ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ಶಿಬಿರಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಜೆಡಿಎಸ್ ವರಿಷ್ಠ ದೇವೇಗೌಡ್ರು

By ಸಂತೋಶ್ ಕುಮಾರ್ ಬೂದಿಹಾಳ್
|
Google Oneindia Kannada News

ಸಮಾಜದ ಸಮಾನತೆಗೆ ಮತ್ತು ಹಿಂದುಳಿದವರ ಏಳಿಗೆಗೆ ಬೆವರು ಹರಿಸಿ ಜೀವನ ಮುಡಿಪಾಗಿಟ್ಟವರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು. ಹಿಂದುಳಿದವರಿಗೆ ನಿಜವಾದ ಸ್ಪಷ್ಟತೆ ಮತ್ತು ಪ್ರಾಮುಖ್ಯತೆ ಸಿಗಲಾರಂಭಿಸಿದ್ದು ಸ್ವತಂತ್ರ ಭಾರತದಲ್ಲಿನ ಕೃಪೆ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಅಂಬೇಡ್ಕರವರಿಂದ.

ಅವರ ಭಾವಚಿತ್ರವನ್ನ ಸಮಾಜದಲ್ಲಿ ಅನೇಕರು ದೇವರಂತೆ ಪೂಜಿಸುತ್ತಾರೆ ಬಹುವಾಗಿ ಹಿಂದುಳಿದ ಸಮುದಾಯಗಳು ತಮಗಾಗಿ ಹೋರಾಡುವವರನ್ನು ಪ್ರೀತಿಯಿಂದ ನೋಡುವ ಬಗೆ ಅದು. ಸಂವಿಧಾನ ಶಾಸನ ಮಟ್ಟದಲ್ಲಿ ಹಿಂದುಳಿದವರಿಗೆ ದೊರೆತ ಪ್ರಾತಿನಿಧ್ಯ, ಇಷ್ಟಾದರೆ ಸಾಕೆ ದೀನ ದಲಿತರ ಕ್ಷೇಯೋಭಿವೃದ್ದಿಗೆ?

ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆ

ಈ ಶಾಸನದೊಳಗಿನ ನಿಯಮಾವಳಿಗಳು ಎಷ್ಟರ ಮಟ್ಟಿಗೆ ಪಾಲನೆಗೊಳಪಡುತ್ತವೆ ಎಂಬುದು ಮುಖ್ಯ, ಇದರ ಸಂಪೂರ್ಣ ಜವಾಬ್ದಾರಿ ಇರುವುದು ಕಾರ್ಯಾಂಗದಲ್ಲಿ. ಅಲ್ಲೇನಾದರೂ ಲೋಪಗಳಾದರೆ? ಕಾರ್ಯಂಗದ ಮೇಲೆ ನಿಗಾ ಇಡಲು ಸಮಾಜಮುಖಿ ರಾಜಕಾರಣಿ ಬೇಕಲ್ಲವೇ ? ಅದಕ್ಕುತ್ತರವಾಗಿ ಬೆಳೆದದ್ದು ಅಹಿಂದ ರಾಜಕಾರಣ, ಅದು ಕೆಲವು ದಶಕಗಳಲ್ಲಿ ದೇಶಾದ್ಯಂತ ಸಾಕಷ್ಟು ನಾಯಕರನ್ನ ಮತ್ತು ಪಕ್ಷಗಳನ್ನ ಹುಟ್ಟುಹಾಕಿತು. ಆದರೆ ಇಂದಿಗೆ ಪ್ರಸ್ತುತವಾಗಿರುವದು ಬೆರಳಣಿಕೆಯಷ್ಟು ಮಾತ್ರ.

ಹಾಗೆ ಪ್ರಸ್ತುತದಲ್ಲಿರುವ ಪಕ್ಷವೆಂದರೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಾರ್ಟಿ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಹಿಂದುಳಿದವರ ವಿಶ್ವಾಸಗಳಿಸಿದ ಪಕ್ಷವೆಂದರೆ ತಪ್ಪಾಗದು. ಮಾಯಾವತಿ ಎಷ್ಟೇ ತಪ್ಪು ಮಾಡಲಿ ಸಾಮಾಜಿಕ ನ್ಯಾಯದ ಹೆಸರಲ್ಲಿ ತನ್ನದೇ ಆದ ಮತಗಳನ್ನು ಹಿಡಿದಿಟ್ಟಿದ್ದಾರೆ.

ಯಾವ ಜಾತಿಯ ಮತ ಯಾವ ಪಕ್ಷದ ಪರ? ಇಲ್ಲಿದೆ ಕರ್ನಾಟಕದ ಲೆಕ್ಕಾಚಾರಯಾವ ಜಾತಿಯ ಮತ ಯಾವ ಪಕ್ಷದ ಪರ? ಇಲ್ಲಿದೆ ಕರ್ನಾಟಕದ ಲೆಕ್ಕಾಚಾರ

ಕರ್ನಾಟಕದ ವಿಷಯಕ್ಕೆ ಬನ್ನಿ, ಇಲ್ಲಿ ಎಲ್ಲ ಪಕ್ಷಗಳು ದಲಿತ ಓಲೈಕೆಯಲ್ಲಿ ತೊಡಗಿಸಿಕೊಂಡಿವೆ, ಆದರೆ ಅವರನ್ನು ಪ್ರತಿನಿಧಿಸುವ ರಾಜಕಾರಣಿಗಳು ಬೆರಳಣಿಕೆಯಷ್ಟು, ಅವರಿಗಿಂತ ನಿಯತ್ತಿನಿಂದ ಹಿಂದುಳಿದವರ ಹಿತ ಕಾಯುವಲ್ಲಿ ತಕ್ಕ ಮಟ್ಟಿಗೆ ಯಶಸ್ಸಾಗಿರುವುದು ಕೆಲವು ದಲಿತ ಸಂಘಟನೆಗಳು.

ಕೊಳ್ಳೆಗಾಲದಿಂದ ಆಯ್ಕೆಯಾದ ಎನ್ ಮಹೇಶ್

ಕೊಳ್ಳೆಗಾಲದಿಂದ ಆಯ್ಕೆಯಾದ ಎನ್ ಮಹೇಶ್

ಆ ಹಾದಿಯಲ್ಲೇ ಬಂದ ಎನ್ ಮಹೇಶ್ ಈ ಬಾರಿ ವಿಧಾನಸಭೆ ಪ್ರವೇಶಿಸಲಿದ್ದಾರೆ, ಅದೂ ಬಹುಜನ ಸಮಾಜವಾದಿ ಪಾರ್ಟಿಯಿಂದ (BSP). ಇದರ ಸಂಪೂರ್ಣ credit ರಾಜ್ಯ ರಾಜಕಾರಣದ ಚಾಣಕ್ಯ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲಬೇಕು, ಕಾರಣ ಸಮಯೋಚಿತವಾಗಿ ಅವರು ಮಾಡಿಕೊಂಡ BSPಯೊಂದಿಗಿನ ಚುನಾವಣಾ ಪೂರ್ವ ಮೈತ್ರಿ.

ಮೈತ್ರಿಯಿಂದ ದೇವೇಗೌಡರಿಗೆ ಸಹಾಯವಾಗಿರೋದು ಅಷ್ಟಕ್ಕಷ್ಟೆ

ಮೈತ್ರಿಯಿಂದ ದೇವೇಗೌಡರಿಗೆ ಸಹಾಯವಾಗಿರೋದು ಅಷ್ಟಕ್ಕಷ್ಟೆ

ಅಂಕಿ-ಸಂಖ್ಯೆ ಕೆದಕಿದರೆ ಈ ಮೈತ್ರಿಯಿಂದ ದೇವೇಗೌಡರಿಗೆ ಸಹಾಯವಾಗಿರೋದು ಅಷ್ಟಕ್ಕಷ್ಟೆ, ಆದರೆ ಅವರು "ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುವ" ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಂಡದ್ದು ರಾಜ್ಯದ ಜನತೆಯಲ್ಲಿ ದೇವೇಗೌಡರ ಬಗ್ಗೆ ಹೊಸ ಭಾವನೆಯನ್ನು ಹುಟ್ಟು ಹಾಕಿದೆ, ಪ್ರಮುಖವಾಗಿ ಹಿಂದುಳಿದ ವರ್ಗದವರಲ್ಲಿ.

ಎಚ್. ಆಂಜನೇಯ

ಎಚ್. ಆಂಜನೇಯ

ಚುನಾವಣೆ ಮುಂಚೆ ದಲಿತರ ಬಗ್ಗೆ ಕಾಳಜಿ ತೋರಿಸಿ ಆಮೇಲೆ ನಿರ್ಲಕ್ಷ ತೋರುವ ಹಲವು ರಾಜಕಾರಣಿಗಳ ಮೇಲೆ ದಲಿತರಿಗೆ ಸಹಜ ಕೋಪವಿದೆ, ಇಲ್ಲದಿದ್ರೆ ಕಳೆದ ಬಾರಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತ ಎಚ್. ಆಂಜನೇಯವರು ಹೊಳಲ್ಕೆರೆ ಕ್ಷೇತ್ರದಲ್ಲಿ ಆ ಪರಿ ಸೋಲ ಅನುಭವಿಸುತ್ತಿರಲಿಲ್ಲ.

ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮುದಾಯವನ್ನು ಕಾಯುವ ನಾಯಕ ಬೇಕು

ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮುದಾಯವನ್ನು ಕಾಯುವ ನಾಯಕ ಬೇಕು

ಹಿಂದುಳಿದವರಿಗೆ ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮುದಾಯವನ್ನು ಕಾಯುವ ನಾಯಕ ಬೇಕು, ಅದರಂತೆ ಅವರಿಗೆ ಹಿಡಿಸಿದ್ದು ಅವರದ್ದೇ ಅಧಿಕೃತ ಮುದ್ರೆ ಇರುವ BSP, ಹಾಗಾಗಿ ಅದರ ನೂತನ ಶಾಸಕ ಮಹೇಶ್ ಅವರ ಕಣ್ಮಣಿಯಾಗಲೂಬಹುದು, ಆದರೆ ಅವರನ್ನು ಮುಖ್ಯವಾಹಿನಿಗೆ ತರುವ ಮೂಲಕ ದೇವೇಗೌಡರು ಮತ್ತೊಂದು ಸಂದೇಶ ರವಾನಿಸಿದ್ದಾರೆ, ಹಿಂದುಳಿದ ಸಮಾಜದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ಹಿಂದುಳಿದ ವರ್ಗ ಮತ್ತು ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಧ್ವನಿಸಿದರೆ ಅಚ್ಚರಿಪಡಬೇಕಿಲ್ಲ.

ಮುಂದಿನ ಚುನಾವಣೆಗಳಲ್ಲಿ ವೃದ್ಧಿಯಾಗಬಹುದು

ಮುಂದಿನ ಚುನಾವಣೆಗಳಲ್ಲಿ ವೃದ್ಧಿಯಾಗಬಹುದು

ಇನ್ನು ಸಮ್ಮಿಶ್ರ ಸರ್ಕಾರದಲ್ಲಿ BSP ಶಾಸಕರಿಗೆ ಸ್ಥಾನ ದೊರೆತರೆ ಆ ಪಕ್ಷಕ್ಕೆ ಅದು ಆಸರೆಯಾಗಿ ಅದರ ಸಂಖ್ಯೆ ಮುಂದಿನ ಚುನಾವಣೆಗಳಲ್ಲಿ ವೃದ್ಧಿಯಾಗಬಹುದು, ಎಡ ಬಲ ಎಂದು ಲೆಕ್ಕಿಸದೆ ದಲಿತ ಮತಗಳು BSP ಜೊತೆ ಹೋದರೆ ಅದರ ಮೊದಲ ಪೆಟ್ಟು ಬೀಳುವುದು ಇಲ್ಲಿಯವರೆಗೆ ದಲಿತ ಮತಗಳನ್ನು ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ. ಇನ್ನು ಕಾದು ನೋಡಬೇಕಾಗಿರುವುದು ಹೇಗೆ ಕೊಳ್ಳೇಗಾಲದ ಶಾಸಕರು ಈ ಮೈತ್ರಿಯನ್ನು ಮುಂದೆ ಕೊಂಡೊಯ್ಯುತ್ತಾರೆಂದು, BSP ಯ ಬಲ ವೃದ್ಧಿಯಾಗುತ್ತಾ ? ರಾಜ್ಯದಲ್ಲಿ ಪಕ್ಷ ಸಮಾಜದ ಒಳಿತಿಗೆ ಪಾರದರ್ಶಕವಾಗಿ ಕೆಲಸ ಮಾಡುತ್ತಾ ಎಂಬುದು.

English summary
Jds supremo Devegowda's coalition with BSP could shift Dalits from Congress to BSP-JDS in Karnataka. If that happens, Congress will loose it's core vote bank. BSP won the one seat in the recently concluded Karnataka Assembly Elections 2018 from Kollegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X