ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆ ಯಾವ ಕ್ಷೇತ್ರದಲ್ಲಿ ಗೆಲುವು ಸುಲಭ, ಯಾವ ಕ್ಷೇತ್ರಗಳು ಕಠಿಣ- ಇಲ್ಲಿವೆ ಸಂಪೂರ್ಣ ವಿವರ

ಬೆಂಗಳೂರು, ಜನವರಿ 18: 2023 ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲು ಅನುಭವಿಸುವ ಮೂಲಕ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇದೀಗ ಎಚ್ಚರಿಕೆಯ ಹೆಜ್ಜೆ ಇಡಲು ಕೈ ನಾಯಕರು ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಹೌದು, ಲೋಕಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್‌ ಮುಂದಿನ ಚುನಾವಣೆಗಾಗಿ ಬಾರಿ ಪುನರಾವರ್ತನೆ ಆಗದಂತೆ ತಂತ್ರಗಾರಿಕೆ ರೂಪಿಸುತ್ತಿದೆ. ಕೇವಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು.

 Congress Partys Tough and Stronghold Lok Sabha Constituency List in Karnataka

ಇದೀಗ ಕನಿಷ್ಠ 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕೈ ನಾಯಕರು ಹಲವು ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಾವ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ, ಯಾವ ಕ್ಷೇತ್ರದಲ್ಲಿ ಗೆಲುವು ಕಠಣವಾಗಲಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನ ಕಣಕ್ಕಿಸುವ ಕುರಿತು ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್‌, ಗೆಲ್ಲಲು ಸಾಧ್ಯವಿದ್ದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳಿಗೆ ಜಾಸ್ತಿ ಒತ್ತು ಕೊಡಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಹಾಗಾದರೆ ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

 Congress Partys Tough and Stronghold Lok Sabha Constituency List in Karnataka

ಕಾಂಗ್ರೆಸ್‌ ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳು ಇಲ್ಲಿವೆ?

  • ಬೆಂಗಳೂರು ಗ್ರಾಮಾಂತರ
  • ಮಂಡ್ಯ
  • ಮೈಸೂರು
  • ಚಿಕ್ಕಬಳ್ಳಾಪುರ
  • ಕೋಲಾರ
  • ತುಮಕೂರು
  • ಚಾಮರಾಜನಗರ
  • ಬಳ್ಳಾರಿ
  • ಚಿತ್ರದುರ್ಗ
  • ವಿಜಯಪುರ
  • ರಾಯಚೂರು
  • ಬೆಳಗಾವಿ
  • ಕಲಬುರಗಿ

ಕಾಂಗ್ರೆಸ್‌ ಗೆ ಯಾವ ಕ್ಷೇತ್ರದಲ್ಲಿ ಗೆಲುವು ಕಷ್ಟಕರವಾಗಲಿದೆ ?

  • ಉತ್ತರ ಕನ್ನಡ
  • ದಕ್ಷಿಣ ಕನ್ನಡ
  • ಉಡುಪಿ -ಚಿಕ್ಕಮಗಳೂರು
  • ಧಾರವಾಡ
  • ಹಾಸನ
  • ಬೆಂಗಳೂರು ದಕ್ಷಿಣ
  • ಶಿವಮೊಗ್ಗ
  • ಬೀದರ್
  • ಚಿಕ್ಕೋಡಿ

50-50 ಸಾಧ್ಯತೆ ಇರುವ ಲೋಕಸಭಾ ಕ್ಷೇತ್ರಗಳು ?

  • ಕೊಪ್ಪಳ
  • ಬೆಂಗಳೂರು ಉತ್ತರ
  • ಬೆಂಗಳೂರು ಸೆಂಟ್ರಲ್
  • ದಾವಣಗೆರೆ
  • ಬಾಗಲಕೋಟೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+