬ್ಬರ ಡೆಡ್‌ಲೈನ್ ಬಗ್ಗೆ ಇರುವುದಿಲ್ಲ. ಈ ನೆಮ್ಮದಿಯ ಭಾವನೆಯು ಕಾಂಟ್ರಾಕ್ಟ್‌ನಲ್ಲಿ ಸೇರಿಸಬಹುದಾದ ಯಾವುದೇ ದೊಡ್ಡ ಮೊತ್ತದ ಹಣಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ," ಎಂದು ಅವರು ಹೇಳಿದ್ದಾರೆ.

2. ಪಾತ್ರಧಾರಿಯಾಗಿ ನಟಿಸುವುದು: ಕಚೇರಿಯಲ್ಲಿ ಕೆಲಸ ಮಾಡುವುದು ಒಂದು ರೀತಿಯ ನಾಟಕವಾಡಿದಂತೆ ಇತ್ತು ಎಂದಿದ್ದಾರೆ ರೋಚಿ. "ಕಾರ್ಪೊರೇಟ್ ಜಗತ್ತಿನಲ್ಲಿ ನನ್ನ ನಗು, ಮಾತು, ಎಲ್ಲವೂ ಭಿನ್ನವಾಗಿತ್ತು. ನಾನು ನಾನಲ್ಲದ ಬೇರೊಬ್ಬ ವ್ಯಕ್ತಿಯಂತೆ ನಟಿಸುತ್ತಾ ನನ್ನನ್ನು ನಾನೇ ದಣಿಸಿಕೊಳ್ಳುತ್ತಿದ್ದೆ. ಕೆಲಸ ಬಿಡುವವರೆಗೂ ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಇನ್ಮುಂದೆ ಕೇವಲ ಸಂಬಳಕ್ಕಾಗಿ ನಾನು ನಟಿಸುವುದಿಲ್ಲ," ಎಂದು ಅವರು ಖಚಿತವಾಗಿ ಹೇಳಿದ್ದಾರೆ.

3. ವೈಫಲ್ಯದ ನಿಜವಾದ ಅರ್ಥ: ರೋಚಿ ಹೇಳುವ ಪ್ರಕಾರ, ಈಗ ಸ್ವಂತ ಉದ್ಯಮ ನಡೆಸುತ್ತಿರುವುದರಿಂದ, ಇಲ್ಲಿನ ವೈಫಲ್ಯಗಳು ಅವರದ್ದೇ ಆಗಿರುತ್ತವೆ. ಆದರೆ ಕಾರ್ಪೊರೇಟ್ ಉದ್ಯೋಗದಲ್ಲಿ ವೈಫಲ್ಯವೆಂದರೆ "ಬೇರೊಬ್ಬರ ಪ್ರಾಜೆಕ್ಟ್‌ನ ಕೆಪಿಐ ಗುರಿ ತಲುಪದಿರುವುದು" ಎಂದರ್ಥವಾಗಿತ್ತು. "ಪ್ರತಿಯೊಂದು ವೈಫಲ್ಯವು ನನ್ನನ್ನು ನೈಜತೆಯತ್ತ ಕರೆತಂದಿದೆ. ಆದರೆ ಕಾರ್ಪೊರೇಟ್‌ನಲ್ಲಿ, ವೈಫಲ್ಯವು ನನ್ನನ್ನು ಕೇವಲ ಮಾನಸಿಕ ಬಳಲಿಕೆಗೆ ದೂಡುತ್ತಿತ್ತು," ಎಂದು ಅವರು ಬರೆದುಕೊಂಡಿದ್ದಾರೆ.

4. ಟಾಕ್ಸಿಕ್ ವಾತಾವರಣವಿಲ್ಲ: ಕಾರ್ಪೊರೇಟ್ ಪ್ರಪಂಚದಿಂದ ದೂರ ಸರಿದಿರುವುದು ಯಾರೊಂದಿಗೆ ವ್ಯವಹರಿಸಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನು ನೀಡಿದೆ. "ಟಾಕ್ಸಿಕ್ ಮ್ಯಾನೇಜರ್‌ಗಳಿಲ್ಲ. ಊಟ ಮಾಡಲು ಇಷ್ಟವಿಲ್ಲದ ಜನರೊಂದಿಗೆ ಬಲವಂತವಾಗಿ ಬೆರೆಯುವ ಅಗತ್ಯವಿಲ್ಲ. ನನ್ನ ಶಕ್ತಿ ಸೀಮಿತವಾಗಿದೆ ಮತ್ತು ಅಂತಿಮವಾಗಿ ಅದನ್ನು ರಕ್ಷಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿದೆ," ಎಂದು ಅವರು ವಿವರಿಸಿದ್ದಾರೆ.

5. ಸ್ವಾತಂತ್ರ್ಯದ ಮೌಲ್ಯ: ಅಂತಿಮವಾಗಿ, "ಭಯಾನಕ ತಿಂಗಳುಗಳು, ಖಾಲಿಯಾದ ಬ್ಯಾಂಕ್ ಖಾತೆ, ಬೆಳಗಿನ ಜಾವ 3 ಗಂಟೆಯ ಅನುಮಾನಗಳು.. ನನ್ನ ಬಳಿ ಇದ್ದ ಎಲ್ಲವನ್ನೂ ವಾಪಾಸು ಕೊಟ್ಟು ನನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇನೆ. ಈಗ ಮತ್ತೆ ಹಿಂದಕ್ಕೆ ಹೋಗುವುದು ಕೇವಲ ಕೆಟ್ಟ ನಿರ್ಧಾರವಷ್ಟೇ ಅಲ್ಲ, ಇಲ್ಲಿಯವರೆಗೆ ಬರಲು ನಾನು ಎದುರಿಸಿದ ಹೋರಾಟಗಳಿಗೆ ಮಾಡಿದ ಅಪಮಾನವಾಗುತ್ತದೆ," ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+