ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ: IIM ಬೆಂಗಳೂರು ಸೇರಿ 58 ಸಂಸ್ಥೆಗಳ 489 ಪದವೀಧರರ ನೇಮಕ

ಕೃತಕ ಬುದ್ಧಿಮತ್ತೆ (AI) ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳ ಜಾಗತಿಕ ದೈತ್ಯ ಕಂಪನಿಯಾಗಿರುವ ಕಾಗ್ನಿಜೆಂಟ್ ಇದೀಗ ಭಾರತದಲ್ಲಿ ತನ್ನ ವಿನೂತನ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಿದೆ.

ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ದೇಶದ 37 ವಿವಿಧ ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಒಟ್ಟು 489 ನುರಿತ ಪದವೀಧರರನ್ನ ಹೊಸದಾಗಿ ನೇಮಕ ಮಾಡಿಕೊಂಡಿದೆ. ಐಟಿ ವಲಯದಲ್ಲಿ ತಂತ್ರಜ್ಞಾನದ ಹಿನ್ನೆಲೆ ಇದ್ದವರಿಗೆ ಮಾತ್ರ ಕೆಲಸ ಎಂಬ ಮೈಲಿಗಲ್ಲನ್ನು ಮುರಿದಿರುವ ಸಂಸ್ಥೆ, ಭಿನ್ನ ಸಾಮರ್ಥ್ಯದ ಪ್ರತಿಭೆಗಳಿಗೆ ಮಣೆ ಹಾಕಿದೆ.

Cognizant

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ

ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕೇವಲ ಇಂಜಿನಿಯರ್‌ಗಳು ಹಾಗೂ ಟೆಕ್ಕಿಗಳು ಮಾತ್ರವಲ್ಲ, ವಿಭಿನ್ನ ಆಲೋಚನೆ ಮತ್ತು ಕೌಶಲ್ಯವುಳ್ಳ ಇತರ ಕ್ಷೇತ್ರದವರ ಅಗತ್ಯವೂ ಇದೆ ಎಂಬುದನ್ನು ಕಾಗ್ನಿಜೆಂಟ್ ಮನಗಂಡಿದೆ. ಈ ಹಿನ್ನೆಲೆಯಲ್ಲಿ, ಹೊಸದಾಗಿ ನೇಮಕಗೊಂಡ 489 ಅಭ್ಯರ್ಥಿಗಳ ಪೈಕಿ ಶೇ. 37ಕ್ಕೂ ಹೆಚ್ಚು ಮಂದಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್‌ - STEM) ಹಿನ್ನೆಲೆ ಇಲ್ಲದವರಾಗಿದ್ದಾರೆ.

ಇಂಜಿನಿಯರಿಂಗ್ ಬದಲಾಗಿ ಸಮಾಜಶಾಸ್ತ್ರ, ಮನೋವಿಜ್ಞಾನ, ಇಂಡಸ್ಟ್ರಿಯಲ್ ಡಿಸೈನ್ ಮತ್ತು ಕಚೇರಿ ನಿರ್ವಹಣೆಯಂತಹ ನಾನ್-ಟೆಕ್ ವಿಭಾಗಗಳಲ್ಲಿ ವ್ಯಾಸಂಗ ಮಾಡಿದ ಯುವ ಪ್ರತಿಭೆಗಳನ್ನು ಕಂಪನಿ ಅಪ್ಪಿಕೊಂಡಿರುವುದು ವಿಶೇಷ.

ಐಐಎಂ ಬೆಂಗಳೂರು ಸೇರಿ ಪ್ರತಿಷ್ಠಿತ ಸಂಸ್ಥೆಗಳಿಂದ ನೇಮಕ

ಈ ಬೃಹತ್ ನೇಮಕಾತಿಯಲ್ಲಿ ದೇಶದ ಅತ್ಯುನ್ನತ ಮ್ಯಾನೇಜ್ಮೆಂಟ್ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಐಐಎಂ ಬೆಂಗಳೂರು, ಐಐಎಂ ಲಕ್ನೋ, ಐಐಎಂ ಕೋಳಿಕ್ಕೋಡ್‌, ಎಕ್ಸ್‌ಎಲ್‌ಆರ್‌ಐ (XLRI) ಹಾಗೂ ಐಎಸ್‌ಬಿ (ISB) ಹೈದರಾಬಾದ್‌ನಂತಹ ಟಾಪ್ ಬಿಸಿನೆಸ್ ಸ್ಕೂಲ್‌ಗಳಿಂದ ಈ ಪ್ರತಿಭೆಗಳನ್ನು ಆರಿಸಲಾಗಿದೆ.

ಗಮನಾರ್ಹ ಸಂಗತಿಯೆಂದರೆ, ಕಾರ್ಪೊರೇಟ್ ವಲಯದಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೇಮಕಗೊಂಡ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 42ಕ್ಕೂ ಹೆಚ್ಚು ಮಂದಿ ಮಹಿಳೆಯರಾಗಿದ್ದಾರೆ.

ಏನಿದು ಕಾಗ್ನಿಜೆಂಟ್ 'ಟ್ಯಾಲೆಂಟ್ ಆಕ್ಸಿಲರೇಟರ್' ಕಾರ್ಯಕ್ರಮ?

ಇದು ಕಾಗ್ನಿಜೆಂಟ್ ಕಂಪನಿಗೆ ಹೊಸದಾಗಿ ಸೇರ್ಪಡೆಗೊಂಡ ಉದ್ಯೋಗಿಗಳಿಗೆ ನೀಡಲಾಗುವ ಎರಡು ವಾರಗಳ ತರಬೇತಿ ಕಾರ್ಯಕ್ರಮವಾಗಿದೆ. ಸದ್ಯ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿರುವ ಕಾಗ್ನಿಜೆಂಟ್‌ನ ಪ್ರಮುಖ ಕ್ಯಾಂಪಸ್‌ಗಳಲ್ಲಿ ಏಕಕಾಲದಲ್ಲಿ ಈ ತರಬೇತಿ ಶಿಬಿರ ನಡೆಯುತ್ತಿದೆ. ಈ ಅವಧಿಯಲ್ಲಿ ಹೊಸ ಉದ್ಯೋಗಿಗಳಿಗೆ ಕಂಪನಿಯ ಸಂಸ್ಕೃತಿ, ಮೌಲ್ಯಗಳು, ಸೇಲ್ಸ್ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಆಳವಾದ ತರಬೇತಿ ನೀಡಲಾಗುತ್ತದೆ.

ಇದರ ಜೊತೆಗೆ, ಕಾಗ್ನಿಜೆಂಟ್‌ನ ಹಿರಿಯ ನಾಯಕತ್ವ ತಂಡದೊಂದಿಗೆ ನೇರವಾಗಿ ಸಂವಾದ ನಡೆಸುವ, ಭವಿಷ್ಯದ ವಾಣಿಜ್ಯ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಅಪರೂಪದ ಅವಕಾಶವೂ ಇವರಿಗೆ ಲಭ್ಯವಾಗಲಿದೆ.

ವೈವಿಧ್ಯತೆಯೇ ನಮ್ಮ ಬಲ

ಈ ಬಗ್ಗೆ ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಸಿಎಂಡಿ ಮತ್ತು ಗ್ಲೋಬಲ್ ಆಪರೇಶನ್ಸ್ ಅಧ್ಯಕ್ಷ ರಾಜೇಶ್ ವಾರಿಯರ್, "ಗ್ರಾಹಕರಿಗೆ ಮತ್ತು ಸಂಸ್ಥೆಗೆ ಉತ್ತಮ ಮೌಲ್ಯ ತಂದುಕೊಡಲು ವೈವಿಧ್ಯಮಯ ಚಿಂತನೆಗಳ ಅಗತ್ಯವಿದೆ. ನಮ್ಮ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವು ದೇಶದ ವಿವಿಧ ಭಾಗಗಳ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತದೆ. ಎಐ ತಂತ್ರಜ್ಞಾನವನ್ನು ಬಳಸಿ ನೈಜ ಜಗತ್ತಿನ ವಾಣಿಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ಉದ್ಯೋಗಿಗಳನ್ನು ಇದು ಸಜ್ಜುಗೊಳಿಸಲಿದೆ," ಎಂದರು.

ಎಐ ಯುಗಕ್ಕೆ ಕಾಗ್ನಿಜೆಂಟ್ ಸಿದ್ಧತೆ

ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಗ್ನಿಜೆಂಟ್ ಬೃಹತ್ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ 5,000 ಫ್ರಾಂಟಿಯರ್ ಸರ್ಟಿಫೈಡ್ ಇಂಜಿನಿಯರ್‌ಗಳು ಹಾಗೂ 10,000 ಬಿಸಿನೆಸ್ ಆಪರೇಟರ್‌ಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ಉದ್ಯಮಗಳಿಗೆ ಎಐ ತಂತ್ರಜ್ಞಾನವನ್ನು ಅಳೆಯಬಹುದಾದ ಆರ್ಥಿಕ ಲಾಭವಾಗಿ ಪರಿವರ್ತಿಸಲು ನೆರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+