ರಾಜ್ಯದಲ್ಲಿ ಜಿಲ್ಲಾವಾರು ಇಂದು ದಾಖಲಾಗುವ ತಾಪಮಾನ ಮತ್ತು ಮಳೆಯ ವಿವರ, ಇಲ್ಲಿದೆ ಮಾಹಿತಿ
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ. ಹಾಗೂ ಜಿಲ್ಲಾವಾರು ತಾಪಮಾನದ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ, ಮಾರ್ಚ್, 16: ರಾಜ್ಯದಲ್ಲಿ ಬೇಸಿಗೆಯ ಸುಡುಬಿಸಿಲಿನ ನಡೆವೆಯೂ ವರುಣಾರ್ಭಟ ಮುಂದುವರೆದಿದೆ. ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಇದರಿಂದ ಎಷ್ಟೋ ತೆಂಗಿನ ಮರಗಳಿಗೆ ಹಾನಿಯಾಗಿದೆ. ಹಾಗೆಯೇ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಕರ್ನಾಟಕದಲ್ಲಿ ಮುಂದಿನ 4 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಹೆಚ್ಚುತ್ತಿರುವ ಬಿಸಿಲ ಧಗೆಯ ನಡುವೆಯೂ ಸಮುದ್ರದ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಮಳೆರಾಯ ಮತ್ತೆ ಆರ್ಭಟಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾದರೆ, ಕರಾವಳಿ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಯಾದಗಿರಿ, ಬಾಗಲಕೋಟೆ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಇನ್ನು ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯೆತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಷ್ಟು ತಾಪಮಾನ ದಾಖಲಾಗಲಿದೆ?
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಇದ್ದರೆ, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮಂಗಳೂರು ಗರಿಷ್ಠ ತಾಪಮಾನ 33, ಕನಿಷ್ಠ ತಾಪಮಾನ 24, ಶಿವಮೊಗ್ಗ ಗರಿಷ್ಠ 34, ಕನಿಷ್ಠ ತಾಪಮಾನ 19, ಬೆಳಗಾವಿ ಗರಿಷ್ಠ 33 ಕನಿಷ್ಠ ತಾಪಮಾನ 19, ಮೈಸೂರಿನಲ್ಲಿ ಗರಿಷ್ಠ ತಾಪಮಾನ 32 ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ತಾಪಮಾನ 33 ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ತಾಪಮಾನದ ವಿವರವನ್ನು ಇಲ್ಲಿ ತಿಳಿಯಿರಿ
ಕೋಲಾರ: 30-18
ತುಮಕೂರು: 31-18
ಉಡುಪಿ: 33-24
ಕಾರವಾರ: 32-25
ಚಿಕ್ಕಮಗಳೂರು: 31-16
ದಾವಣಗೆರೆ: 34-20
ಹುಬ್ಬಳ್ಳಿ: 33-19
ಚಿತ್ರದುರ್ಗ: 33-19
ಹಾವೇರಿ: 34-20
ಬಳ್ಳಾರಿ: 34-21
ಗದಗ: 33-20
ಕೊಪ್ಪಳ: 33-21
ರಾಯಚೂರು: 34-21
ಯಾದಗಿರಿ: 34-21
ವಿಜಯಪುರ: 33-21
ಬೀದರ್: 29-18
ಕಲಬುರಗಿ: 33-20
ಬಾಗಲಕೋಟೆ: 34-21

ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ?
ಮಡಿಕೇರಿ: 29-15
ರಾಮನಗರ: 32-19
ಹಾಸನ: 32-17
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 28-17

ಹವಮಾನ ವರದಿ ಹೇಳುವುದೇನು?
ಹೀಗೆ ಜಿಲ್ಲಾವಾರು ಗರಿಷ್ಠ ಮತ್ತು ಕನಿಷ್ಠ ತಾಪಮಾನದ ವಿವರವನ್ನು ನೋಡಬಹುದಾಗಿದೆ. ಇಂದು ಜಿಲ್ಲಾವಾರು ಆಗುವ ಮಳೆಯ ವಿವರವನ್ನು ಸಹ ಹೀಗೆ ವಿವರಿಸಲಾಗಿದೆ. ಹವಮಾನ ಇಲಾಖೆಯ ವರದಿಯ ಆಧಾರದ ಮೇಲೆ ಹೀಗೆ ಮಳೆ ವಿವರವನ್ನು ನೀಡಲಾಗಿದೆ. ಹಾಗೆಯೇ ಹವಮಾನ ಇಲಾಖೆಯ ಪ್ರಕಾರ ಇಂದು ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.












Click it and Unblock the Notifications