MLA's Monthly Salary: ರಾಜ್ಯದಲ್ಲಿ ಶಾಸಕರ ಮಾಸಿಕ ವೇತನ ಎಷ್ಟು?; ಇಲ್ಲಿದೆ ಅಂಕಿಅಂಶಗಳ ವಿವರ

MLA's Monthly Salary: ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಂತೆ ಶಾಸಕರಿಗೂ ಕೂಡ ಮಾಸಿಕ ವೇತನ ಇರುತ್ತದೆ. ಹಾಗಾದರೆ ಕರ್ನಾಟಕ ರಾಜ್ಯದಲ್ಲಿನ ಶಾಸಕರು ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.

ಜನಪ್ರತಿನಿಧಿಗಳು ಎಂದರೆ ಬೇಕಾದಷ್ಟು ಹಣ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಕರ್ನಾಟಕದ ಶಾಸಕರಿಗೆ ಸಿಗುವ ಮಾಸಿಕ ವೇತನದ ಬಗ್ಗೆ ತಿಳಿಯಲೇಬೇಕು. ಕರ್ನಾಟಕದಲ್ಲಿ ಶಾಸಕರಿಗೆ ಹಲವು ಸರ್ಕಾರೀ ಸೌಲಭ್ಯಗಳು ಲಭ್ಯವಾಗುತ್ತದೆ. ವಿಧಾನಸಭೆ ಕಲಾಪಕ್ಕೆ ಹಾಜರಾದರೆ, ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ, ದೂರವಾಣಿ ವೆಚ್ಚಗಳು ಸೇರಿದಂತೆ ಎಲ್ಲದಕ್ಕೂ ಸರ್ಕಾರಿ ನೌಕರರಂತೆಯೇ ಭತ್ಯೆ ನೀಡಲಾಗುತ್ತದೆ.

Details of MLA s Monthly Salary in State

ಇದೀಗ ರಾಜ್ಯದ ಶಾಸಕರಾದವರಿಗೆ ಮಾಸಿಕ ವೇತನ 40,000 ರೂಪಾಯಿಗಳಷ್ಟಿದೆ. ಇದು ವೇತನ ಮಾತ್ರ ಆಗಿದ್ದು, ಇದರ ಹೊರತಾಗಿ ತಮ್ಮ ಕ್ಷೇತ್ರ ಪ್ರಯಾಣ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 60,000 ರೂಪಾಯಿ, ಸಭೆಗೆ ಹಾಜರಾದರೆ 7,000 ರೂಪಾಯಿ, ದೂರವಾಣಿ, ಮೊಬೈಲ್ ಖರ್ಚಿಗಾಗಿ 20,000 ರೂಪಾಯಿ ಭತ್ಯೆ ಸಿಗುತ್ತದೆ. ಅಷ್ಟೇ ಅಲ್ಲದೆ, ವಾರ್ಷಿಕ ಪ್ರಯಾಣ ಭತ್ಯೆ 2.50 ಲಕ್ಷ ರೂಪಾಯಿ ಸಿಗುತ್ತದೆ.

2022ರಲ್ಲಿ ಕೊನೆಯದಾಗಿ ಶಾಸಕರ ವೇತನ ಶೇಕಡ 60ರಷ್ಟು ಹೆಚ್ಚಳ ಆಗಿತ್ತು. ಇದೀಗ ಮತ್ತೆ ಶಾಸಕರ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿದೆ. ಇದಕ್ಕೆ ಬಹುತೇಕ ಸಚಿವರು, ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆ ಶೀಘ್ರದಲ್ಲೇ ಶಾಸಕರ ವೇತನ ಹೆಚ್ಚಳ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಸರ್ಕಾರಿ, ಖಾಸಗಿ ಕಂಪನಿಗಳ ನೌಕಕರರಿಗೆ ತಿಂಗಳಿಗೆ ಇಂತಿಷ್ಟು ಸಂಬಳ ಅಂತಾ ನೀಡಲಾಗುತ್ತದೆ. ಮತ್ತೊಂದೆಡೆ ಸರ್ಕಾರಿ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹಾಗೆಯೇ ಶಾಸಕರಿಗೂ ಕೂಡ ಭತ್ಯೆ ನೀಡಲಾಗುತ್ತದೆ.

ಶಾಸಕರು ಸಾಮಾನ್ಯವಾಗಿ ಒಂದು ಕಡೆಯಿಂದ ಮತ್ತೊಂದೆಡೆಗೆ ಪ್ರವಾಸ ಬೆಳೆಸುತ್ತಾರೆಂದರೆ ಅದಕ್ಕೆ ಸರ್ಕಾರವೇ ಹಣವನ್ನು ಬರಿಸುತ್ತದೆ. ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳಾದರೂ ಅವರು ಭೇಟಿ ನೀಡಲೇಬೇಕಾಗುತ್ತದೆ. ಇದಕಂತಲೇ ಸರ್ಕಾರದಿಂದ ಹಣ ನೀಡಲಾಗುತ್ತದೆ. ಹೀಗೆ ಸರ್ಕಾರಿ ನೌಕರರಂತೆ ಅವರು ಸಂಬಳ ಪಡೆಯುತ್ತಾರೆ. ಆದರೆ ಅವರಿಗಿಂತ ಹೆಚ್ಚು. ಈ ಹಿಂದೆ ಶಾಸಕರ ಭತ್ಯೆಯನ್ನು ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಭತ್ಯೆ ಹೆಚ್ಚಳದ ಪ್ರಸ್ತಾಪ ಇಟ್ಟಿದ್ದು, ಮತ್ತೆ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+