DK Brothers: ಸಹೋದರರು ಎಂದರೆ ಹೀಗಿರಬೇಕು, ಅಣ್ಣನ ಎಲ್ಲಾ ಕಷ್ಟಸುಖಕ್ಕೆ ಸಾಥ್ ನೀಡುವ ಡಿ.ಕೆ.ಸುರೇಶ್
ಕನಕಪುರ, ಏಪ್ರಿಲ್ 20: ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಾಮಪತ್ರ ಅನರ್ಹವಾಗಬಹುದು ಎಂಬ ಹಿನ್ನೆಲೆಯಲ್ಲಿ ಅವರ ತಮ್ಮ ಡಿಕೆ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲೂ ಅಣ್ಣನ ಬೆನ್ನಿಗೆ ಡಿಕೆ ಸುರೇಶ್ ನಿಂತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಾಮಪತ್ರ ಅನರ್ಹವಾಗಬುದು ಎಂಬ ಭೀತಿಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕನಕಪುರದಿಂದ ಡಿಕೆಶಿ ಪುತ್ರಿ ಐಶ್ವರ್ಯ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಡಿಕೆ ಸುರೇಶ್ ಕಣಕ್ಕಿಳಿದಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ 4 ದಿನಗಳ ಹಿಂದೆ ಡಿಕೆ ಶಿವಕುಮಾರ್ ಅವರಿಗೆ ಸಿಬಿಐ ನೋಟೀಸ್ ಬಂದಿತ್ತು. ಹೀಗಾಗಿ ಮುನ್ನೇಚ್ಚರಿಕಾ ಕ್ರಮವಾಗಿ ಡಿಕೆ ಸುರೇಶ್ ಅವರು ನಾಮಪತ್ರ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

ನಮ್ಮ ವಿರುದ್ಧ ಕುತಂತ್ರ ನಡೆಯುತ್ತಿದೆ, ನನಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಅದನ್ನು ಬಿಜೆಪಿಯವರು ಬೇಕಿದ್ದರೆ ಮಾಡಲಿ ನಾಮಪತ್ರ ಸಲ್ಲಿಕೆ ಕ್ರಮಬದ್ಧವಾಗಿದೆ. ಚುನಾವಣಾಧಿಕಾರಿಗಳು ಸರ್ಕಾರಿ ಅಧಿಕಾರಿಗಳೇ. ಮುಂಜಾಗ್ರತಾ ಕ್ರಮವಾಗಿ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದೇನೆ. ಮೇ 10ರ ವರೆಗೂ ಕಾದುನೋಡಿ ಕನಕಪುರದ ಜನ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.ಕನಕಪುರದಿಂದ ಸತತವಾಗಿ ಗೆಲ್ಲುತ್ತಾ ಬಂದಿರುವ ಡಿಕೆ ಶಿವಕುಮಾರ್ ಅವರು ಕ್ಷೇತ್ರದ ಎಲ್ಲ ಚಟುವಟಿಕೆಗಳನ್ನು ಡಿಕೆ ಸುರೇಶ್ ಅವರು ನೋಡಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕನಕಪುರ ಗೆಲುವಿನ ಹೊಣೆಯನ್ನು ಅವರಿಗೆ ನೀಡಲಾಗಿತ್ತು. ಏಕೆಂದರೆ ಡಿಕೆ ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಕ್ಷೇತ್ರ ಸಾಕಷ್ಟು ಗಮನ ಕೊಡಲು ಆಗುವುದಿಲ್ಲ. ಹಾಗಾಗಿ ಅ ಹೊಣೆಯನ್ನು ಡಿಕೆಶಿ ತಮ್ಮನಿಗೆ ವಹಿಸಿದ್ದರು.
ಇದೊಂದೆ ಮಾತ್ರವಲ್ಲದೆ ಅನೇಕ ರಾಜಕೀಯ ತಂತ್ರಗಾರಿಕೆಯನ್ನು ಡಿಕೆ ಶಿವಕುಮಾರ್ ಅವರು ತಮ್ಮ ಡಿಕೆ ಸುರೇಶ್‌ಗೆ ಹೇಳಿಕೊಡುತ್ತಾರೆ, ಮಾತ್ರವಲ್ಲದೆ ಅವರ ಅನೇಕ ವ್ಯಾಜ್ಯಗಳನ್ನು ಸಹ ಅವರೇ ನೋಡಿಕೊಳ್ಳುತ್ತಾರೆ, ಡಿಕೆ ಶಿವಕುಮಾರ್ ಅವರು ಹಿಂದೆ ತಿಹಾರ್ ಜೈಲಿನಲ್ಲಿದ್ದಾಗಲೂ ಅವರನ್ನು ಬಿಡುಗಡೆ ಮಾಡಿಸಲು ಡಿಕೆ ಸುರೇಶ್ ಸಾಕಷ್ಟು ಶ್ರಮವಹಿಸಿದ್ದರು. ಹೀಗೇ ಚಿಕ್ಕಂದಿನಿಂದಲೂ ಅವರು ಅಣ್ಣನ ಬೆನ್ನಿಗೆ ನಿಂತಿದ್ದಾರೆ.
ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಇಬ್ಬರು ರಾಮ ಲಕ್ಷಣರಂತೆ ಇದುವರೆಗೂ ಇದ್ದಾರೆ, ಒಬ್ಬರಿಗೊಬ್ಬರು ಒತ್ತಾಸೆಯಾಗಿ ಜೋಡೆತ್ತುಗಳಂತೆ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಅಣ್ಣನಂತೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಡಿಕೆ ಸುರೇಶ್ ಹೆಸರು ಮಾಡಿದ್ದಾರೆ. ಇದೆಲ್ಲದಕ್ಕೂ ಡಿಕೆಶಿ ಅವರ ಬೆಂಬಲ ಸಹಾಯ ಇದ್ದೇ ಇದೆ ಇದೆಲ್ಲಾ ಅಣ್ಣ ತಮ್ಮಂದಿರ ಬಾಂಧವ್ಯವೇ ಆಗಿದೆ.












Click it and Unblock the Notifications