Railway Overpass: ರಾಜ್ಯದ 3 ಪ್ರಮುಖ ಭಾಗಗಳಿಗೆ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಹಣ ಮಂಜೂರು; ಮಾಹಿತಿ ಇಲ್ಲಿದೆ

Railway Overpass: ದೇಶದ ಹಲವೆಡೆ ದೊಡ್ಡ ಮಟ್ಟದಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲೂ ವಿ.ಸೋಮಣ್ಣ ರೈಲ್ವೆ ಖಾತೆ ಸಚಿವರಾದಾಗಿನಿಂದಲೂ ಕರ್ನಾಟಕದಲ್ಲಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಇದೀಗ ರಾಜ್ಯದಲ್ಲಿ 3 ರೈಲ್ವೆ ಮೇಲ್ಸೇತುವೆಗಳನ್ನ ರೈಲ್ವೆ ಇಲಾಖೆ ಮಂಜೂರು ಮಾಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯದಲ್ಲಿನ ಮೇಲ್ಸೇತುವೆಗಳ ನಿರ್ಮಾಣಕ್ಕೆ 101.47 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ. ಹೊಳೆನರಸೀಪುರದ ಅಕ್ಕಬಾಳು-ಮಂಡಗೆರೆ 15.69 ಕೋಟಿ ರೂಪಾಯಿ, ಮುಂಡಗೆರೆ-ಹೊಳೆನರಸೀಪುರ ನಡುವೆ 15.93 ಕೋಟಿ, ಬೀರೂರು ಜಂಕ್ಷನ್-ಕಡೂರು ಜಂಕ್ಷನ್ ನಡುವೆ 69.85 ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Central Govt has Sanctioned Railway Overpass for 3 major parts of the state

ಈ ಯೋಜನೆಗಳನ್ನು ವಿಶೇಷ ರೈಲ್ವೆ ಯೋಜನೆಗಳು ಎಂದು ಪರಿಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ರೈಲ್ವೆ ಕಾಮಗಾರಿಗಳನ್ನು ನಡೆಯುತ್ತಿವೆ. ಇನ್ನೂ ಕೆಲವು ಮುಗಿಯುವ ಹಂತದಲ್ಲಿವೆ. ಈ ನಡುವೆಯೇ ರೈಲ್ವೆ ಮೇಲ್ಸೇತುವೆಗೆ ರೈಲ್ವೆ ಇಲಾಖೆ ಹಣ ಮಂಜೂರು ಮಾಡಿದೆ ಎಂದು ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

ರೈಲು ನಿಲ್ದಾಣಗಳ ಕಾಮಗಾರಿ ಅಪ್ಡೇಟ್‌: ಬಹುನೀರಿಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಅಪ್ಡೇಟ್‌ವೊಂದು ಹೊರಬಿದ್ದೊದೆ. ಇದೀಗ ಕಾಮಗಾರಿ ಎಲ್ಲಿಗೆ ಬಂದಿದೆ? ಗುತ್ತಿಗೆಯನ್ನು ಯಾವ ಕಂಪನಿಗೆ ನೀಡಲಾಗಿದೆ ಹಾಗೂ ತಗಲುವ ವೆಚ್ಚ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಅಂಕಿಅಂಶಗಳ ಸಹಿತ ನೀಡಲಾಗಿದೆ ಗಮನಿಸಿ.

ಬೆಂಗಳೂರಿನ ಹೊರ ವಲಯದ ಪ್ರದೇಶಗಳನ್ನು ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ಚುರುಕು ಪಡೆದಿದೆ. ಕರ್ನಾಟಕದ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಸಚಿವರಾಗಿರುವ ಡಾ.ಎಂ.ಬಿ.ಪಾಟೀಲ್‌ ಅವರು ಕಳೆದ ವರ್ಷ ಕೈಗೊಂಡ ಕ್ರಮಗಳ ಭಾಗವಾಗಿ ಉಪನಗರ ರೈಲ್ವೆ ಯೋಜನೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ.

ಪ್ರಮುಖವಾಗಿ 8 ನಿಲ್ದಾಣಗಳನ್ನು ನಿರ್ಮಾ ಮಾಡಲು ಕ್ರೈಡ್‌ 501 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ ಕೊಟ್ಟಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಎರಡು ವರ್ಷದಲ್ಲಿ ನಿಲ್ದಾಣ ಹಾಗೂ ಇತರೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಸಮಯ ನಿಗದಿಪಡಿಸಲಾಗಿದೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಪ್ರಮುಖ ಬೆಳವಣಿಗೆಯಲ್ಲಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಕಾರಿಡಾರ್ 2ರ ಪ್ಯಾಕೇಜ್ ಸಿ2ಎ ಅಡಿಯಲ್ಲಿ 8 ನಿಲ್ದಾಣಗಳನ್ನು ನಿರ್ಮಾಣ ಮಾಡಲು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ 501 ಕೋಟಿ ರೂಪಾಯಿಗಳ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+