ಕಾವೇರಿ ನೀರು ವಿವಾದ: KRSನಿಂದ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಟ್ಟ ಕರ್ನಾಟಕ ಸರ್ಕಾರ: ರೈತರ ಆರೋಪ, ವೈರಲ್ ವಿಡಿಯೋ
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದವು ಇನ್ನೂ ಜಟಿಲವಾಗುತ್ತಿದೆ. ಇದೀಗ ಕಾವೇರಿ ನದಿ ನೀರನ್ನು ಕರ್ನಾಟಕ ಸರ್ಕಾರವು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದೆ ಎನ್ನುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಆರ್ಎಸ್ನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಕೆಆರ್ಎಸ್ನ 10 ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಮಾಡಿದ್ದಾರೆ. ಆದರೆ, ನಾವು ನೀರು ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ,
ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂನಿಂದ 10 ಗೇಟ್ಗಳ ಮೂಲಕ ಶುಕ್ರವಾರ ರಾತ್ರಿ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ರೈತರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನಿತ್ಯವೂ 12 ಸಾವಿರ ಕ್ಯುಸೆ ನೀರುಹರಿಸುವಂತೆ ಸಿಡಬ್ಲ್ಯುಸಿ ಹಾಗೂ ಸಿಡಬ್ಲ್ಯುಆರ್ಎ ಆದೇಶಿಸಿದೆ. ಆದರೆ, ಇದಕ್ಕೆ ಕರ್ನಾಟಕ ಸರ್ಕಾರವು ಸಹ ಆಕ್ಷೇಪ ವ್ಯಕ್ತಪಡಿಸಿದೆ. ರೈತರು ಸಹ ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದ್ದಾರೂ, ಕಬಿನಿಗೆ ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕೆಆರ್ಎಸ್ನಿಂದಲೇ ನೇರವಾಗಿ ನೀರು ಬಿಡಲಾಗುತ್ತಿದೆ ಎಂದು ಈ ಭಾಗದ ರೈತರು ಆಕ್ರೋಶ ಹೊರ ಹಾಕಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ರೈತರ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಜೆಡಿಎಸ್ ಹೇಳಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಒಂದೆಡೆ ಕಾವೇರಿ ಕೊಳ್ಳದ ನಮ್ಮ ಅನ್ನದಾತರ ಬೆಳೆಗಳು ನೀರಿಲ್ಲದೆ, ಜನ-ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿವೆ. ಆದರೆ, ಕನ್ನಡಿಗರ ಕಣ್ಣಿಗೆ ಮಣ್ಣೆರಚುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಅಪ್ಪಟ 'ರೈತ ವಿರೋಧಿ' ಹಾಗೂ 'ನಾಡದ್ರೋಹಿ' ಕೆಲಸ ಮಾಡುತ್ತಿದೆ!
ಹಗಲಿನಲ್ಲಿ "ಒಂದು ಹನಿಯೂ ನೀರು ಬಿಡಲ್ಲ" ಎಂದು ಮಾಧ್ಯಮಗಳ ಮುಂದೆ ಬೊಬ್ಬೆ ಹೊಡೆಯುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಚೆಲುವರಾಯಸ್ವಾಮಿ ನೀವು, ಕತ್ತಲಾದ ಮೇಲೆ ಕೆಆರ್ಎಸ್ (KRS) ಡ್ಯಾಂ ಗೇಟ್ ತೆರೆಯುವುದು ಯಾರನ್ನು ಮೆಚ್ಚಿಸಲು ?
ದೆಹಲಿ ಗುಲಾಮಗಿರಿ: ನಮ್ಮದೇ ನೆಲದಲ್ಲಿ ಹುಟ್ಟಿ ಹರಿಯುವ ಕಾವೇರಿ ತಾಯಿಯ ನೀರನ್ನು ನಮ್ಮ ರೈತರಿಗೆ ಒದಗಿಸದೆ, ನಿಮ್ಮ 'ಇಂಡಿಯಾ' (I.N.D.I.A) ಮೈತ್ರಿಕೂಟದ ಪಾಲುದಾರರನ್ನು ಓಲೈಸಲು ಕಾವೇರಿಯನ್ನೇ ದೆಹಲಿ ಹೈಕಮಾಂಡ್ನ ಪಾದಕ್ಕೆ ಅಡವಿಟ್ಟಿರುವುದು ಕನ್ನಡಿಗರಿಗೆ ಮಾಡಿದ ಅಕ್ಷಮ್ಯ ದ್ರೋಹ.
ರೈತರ ಬದುಕಿನ ಜೊತೆ ಚೆಲ್ಲಾಟ: ಜೆಡಿಎಸ್ ಟೀಕೆ
ಮಂಡ್ಯ, ಮೈಸೂರಿನ ಮಣ್ಣಿನ ಮಕ್ಕಳು ಬೆಳೆದ ಬೆಳೆಗಳು ಒಣಗುತ್ತಿದ್ದರೂ ನಿಮ್ಮ ಸರ್ಕಾರಕ್ಕೆ ಕರುಣೆ ಇಲ್ಲವೇ? ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರೈತರ ಬದುಕನ್ನು ಬಲಿಕೊಡುತ್ತಿದ್ದೀರಿ. ಕೂಡಲೇ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುವುದನ್ನು ನಿಲ್ಲಿಸಿ, ನಮ್ಮ ರೈತರ ಗದ್ದೆಗಳಿಗೆ ನೀರು ಕೊಡಿ. ಇಲ್ಲವಾದರೆ, ಕಾವೇರಿ ಕೊಳ್ಳದ ಉದ್ದಗಲಕ್ಕೂ ರೈತರನ್ನು ಸಂಘಟಿಸಿ, ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರ ಎಂದು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಜೆಡಿಎಸ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ರೈತರ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ!*
— Janata Dal Secular (@JanataDal_S) August 15, 2026
ಒಂದೆಡೆ ಕಾವೇರಿ ಕೊಳ್ಳದ ನಮ್ಮ ಅನ್ನದಾತರ ಬೆಳೆಗಳು ನೀರಿಲ್ಲದೆ, ಜನ-ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಪಡುತ್ತಿವೆ. ಆದರೆ, ಕನ್ನಡಿಗರ ಕಣ್ಣಿಗೆ ಮಣ್ಣೆರಚುತ್ತಿರುವ @INCKarnataka ಸರ್ಕಾರ, ರಾತ್ರೋರಾತ್ರಿ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುವ ಮೂಲಕ… pic.twitter.com/nzCNXqiuuL


Click it and Unblock the Notifications
