ಸದನದಿಂದ ಹೊರನಡೆದ ಶಿವನಗೌಡ ನಾಯಕ್, ಅನುಮಾನಕ್ಕೆ ಪುಷ್ಠಿ

ಬೆಂಗಳೂರು, ಫೆಬ್ರವರಿ 11: ಆಡಿಯೋ ಕ್ಲಿಪ್ ಕುರಿತು ಸದನದಲ್ಲಿ ಚರ್ಚೆ ಪ್ರಾರಂಭವಾದ ಕೆಲವು ಹೊತ್ತಿನಲ್ಲೇ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಸದನದಿಂದ ಹೊರ ನಡೆದರು. ಇದು ಬಹುವಾಗಿ ಗಮನ ಸೆಳೆಯಿತು.

ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿರುವುದು ಸದನಕ್ಕೆ ಸಂಬಂಧಿಸಿದವರೆ, ಸದನದಲ್ಲಿರುವವರೆ ಮಾತನಾಡಿದ್ದಾರೆ ಎಂಬ ಅನುಮಾನ ಇದೆ ಎಂದು ಸ್ವತಃ ರಮೇಶ್ ಕುಮಾರ್ ಅವರು ಅನುಮಾನ ವ್ಯಕ್ತಪಡಿಸಿದರು. ತಕ್ಷಣ ಶಿವನಗೌಡ ನಾಯಕ್ ಅವರು ಸದನದಿಂದ ಹೊರ ನಡೆದರು.

ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರದ್ದೇ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇಂತಹಾ ಸಮಯದಲ್ಲಿ ಇಂದು ಸದನದಲ್ಲಿ ಚರ್ಚೆ ಆರಂಭ ಆಗುತ್ತಿದ್ದಂತೆ ಶಿವನಗೌಡ ನಾಯಕ್ ಅವರು ಹೊರ ಹೋಗಿದ್ದು ಗಮನಸಿಸಿದರೆ ಅನುಮಾನಗಳಿಗೆ ಪುಷ್ಠಿ ನೀಡುವಂತಿದೆ.

BJP MLA Shivanagowda Nayak walks out of house when Audio clip debate is started

ಆಡಿಯೋ ಕ್ಲಿಪ್ ಬಗ್ಗೆ ಸರ್ಕಾರವು ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಅವರಿಗೆ ಸಲಹೆ ನೀಡಿದರು. ಆದರೆ ಬಿಜೆಪಿಯು ಸರ್ಕಾರದ ತನಿಖೆಗೆ ವಿರೋಧ ವ್ಯಕ್ತಪಡಿಸಿದ್ದು, ತನಿಖೆಯು ಸ್ಪೀಕರ್ ಅವರ ನಿರ್ದೇಶನದಂತೆಯೇ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+