ಏಪ್ರಿಲ್ 23,24ರಂದು ಸಿಇಟಿ ಪರೀಕ್ಷೆ, ವಿದ್ಯಾರ್ಥಿಗಳೇ ಸಿದ್ಧರಾಗಿ
ಬೆಂಗಳೂರು, ಜನವರಿ 12: ಏಪ್ರಿಲ್ 23,24ರಂದು ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)-2019 ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಏ.23ರ ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, ಏಪ್ರಿಲ್ 24ರ ಬೆಳಗ್ಗೆ ರಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯದ ಪರೀಕ್ಷೆ 60 ಅಂಕಗಳದ್ದಾಗಿರಲಿದೆ. ಏ.25ರಂದು ಹೊರರಾಜ್ಯ ಮತ್ತು ಗಡಿನಾಡು ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಕನ್ನಡ ಭಾಷಾ ಜ್ಞಾನ ಪರೀಕ್ಷೆ ನಡೆಯಲಿದೆ.
ಬೆಳಗ್ಗೆ 10.30ರಿಂದ 11.50ರವರೆಗೆ ಹಾಗೂ ಮಧ್ಯಾಹ್ನ 3.50ರವರೆಗೆ ಪರೀಕ್ಷೆಗಳು ನಡೆಯುತ್ತದೆ. ಎಂಜಿನಿಯರಿಂಗ್, ತಂತ್ರಜ್ಞಾನ, ಬಿಎಸ್ಸಿ, ಕೃಷಿ, ಬಿಟೆಕ್, ಬಿ.ಫಾರ್ಮ್, ಫಾರ್ಮಾ-ಡಿ ಕೋರ್ಸ್ ಗಳಿಗೆ ಸಿಇಟಿ ನಡೆಸಲಾಗತ್ತದೆ. ಹೆಚ್ಚಿನ ವಿವರಗಳಿಗಾಗಿ http:kea.kar.nic.in ಸಂಪರ್ಕಿಸಬಹುದಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಸಿಬಿಎಸ್‌ಇ ನಡೆಸುವ ನೀಟ್ ಪರೀಕ್ಷೆ ಮೇ 5ರಂದು, ಜೆಇಇ ಅಡ್ವಾನ್ಸ್ ಮೇ 19, ಜೆಇಇ ಮೈನ್ ಎರಡನೇ ಬಾರಿಗೆ ಪರೀಕ್ಷೆ ಬರೆಯುವವರಿಗೆ ಏ.6 ರಿಂದ 20ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕಾಮೆಡ್-ಕೆ ಮತ್ತು ಕ್ಯಾಟ್ ಪರೀಕ್ಷೆಗಳು ಮೇ 12ರಂದು ನಡೆಯಲಿದೆ. ಎರಡೂ ಪರೀಕ್ಷೆಗಳು ಒಂದೇ ದಿನ ನಡೆಯುತ್ತಿರುವುದು ವಿದ್ಯಾರ್ಥಿಗಳನ್ನು ಆಂತಕ್ಕೀಡು ಮಾಡಿದೆ. ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆಯಲಿದೆ.











Click it and Unblock the Notifications