‘ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ’
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರತಿಯೊಂದಕ್ಕೂ ಪರ್ಸಂಟೇಜ್ ಫಿಕ್ಸ್ ಮಾಡಿದ್ದಾರೆ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದರು. ಆದರೆ ಇದೀಗ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಧನಿಗೂಡಿಸುವ ರೀತಿ ಬಿಜೆಪಿಯು ಕೂಡ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪವನ್ನ ಮಾಡಿದೆ. ಜೆಡಿಎಸ್ & ಬಿಜೆಪಿ ಮೈತ್ರಿ ಅಂತಿಮ ಹಂತದಲ್ಲಿರುವಾಗ ಈ ಬೆಳವಣಿಗೆ ಗಮನ ಸೆಳೆದಿದೆ.
ಅಂದಹಾಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು ಭಾರಿ ಬಹುಮತದ ಸರ್ಕಾರ ರಚಿಸಿದೆ. ಆದರೆ ಹೀಗೆ, ಕಾಂಗ್ರೆಸ್ ಕರ್ನಾಟಕದ ಮತದಾರರ ಮನಸ್ಸು ಗೆಲ್ಲಲು ಗ್ಯಾರಂಟಿ ಯೋಜನೆ ಜೊತೆಗೆ ಬಿಜೆಪಿ ವಿರುದ್ಧ ಮಾಡಿದ್ದ 40 ಪರ್ಸೆಂಟ್ ಆರೋಪ ಕೂಡ ಸಹಾಯ ಮಾಡಿತ್ತು. ಆದರೆ ಇದೀಗ ಬಿಜೆಪಿ, ಕಾಂಗ್ರೆಸ್ ವಿರುದ್ಧ ಇದೇ ಕಮಿಷನ್ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗುತ್ತಿದೆ. ಹೀಗಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪವನ್ನ ಮಾಡುತ್ತಿದೆ. ಹಾಗಾದ್ರೆ ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ, ಕರ್ನಾಟಕ ಬಿಜೆಪಿ ಆರೋಪ ಏನು?

'ನೇಮಕಾತಿ ಪರೀಕ್ಷೆಗಳಲ್ಲೂ ಕಲೆಕ್ಷನ್'??
ಕಾಂಗ್ರೆಸ್ ಸರ್ಕಾರದಿಂದ ನೇಮಕಾತಿ ಪರೀಕ್ಷೆಗಳಲ್ಲು ಕಲೆಕ್ಷನ್ ನಡೆಯುತ್ತಿದೆ ಎಂದು ಇದೀಗ ಬಿಜೆಪಿ ಆರೋಪ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ, 'ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ. ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ @INCKarnataka ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ.' ಎಂದು ಗಂಭೀರ ಆರೋಪ ಮಾಡಿದೆ ಕರ್ನಾಟಕ ಬಿಜೆಪಿ.
ಅಲ್ಲದೆ ತನ್ನ ಟ್ವೀಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ, ಆರೋಪ ಮುಂದುವರಿಸಿರುವ ಬಿಜೆಪಿ 'ಉನ್ನತ ಶಿಕ್ಷಣ ಸಚಿವ @drmcsudhakar ಅವರೇ, ಈ ಪರಿಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರೋ ಅಥವಾ ಇವರಿಗೂ ಅಮಾಯಕರು/ಮುಗ್ದರು ಎಂಬ ಪಟ್ಟ ಕಟ್ಟುತ್ತಿರೋ..? ಪ್ರತಿ ಅಭ್ಯರ್ಥಿಗಳಿಂದ ವಸೂಲಿ ಮಾಡಿರುವ ₹5-8 ಲಕ್ಷದಲ್ಲಿ ಹೈಕಮಾಂಡ್ ಪಾಲೆಷ್ಟು ಎಂಬುದನ್ನು @INCKarnataka ವೇ ಹೇಳಬೇಕು!!!' ಎಂದು ಈ ಮೂಲಕ ಸವಾಲು ಹಾಕಿದೆ.
ರಾಜ್ಯದ #ATMSarkara ನೇಮಕಾತಿ ಪರೀಕ್ಷೆಗಳಲ್ಲಿಯೂ ಸಹ ಕಲೆಕ್ಷನ್‌ಗೆ ಇಳಿದಿದೆ.
— BJP Karnataka (@BJP4Karnataka) October 29, 2023
ಕಾಂಗ್ರೆಸ್ ಮುಖಂಡ ಆರ್. ಡಿ. ಪಾಟೀಲ್ ಬೆಂಬಲಿಗರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಗಮನಿಸಿದರೆ, @INCKarnataka ಸರ್ಕಾರವೇ ಪರೀಕ್ಷಾ ಅಕ್ರಮಕ್ಕೆ ಕುಮ್ಮಕ್ಕು ನೀಡಿದೆ ಎಂಬುದು ಸಾಬೀತಾಗುತ್ತದೆ.
ಉನ್ನತ ಶಿಕ್ಷಣ ಸಚಿವ @drmcsudhakar ಅವರೇ, ಈ… pic.twitter.com/NHtxzxKb1R
ಈ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪರೀಕ್ಷಾ ಅಕ್ರಮದ ಆರೋಪವನ್ನೂ ಹೊರಿಸಿದೆ. ಇಷ್ಟುದಿನ ಬೇರೆ ಬೇರೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾಲು ಸಾಲು ಫೈಟಿಂಗ್ ನಡೆಯುತ್ತಿತ್ತು. ಆದರೆ ಈಗ ಪರೀಕ್ಷಾ ಅಕ್ರಮದ ಆರೋಪ ವಿಚಾರವೂ ಎಂಟ್ರಿಯಾಗಿದೆ. ಈ ಮೂಲಕ ಬಿಜೆಪಿ ಈಗ, ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಕೈ ಪಾಳಯ ಯಾವ ರೀತಿ ಉತ್ತರ ನೀಡುತ್ತೆ? ಕಾದು ನೋಡಬೇಕಿದೆ.












Click it and Unblock the Notifications