BPL And APL Card: ರಾಜ್ಯದಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ
BPL And APL Ration Card: ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಇದರಲ್ಲಿಯೂ ಬಿಪಿಎಲ್ ಹಾಗೂ ಎಪಿಎಲ್ ಎಂಬ ಕಾರ್ಡ್‌ಗಳಿದ್ದು, ಇಷ್ಟು ದಿನ ಈ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಲಾಗಿತ್ತು. ಆದರೆ, ಇದೀಗ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ ಎಷ್ಟು ದಿನ ಹಾಗೂ ಎಲ್ಲಿ ಸಲ್ಲಿಸಬಹುದು ಎಂದು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ನಕಲಿ ಕಾರ್ಡ್‌ಗಳ ಹಾವಳಿ ತಪ್ಪಿಸಲು ಆಹಾರ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಹೊಸ ಬಿಪಿಎಲ್ ಕಾರ್ಡಗಳನ್ನು ವಿತರಿಸದಂತೆ ಆದೇಶ ನೀಡಿತ್ತು. ಆದರೆ ಇದೀಗ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮತ್ತೆ ಇದೀಗ BPl ಹಾಗೂ BPL ಪಡಿತರ ಚೀಟಿಗೆ ಅರ್ಜಿ ಆಹ್ವಾನಿಲಸಲಾಗಿದೆ. ಏಪ್ರಿಲ್ 17 2025ರಿಂದ ಅವಕಾಶ ಕಲ್ಪಿಸಲಾಗಿದ್ದು, ಇಂದೇ ಅಂದರೆ ಏಪ್ರಿಲ್ 18 ಕೊನೇ ದಿನವಾಗಿದೆ. ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಮಾರ್ತ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಹೆಬ್ಬೆಟ್ಟು ಕೊಡಲು ಬರಬೇಕಾಗುತ್ತದೆ. ಅಲ್ಲದೆ, ಬೇಕಾದ ದಾಖಲೆಗಳನ್ನು ತರಬೇಕಾಗುತ್ತದೆ.
ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
* ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಕುಟುಂಬದ ಒಬ್ಬ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಇ-ಮೇಲ್ ಐಡಿ
* ಮೊಬೈಲ್ ಸಂಖ್ಯೆ
* ವಿದ್ಯುತ್ ಬಿಲ್
* ಪ್ಯಾನ್ ಕಾರ್ಡ್
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?: ಕರ್ನಾಟಕದ ಎಲ್ಲಾ ಖಾಯಂ ನಿವಾಸಿಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಮಾನದಂಡಗಳಿಗೆ ಅನುಸಾರವಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಹುದಾಗಿದೆ. ಮತ್ತೊಂದೆಡೆ ತಿದ್ದುಪಡಿ ಕಾರ್ಯ ಕೂಡ ನಡೆಯುತ್ತಿದೆ.
ಏನಲ್ಲ ತಿದ್ದುಪಡಿಗೆ ಅವಕಾಶವಿದೆ?
* ಕುಟುಂಬದ ಮುಖ್ಯಸ್ಥರ ಬದಲಾವಣೆ
* ಪಡಿತರ ಚೀಟಿ ವಿಳಾಸ ಬದಲಾವಣೆ
* ರೇಷನ್ ಕಾರ್ಡ್ ನ್ಯಾಯಬೆಲೆ ಅಂಗಡಿ ಬದಲಾವಣೆ
* ಕುಟುಂಬದ ಹೊಸ ಸದಸ್ಯರ ಸೇರ್ಪಡೆ
* ರೇಷನ್ ಕಾರ್ಡ್‌ನಿಂದ ಸದಸ್ಯರ ತೆಗೆದು ಹಾಕುವುದು
* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಈ ಕೆವೈಸಿ ಮಾಡಲು ಅವಕಾಶ
* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ
* ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಇತರ ಬದಲಾವಣೆಗೆ ಮಾಡಿಸಬಹುದಾಗಿದೆ
ಹೊಸ ಸದಸ್ಯರ ಸೇರ್ಪಡೆ ಹೇಗೆ?
* ಅಧಿಕೃತ ವೆಬ್‌ಸೈಟ್ https://ahara.karnataka.gov.in/ ಭೇಟಿ ನೀಡಿ.
* ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಜಿಲ್ಲಾವಾರು ಮಾಹಿತಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳು ಇವೆ.
* ಹೊಸ ರೇಷನ್ ಕಾರ್ಡ್ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್ ಕಾರ್ಡ್ ಕರೆಕ್ಷನ್ಸ್ ಆಯ್ಕೆ ಸೆಲೆಕ್ಟ್ ಮಾಡಬೇಕಾಗುತ್ತದೆ.
* ಹೊಸ ಪೇಜ್‌ನಲ್ಲಿ ಕಾಣಸುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
* ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.
* ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆ ಆಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳು
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್
* ಕುಟುಂಬದ ಸದಸ್ಯರ ಜಾತಿ ಪ್ರಮಾಣ ಪತ್ರ
* ಕುಟುಂಬದ ಸದಸ್ಯರ ಆದಾಯ ಪ್ರಮಾಣ ಪತ್ರ
* ಮಕ್ಕಳ ಜನನ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ರೇಷನ್ ಕಾರ್ಡ್
* ಇತರ ಅಗತ್ಯ ದಾಖಲಾತಿಗಳು












Click it and Unblock the Notifications