ಧಮ್ಮು ತಾಕತ್ತಿರೋ ಬಿಜೆಪಿಯವ್ರು ಇದನ್ನ ಮಾಡಿ ತೋರಿಸಿ: ಪ್ರಿಯಾಂಕ್‌ ಹಾಕಿದ ಸವಾಲೇನು?

ವಕ್ಫ್ ಹಗರಣದಲ್ಲಿ ಖರ್ಗೆ ಕುಟುಂಬ ಭಾಗಿಯಾಗಿದೆ ಎಂದು ಕಾಂಗ್ರೆಸ್‌ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಟ್ವೀಟ್‌ ವಾರ್‌ ಶುರು ಮಾಡಿದೆ. ಪ್ರಿಯಾಂಕ್‌ ಕೂಡ ಟ್ವೀಟ್‌ನಲ್ಲಿ ಬಿಜೆಪಿಗೆ ತಿರುಗೇಟು ನೀಡಿ ಸವಾಲ್‌ ಕೂಡ ಹಾಕಿದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಒಂದೇ ಒಂದನ್ನು ಸಾಬೀತು ಮಾಡಿ ತೋರಿಸಲಿ, ಧಮ್ಮು ತಾಕತ್ತಿನ ಬಿಜೆಪಿಯವರಿಗೆ ಇದು ನನ್ನ ಸವಾಲು ಎಂದು ತೊಡೆತಟ್ಟಿದ್ದಾರೆ.

ಬಿಜೆಪಿ ಪಕ್ಷವು ತಮ್ಮ ರಾಜ್ಯಾಧ್ಯಕ್ಷರ ಮೇಲಿನ ಆರೋಪಗಳನ್ನು ಮತ್ತು ಹಗರಣಗಳನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಹಾಸ್ಯಾಸ್ಪದವಾಗಿ ನಡೆದುಕೊಳ್ಳುತ್ತಿದೆ. ನಮ್ಮ ಕುಟುಂಬ ವಕ್ಫ್ ಹಗರಣದಲ್ಲಿ ಭಾಗಿಯಾಗಿದೆ ಎನ್ನುವ ವರದಿ ನಿಜವೇ ಆಗಿದ್ದರೆ, ಬಿಜೆಪಿಯ ಮೂವರು ಮುಖ್ಯಮಂತ್ರಿಗಳು ಆ ವರದಿಯ ಆಧಾರದಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಅವರು ತಮ್ಮ ಬೆರಳು ಚೀಪುತ್ತಾ ಕುಳಿತಿದ್ದರೇ? ಎಂದು ಪ್ರಶ್ನಿಸಿದ್ದಾರೆ.

Congress Minister Priyank Kharge Challenges BJP Over Wakf Scam Allegations

ಬಿಜೆಪಿ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ನಾಲ್ಕು ಕೋಟಿ ವಕ್ಫ್ ಹಗರಣದ ಆರೋಪವಿರುವ ಅನ್ವರ್ ಮಾಣಿಪ್ಪಾಡಿಯ ವರದಿಯನ್ನು ಬಿಜೆಪಿಯವರು ಬೇಷರತ್ತಾಗಿ ಒಪ್ಪುತ್ತಾರೆಯೇ? ಹಾಗಿದ್ದರೆ, ಬಿಜೆಪಿ ಆಡಳಿತದಲ್ಲಿ ಮೂವರು ಸಿಎಂಗಳು ಏಕೆ ವರದಿಯ ಕುರಿತು ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಅನ್ವರ್ ಮಾಣಿಪ್ಪಾಡಿ ಅವರ ಹೇಳಿಕೆ ಪ್ರಕಾರ ಬಿ.ವೈ.ವಿಜಯೇಂದ್ರ ಅವರು ವರದಿಯನ್ನು ಮುಚ್ಚಿಹಾಕಲು ಅವರನ್ನು ಸಂಪರ್ಕಿಸಿದ್ದರಂತೆ, ವಿಜಯೇಂದ್ರರವರು ಯಾರ ಪರವಾಗಿ ಸಂಪರ್ಕಿಸಿದರು? ಅನ್ವರ್ ಮಾಣಿಪ್ಪಾಡಿ ಅವರು ಮೋದಿ, ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದರಂತೆ, ಹೀಗಿದ್ದರೂ ಮೋದಿ-ಶಾ ಜೋಡಿ ನಮ್ಮ ಕುಟುಂಬದ 4 ಕೋಟಿ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿಲ್ಲ ಏಕೆ? ಎಂದು ಕೇಳಿದ್ದಾರೆ.

Congress Minister Priyank Kharge Challenges BJP Over Wakf Scam Allegations

ಕಳೆದ 10 ವರ್ಷದಿಂದಲೂ ಬಿಜೆಪಿ ಹಾಗೂ ಅದರ ಫೇಕ್ ಫ್ಯಾಕ್ಟರಿಯು ನಮ್ಮ ಕುಟುಂಬ 50,000 ಕೋಟಿ ಆಸ್ತಿ ಹೊಂದಿದೆ ಎನ್ನುತ್ತಿದ್ದಾರೆ. ಈಗ ಹೊಸದಾಗಿ ನಮ್ಮ ಕುಟುಂಬ ವಕ್ಫ್ ಆಸ್ತಿಯನ್ನೂ ಹೊಂದಿದೆ ಎನ್ನುತ್ತಿದ್ದಾರೆ. ಬಿಜೆಪಿಯವರು ಒಂದೇ ಒಂದು ಸಾರಿ ಆ ನಮ್ಮ ಆಸ್ತಿ ಎಲ್ಲಿದೆ ಎಂದು ತೋರಿಸಿಬಿಡಲಿ. 50 ಸಾವಿರ ಕೋಟಿಯ ಆಸ್ತಿಗಾಗಿ ನಾನೂ ಕಾತುರನಾಗಿ ಕಾಯುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪನವರ ಪೊಕ್ಸೋ ಪ್ರಕರಣ ಮರೆಮಾಚಲು, ವಿಜಯೇಂದ್ರರವರ ವಕ್ಫ್ ಲಂಚ ಪ್ರಕರಣವನ್ನು ಅಡಗಿಸಲು ಹಾಗೂ ವಿಜಯೇಂದ್ರರವರ ಅಕ್ರಮ ಹಣ ವರ್ಗಾವಣೆ ಹಗರಣವನ್ನು ಮರೆಸಲು AJP, VJP, YJP ಎಂಬ ಬಿಜೆಪಿಯ ಬಣಜಗಳದಿಂದ ಗಮನ ಬೇರೆಡೆ ಸೆಳೆಯಲು ನಮ್ಮ ವಿರುದ್ಧ ಬಿಜೆಪಿ ಆರೋಪಗಳ ಮೇಲೆ ಆರೋಪಗಳು ಮಾಡುತ್ತಿದೆ ಎಂದು ಕಾರಣ ಕೊಟ್ಟಿದ್ದಾರೆ. ದಮ್ಮು ತಾಕತ್ತಿನ ಬಿಜೆಪಿಯವರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಒಂದೇ ಒಂದನ್ನು ಸಾಬೀತು ಮಾಡಿ ತೋರಿಸಲಿ ಎಂದು ಪ್ರಿಯಾಂಕ್‌ ಖರ್ಗೆ ಸವಾಲ್‌ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+