• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಧಕ್ಕೆ ನಿಂತಿರುವ ಕಟ್ಟಡ ಕಾಮಗಾರಿಗಳ ಬಗ್ಗೆ RERA ಏನು ಹೇಳುತ್ತೆ?

|

ಬೆಂಗಳೂರು, ಏಪ್ರಿಲ್ 9: ಇಡೀ ವಿಶ್ವವೇ ಕೊರೊನಾದಿಂದ ನರಳುತ್ತಿದೆ. ನಮ್ಮ ದೇಶವೂ ಅದರಿಂದ ಹೊರತಾಗೇನಿಲ್ಲ.

ಮಾರ್ಚ್ 15ಕ್ಕೆ ಮುಗಿಯಬೇಕಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳು ಲಾಕ್‌ಡೌನ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದು, ಮೂರು ತಿಂಗಳ ವಿನಾಯ್ತಿಯನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ನೀಡಿದೆ.

ಲಾಕ್‌ಡೌನ್ ನಿಂದಾಗಿ ರಿಯಲ್ ಎಸ್ಟೇಟ್ ವ್ಯಹಾರ ಸಂಪೂರ್ಣವಾಗಿ ಕುಸಿದಿದೆ. ಸಕಾಲಕ್ಕೆ ಕಟ್ಟಡಗಳ ನಿರ್ಮಾಣಕ್ಕೆ ಬೇಕಿರುವ ವಸ್ತುಗಳು ದೊರೆಯುತ್ತಿಲ್ಲ. ಕಾರ್ಮಿಕರು ಯಾರೂ ಕೆಲಸಕ್ಕೆ ಸಿಗುತ್ತಿಲ್ಲ. ಹೀಗಾಗಿ ಇನ್ನೂ ಮೂರು ತಿಂಗಳು ವಿನಾಯ್ತಿಯನ್ನು ನೀಡಿದೆ.

ಮಾರ್ಚ್ 15ಕ್ಕೆ ಮುಗಿಯುವಂತಹ ಕೆಲವು ಪ್ರಾಜೆಕ್ಟ್‌ಗಳಿದ್ದವು ಇವುಗಳಿಗೆ ಮುಂದಿನ ಮೂರು ತಿಂಗಳು ವಿನಾಯ್ತಿ ನೀಡಲಾಗಿದೆ. ಆದರೆ ದೀರ್ಘ ಕಾಲದ ಕಾಮಗಾರಿಗಳಿಗೆ ಯಾವುದೇ ವಿನಾಯ್ತಿ ನೀಡಲಾಗಿಲ್ಲ.

ನಾಲ್ಕೈದು ವರ್ಷಗಳಲ್ಲಿ ಮುಗಿಯುವ ಯೋಜನೆಗೆ ವಿನಾಯ್ತಿ ಇಲ್ಲ

ನಾಲ್ಕೈದು ವರ್ಷಗಳಲ್ಲಿ ಮುಗಿಯುವ ಯೋಜನೆಗೆ ವಿನಾಯ್ತಿ ಇಲ್ಲ

ಇತ್ತೀಚೆಗೆ ಆರಂಭಗೊಂಡ ಇನ್ನು ನಾಲ್ಕೈದು ವರ್ಷಗಳಲ್ಲಿ ಮುಗಿಯುವ ಯೋಜನೆಗಳಿಗೆ ಈ ವಿನಾಯ್ತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಮಿಕರ ಕೊರತೆ

ಕಾರ್ಮಿಕರ ಕೊರತೆ

ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ವಸ್ತುಗಳ ಪೂರೈಕೆ, ಕಾರ್ಮಿಕರ ಕೊರತೆಯಿಂದ ಯೋಜನೆಗಳು ನಿಗದಿತ ಸಮಯಕ್ಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಲ್ಡರ್ ಗಳಿಗೆ ಮೂರು ತಿಂಗಳ ವಿನಾಯ್ತಿ ನೀಡಲಾಗಿದೆ ಎಂದರು.

ಮನವಿ ಸಲ್ಲಿಸಿದ್ದ ಬಿಲ್ಡರ್‌ಗಳು

ಮನವಿ ಸಲ್ಲಿಸಿದ್ದ ಬಿಲ್ಡರ್‌ಗಳು

ಕಳೆದ ವಾರ ರೇರಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಲ್ಡರ್ ಗಳು ಕೋವಿಡ್-19ನ ಲಾಕ್ ಡೌನ್ ನಿಂದ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಲು ಸಾಧ್ಯವಿಲ್ಲದಿರುವುದರಿಂದ 3 ತಿಂಗಳ ವಿನಾಯ್ತಿ ನೀಡಬೇಕೆಂದು ಕೋರಿದ್ದರು.

ರೇರಾ ಸದಸ್ಯರು ಏನು ಹೇಳುತ್ತಾರೆ?

ರೇರಾ ಸದಸ್ಯರು ಏನು ಹೇಳುತ್ತಾರೆ?

ಈ ವರ್ಷ ಮಾರ್ಚ್ 15ಕ್ಕೆ ಮುಗಿಯಬೇಕಾಗಿದ್ದು ಮತ್ತು ಏಪ್ರಿಲ್ ನೊಳಗೆ ಮುಗಿಸುವ ನಿರ್ಮಾಣ ಯೋಜನೆಗಳಿಗೆ 3 ತಿಂಗಳ ವಿನಾಯ್ತಿ ನೀಡಲಾಗಿದೆ. ಈ ಬಗ್ಗೆ ರೇರಾ ಸದಸ್ಯ ವಿಷ್ಣುವರ್ಧನ್ ರೆಡ್ಡಿ ತಿಳಿಸಿದ್ದಾರೆ.

English summary
The Real Estate Regulatory Authority-Karnataka (Rera-K), has given a three-month extension for projects that were to be completed by March 15 but have been held up due to the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X