ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಗ್ ಬ್ರೇಕಿಂಗ್, ದಾಖಲೆ ಬಿಡುಗಡೆ
ಬೆಂಗಳೂರು, ಏಪ್ರಿಲ್ 06: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಗ್ ಬ್ರೇಕಿಂಗ್ ನೀಡಲು ಸಜ್ಜಾಗಿದೆ. ಯಡಿಯೂರಪ್ಪ ಅವರ ಹಗರಣದ ದಾಖಲೆಯನ್ನು ಇಂದು ಬಿಡುಗಡೆ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಹೇಳಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಇಂದು (ಏಪ್ರಿಲ್ 06)ರ ಮಧ್ಯಾಹ್ನ 1:30ಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿರುವ ಕಾಂಗ್ರೆಸ್ ರಾಜ್ಯ ನಾಯಕರು ಯಡಿಯೂರಪ್ಪ ಅವರ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಅವರು ಕೂಡಾ ಬಿಗ್ ಬ್ರೇಕಿಂಗ್ ಕೊಡುವುದಾಗಿ ಹೇಳಿ ಆಮೇಲೆ ಪಲಾಯನ ಮಾಡಿದ್ದರು. ಕೇವಲ ಹೆಸರಿಗಷ್ಟೆ ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್ ಮೇಲೆ ಟೀಕೆಯ ಭಾಷಣದ ವಿಡಿಯೋ ಅಪ್‌ಲೋಡ್ ಮಾಡಿ ಟೀಕೆ, ವ್ಯಂಗ್ಯಕ್ಕೆ ಗುರಿ ಆಗಿದ್ದರು.

ಈಗ ಕಾಂಗ್ರೆಸ್ ಕೂಡಾ ಬ್ರೇಕಿಂಗ್ ನೀಡುತ್ತೇನೆಂದು ಹೇಳಿದ್ದು, ಯಡಿಯೂರಪ್ಪ ಅವರ ಬ್ರೇಕಿಂಗ್‌ನಂತೆ ಠುಸ್.. ಆಗಲಿದೆಯೇ ಅಥವಾ ಯಡಿಯೂರಪ್ಪ ಅವರಿಗೆ ಸಂಚಕಾರ ತರುವ ತೂಕದ ಬ್ರೇಕಿಂಗ್ ಆಗಲಿದೆಯೇ ನೋಡಬೇಕಿದೆ.
ಚುನಾವಣೆ ಸಮಯದಲ್ಲಿ ಒಬ್ಬರ ಮೇಲೊಬ್ಬರು ಹಗರಣದ ಆರೋಪ ಹೊರಿಸುವುದು ದಾಖಲೆ ಬಿಡುಗಡೆಗೊಳಿಸುವುದು ಸಾಮಾನ್ಯದಂತಾಗಿದೆ. ಇತ್ತೀಚೆಗಷ್ಟೆ ಯಡಿಯೂರಪ್ಪ ಅವರು ಎಂ.ಬಿ.ಪಾಟೀಲ್ ಅವರ ಮೇಲೆ 200 ಕೋಟಿ ಹಗರಣದ ಆರೋಪ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದರು. ಆದರೆ ಅದು ಈಗಾಗಲೇ ರದ್ದಾಗಿರುವ ಗುತ್ತಿಗೆಯ ದಾಖಲೆ ಎಂಬುದು ಆ ನಂತರ ತಿಳಿದುಬಂದು ಯಡಿಯೂರಪ್ಪ ಅವರು ನಗೆಪಾಟಲಿಗೀಡಾದರು.
ಇಂದು ಕಾಂಗ್ರೆಸ್ ನೀಡಲು ಹೊರಟಿರುವ ಬಿಗ್ ಬ್ರೇಕಿಂಗ್ ಕುತೂಹಲ ಕೆರಳಿಸಿದ್ದು, ಈಗಾಗಲೇ ಡಿನೋಟಿಫೈನಂತಹಾ ಕೆಲವು ಆರೋಪಗಳನ್ನು ಹೊತ್ತಿರುವ ಯಡಿಯೂರಪ್ಪ ಅವರಿಗೆ ಮತ್ತೆ ಹಗರಣದ ಉರುಳು ಬೀಳುತ್ತದೆಯೊ ಅಥವಾ ಠುಸ್.. ಆಗುತ್ತದೆಯೋ ಕಾದು ನೋಡಬೇಕಿದೆ.











Click it and Unblock the Notifications