ಲಿಕ್ಕರ್, ಕುಕ್ಕರ್ ಹಂಚುವ ವಿಡಿಯೋ ತನ್ನಿ 50,000 ಗೆಲ್ಲಿ!
ಬೆಂಗಳೂರು, ಮೇ 2: ನಗರ ಜಯನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಹೊಸ ಬಹುಮಾನ ಯೋಜನೆ ಘೋಷಿಸಿದ್ದಾರೆ.
ಅದೇನೆಂದರೆ, "ಗಂಡಸರಿಗೆ ಲಿಕ್ಕರ್, ಹೆಂಗಸರಿಗೆ ಕುಕ್ಕರ್" ಹಂಚುತ್ತಿರುವ ಸ್ಟಿಂಗ್ ವಿಡಿಯೋ ತಂದುಕೊಟ್ಟವರಿಗೆ ರೂಪಾಯಿ 50,000 ಬಹುಮಾನ!
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡ, ಸೀರೆ, ಕುಕ್ಕರ್, ಟೋಕನ್ ಆಮಿಷ ಒಡ್ಡುತ್ತಿರುವ ಅಥವಾ ಹಂಚುತ್ತಿರುವ ವಿಶ್ವಾಸನೀಯ ಸ್ಟಿಂಗ್ ವಿಡಿಯೋವನ್ನು ತಲುಪಿಸಿದಲ್ಲಿ, ಅಂತಹ ದೇಶಪ್ರೇಮಿಗಳಿಗೆ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಅವರು ಪ್ರಕಟಣೆ ಹೊರಡಿಸಿದ್ದಾರೆ.

ಸ್ಟಿಂಗ್ ಮಾಡಿದ ವಿಡಿಯೋ ಸಿಕ್ಕ ತಕ್ಷಣ 9449559451 ಅಥವಾ 7975625575 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ಕೋರಿಕೊಂಡಿದ್ದಾರೆ.
ಚುನಾವಣಾ ಸಮಯದಲ್ಲಿ ಪ್ರಬಲ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಅವರು ಈ ಯೋಜನೆ ಹಾಕಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.












Click it and Unblock the Notifications