ಬಿಎಸ್ ವೈಗೆ ಢವಢವ: ನ.14ಕ್ಕೆ ಡಿನೋಟಿಫಿಕೇಷನ್ ಪ್ರಕರಣ ವಿಚಾರಣೆ
Recommended Video

ಬೆಂಗಳೂರು, ಸೆ.25: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎದುರಿಸುತ್ತಿರುವ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 14ರಂದು ನಡೆಸಲಿದೆ.
ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇನ್ ಪ್ರಕರಣವನ್ನು ಬಿಎಸ್ ವೈ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಎಸ್ ವೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಹೈಕೋರ್ಟ್ ತಡೆಹಿಡಿದಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನ.14ರಂದು ವಿಚಾರಣೆ ಮಾಡಲಿದೆ.
ಈ ಕುರಿತು ಸುಪ್ರೀಂಕೋರ್ಟ್ ಎದುರು ವಿಚಾರಣೆಗೆ ಬಂದಾಗ ಈ ಕುರಿತು ಸಮಗ್ರ ತನಿಖೆ ಮಾಡುವ ಅಗತ್ಯವಿದೆ ಎಂದು ಬಿಎಸ್ ವೈ ಪರ ವಕೀಲ ಹೇಳಿದ್ದಾರೆ. ಇವರ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಭಾನುಮತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಪ್ರಕರಣದ ಕುರಿತಂತೆ ಎಲ್ಲ ವಿವರಗಳನ್ನು ಕೋರ್ಟ್ ಗೆ ಸಲ್ಲಿಸಬೇಕೆಂದು ಸೂಚಿಸಿದೆ.

ಕೋರ್ಟ್ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ ಎಸಿಬಿ ಪರ ವಕೀಲರಾದ ಅಭಿಷೇಕ್ ಮನಸಿಂಘ್ವಿ ಮತ್ತು ಅರಿಸ್ಟಾಟಲ್, ಶಾಸನಬದ್ಧ ಸಂಸ್ಥೆಯೊಂದು ನಡೆಸುತ್ತಿದ್ದ ತನಿಖೆಗೆ ತಡೆ ನೀಡಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿದರು.












Click it and Unblock the Notifications