ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್

Recommended Video

      ರಾಜ್ಯಸಭಾ ಸಂಸದರಿಗೆ ಐ ಫೋನ್ ಕೊಟ್ಟ ಹಿಂದಿರುವ ಕೈ ಬಗ್ಗೆ ಬಾಯ್ಬಿಟ್ಟ ಡಿ ಕೆ ಶಿವಕುಮಾರ್ | Oneindia Kannada

      ಬೆಂಗಳೂರು, ಜು.17: ಸಂಸದರಿಗೆ ಐ-ಫೋನ್‌ ನೀಡಿರುವ ಕುರಿತು ಸಚಿವ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದು ಹೇಳಿದ್ದಾರೆ.

      ಕಾವೇರಿ ನೀರು ಹಾಗೂ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸಂಸದರು ಕೇಂದ್ರ ಸಚಿವರ ಜತೆಗೆ ಬುಧವಾರ ಸಭೆ ನಡೆಸಲಿದ್ದಾರೆ, ಅದಕ್ಕೂ ಮುನ್ನ ಸಂಸದರಿಗೆ ಐ-ಫೋನ್‌ ಕಿಟ್‌ ಬಂದು ತಲುಪಿತ್ತು, ಈ ಕುರಿತು ಬಿಜೆಪಿ ಸಂಸದರು ವಿರೋಧ ವ್ಯಕ್ತಪಡಿಸಿದ್ದು ಐ-ಫೋನ್‌ ವಾಪಸ್‌ ನೀಡಿದ್ದರು.

      ಸಂಸದ ರಾಜೀವ್‌ ಚಂದ್ರಶೇಖರ್‌ ಈ ಕುರಿತು ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ರೈತರು, ಪೌರಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಅದರೊಂದಿಗೆ ರಾಜ್ಯದ ಸಮಸ್ಯೆ ಸಾಕಷ್ಟಿದೆ ಈ ಸಂದರ್ಭದಲ್ಲಿ ಐ-ಫೋನ್‌ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದರು.

      DK Shivakumar claims that he would wish to gift iPhone

      ಈ ಕುರಿತು ಎಚ್‌ಡಿ ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು ಐ-ಫೋನ್‌ ನೀಡುವ ಕುರಿತು ನನಗೆ ಯಾವ ಮಾಹಿತಿಯೂ ಇಲ್ಲ ಎಂದಿದ್ದರು ಈ ಸಂದರ್ಭದಲ್ಲಿ ಹಾಗಾದರೆ ಐ-ಫೋನ್‌ ನೀಡಿದ್ದು ಯಾರು ಎಂಬ ಕುತೂಹಲ ಮೂಡಿತ್ತು, ಇದೀಗ ತೆರೆ ಬಿದ್ದಿದೆ.

      ಸಚಿವ ಡಿಕೆ ಶಿವಕುಮಾರ್ ವಿಧಾನ ಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಂಸದರಿಗೆ ಐ-ಫೋನ್‌ ನೀಡಿದರಲ್ಲಿ ತಪ್ಪೇನಿದೆ, ನಾನು ವಯಕ್ತಿಕವಾಗಿ ಕೊಟ್ಟಿದ್ದೇನೆ ಎಂದಿದ್ದಾರೆ. ಮಾಹಿತಿ ತ್ವರಿತವಾಗಿ ಸಂಸದರಿಗೆ ತಲುಪಲಿ ಎಂದು 50 ಸಾವಿರದ ಐ-ಫೋನ್‌ ನೀಡಿದ್ದೇನೆ ಅದರಲ್ಲಿ ತಪ್ಪೇನಿದೆ, ಅದರಲ್ಲಿ ಕೆಲವರು ವಾಪಸ್‌ ಕೊಟ್ಟಿದ್ದಾರೆ ಅದಕ್ಕೆ ನಾನೇನು ಮಾಡಲಿ, ಕಳೆದ ವರ್ಷವೂ ಐ-ಫೋನ್‌ ಕೊಟ್ಟಿದ್ದೆ ಹಲವು ಬಿಜೆಪಿ ಸಂಸದರು ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು ಎಂದರು.

      ರಾಜೀವ್‌ ಚಂದ್ರಶೇಖರ್‌ ಹಣವಂತರು, ಹೀಗಾಗಿ ಗಿಫ್ಟ್‌ನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಲ್ಲ ಎಂದು ರಾಜೀವ್‌ ಚಂದ್ರಶೇಖರ್‌ಗೆ ಟಾಂಗ್‌ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+