Price Hike: ಕರ್ನಾಟಕದಲ್ಲಿ ಬೈಕ್‌, ಕಾರು ಖರೀದಿದಾರರಿಗೆ ಎದುರಾಯ್ತು ಬೆಲೆ ಏರಿಕೆಯ ಶಾಕ್‌!

Price Raise: ಕರ್ನಾಟಕದಲ್ಲಿ ಬೆಲೆ ಏರಿಕೆಯ ಬಿಸಿ ಮುಂದುವರಿದಿದೆ. ರಾಜ್ಯದಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆ ಆಗುತ್ತಲ್ಲೇ ಇದೆ. ಇದೀಗ ಬೈಕ್ ಹಾಗೂ ಕಾರು ಖರೀದಿ ಮಾಡುವವರಿಗೆ ಶಾಕ್‌ ಎದುರಾಗಿದೆ. ಹೌದು ಕರ್ನಾಟಕದಲ್ಲಿ ವಾಹನ ಖರೀದಿದಾರರಿಗೆ ಶಾಕ್‌ ಎದುರಾಗಿದೆ. ಕರ್ನಾಟಕದಲ್ಲಿ ಬೈಕ್ ಹಾಗೂ ಕಾರು ಖರೀದಿಯ ಬೆಲೆ ಹೆಚ್ಚಳಕ್ಕೆ ಕಾರಣವೇನು, ಎಷ್ಟು ಬೆಲೆ ಏರಿಕೆಯಾಗುತ್ತಿದೆ ಎನ್ನುವುದು ಸೇರಿದಂತೆ ಪೂರ್ತಿ ವಿವರ ಇಲ್ಲಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಮತ್ತೊಮ್ಮೆ ಬೆಲೆ ಏರಿಕೆಯ ಮೂಲಕ ಶಾಕ್‌ ಕೊಡುತ್ತಿದೆ. ಇದು ಸಹಜವಾಗಿಯೇ ಜನರ ಆಕ್ರೋಶ ಕಾರಣವಾಗಿದೆ. ಕರ್ನಾಟಕದಲ್ಲಿ ಹೊಸ ಕಾರು ಹಾಗೂ ಬೈಕ್ ಖರೀದಿ ಮಾಡುವವರಿಗೆ ಇದೀಗ ಆಘಾತ ಎದುರಾಗಿದೆ. ಹೌದು ಕರ್ನಾಟಕದಲ್ಲಿ ಬೆಲೆ ಏರಿಕೆ ವಿವಿಧ ವಸ್ತುಗಳು ಹಾಗೂ ಹೊಸ ವಸ್ತುಗಳ ಖರೀದಿಯ ಮೇಲೆ ಆಗುತ್ತಿದ್ದು. ಜನ ಇದಕ್ಕೆ ಆಕ್ರೋಶ ಸಹ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ಬೈಕ್ ಮತ್ತು ಕಾರುಗಳ ಖರೀದಿಯ ಮೇಲೆ ಹೊಸ ಹೊರೆ ಶುರುವಾಗಿದೆ. ಇದು ಫೆಬ್ರವರಿಯಿಂದಲೇ ಜಾರಿಯಾಗಲಿದೆ.

Bike Car Registration Price Hike in Karnataka

ಬೈಕ್ ಹಾಗೂ ಕಾರು ಖರೀದಿ ಮಾಡುವವರಿಗೆ ಶಾಕ್‌!

ರಾಜ್ಯ ಕಾಂಗ್ರೆಸ್‌ ಸರ್ಕಾರವು ಬೆಲೆ ಏರಿಕೆಯನ್ನು ಮುಂದುವರಿಸಿದೆ. ಜನರ ವಿರೋಧದ ನಡುವೆಯೂ ಕೆಲವು ವಸ್ತುಗಳ ಬೆಲೆ ಏರಿಕೆ ಮುಂದುವರಿಯುತ್ತಲ್ಲೇ ಇದೆ. ಇದೀಗ ಮುಂದಿನ ತಿಂಗಳಿನಿಂದ ಅಂದರೆ ಫೆಬ್ರವರಿ 1ರಿಂದ ರಾಜ್ಯದಲ್ಲಿ ಬೈಕ್‌ ಮತ್ತು ಕಾರು ಖರೀದಿಯ ನೋಂದಣಿಯ ಬೆಲೆ / ರಿಜಿಸ್ಟ್ರೇಷನ್ ಮೊತ್ತವನ್ನು ಹೆಚ್ಚಿಸುವುದಕ್ಕೆ ಸರ್ಕಾರ ಮುಂದಾಗಿದೆ. ಪ್ರತಿ ಹೊಸ ಬೈಕ್ ಹಾಗೂ ಕಾರು ರಿಜಿಸ್ಟ್ರೇಷನ್ ಬೆಲೆಯು 1000 ರೂಪಾಯಿ ಮತ್ತು 500 ರೂಪಾಯಿ ಹೆಚ್ಚಳವಾಗಲಿದೆ. ಇನ್ನು ರಿಜಿಸ್ಟ್ರೇಷನ್ ಶುಲ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಅನುಮೋದನೆ ಸಹ ಸಿಕ್ಕಿದೆ.

ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳ ವಿರೋಧ: ಇನ್ನು ರಾಜ್ಯ ಸರ್ಕಾರವು ರಿಜಿಸ್ಟ್ರೇಷನ್ ಶುಲ್ಕವನ್ನು ಹೆಚ್ಚಿಸಿರುವುದಕ್ಕೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷದಿಂದ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು. ಜನರ ಸಾಮಾನ್ಯರ ಮೇಲೆ ಹೊರೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಾರಿಗೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಬೆಲೆ ಏರಿಕೆ ಆಗುತ್ತಲ್ಲೇ ಇದೆ ಎನ್ನುವ ಆಕ್ರೋಶ ಜನ ಸಾಮಾನ್ಯರಿಂದ ವ್ಯಕ್ತವಾಗುತ್ತಿದೆ. ಯಾಕೆಂದರೆ ರಾಜ್ಯದಲ್ಲಿ ಸಾರಿಗೆ ಬಸ್‌ ಹಾಗೂ ಮೆಟ್ರೋ ಸೇರಿದಂತೆ ವಿವಿಧ ಸಂಚಾರ ಸಾರಿಗೆಗಳ ಬೆಲೆ ಏರಿಕೆ ಈಗಾಗಲೇ ಆಗಿದೆ. ಇದೀಗ ಸ್ವಂತ ವಾಹನ ಖರೀದಿ ಮಾಡುವವರಿಗೂ ಸಣ್ಣ ಹೊರೆ ಎದುರಾಗಿದೆ.

Bike Car Registration Price Hike in Karnataka

ಸಾರಿಗೆ ವಲಯದಲ್ಲಿ ಹೆಚ್ಚಳ: ಇನ್ನು ರಾಜ್ಯದಲ್ಲಿ ಇತ್ತೀಚೆಗಷ್ಟೇ ಸರ್ಕಾರಿ ಬಸ್‌ಗಳ ಬೆಲೆ ಏರಿಕೆಯಾಗಿತ್ತು. ಆದರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್‌ ಬೆಲೆ ಹೆಚ್ಚಳವಾಗಿದೆ. ಈ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ವಾಹನ ಖರೀದಿದಾರರಿಗೂ ಶಾಕ್‌ ಎದುರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡಲಿದೆ. ಸಹಜವಾಗಿಯೇ ಈ ಸಂದರ್ಭದಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಒಟ್ಟಾರೆ ಜನರಿಗೆ ಒಂದಿಲ್ಲೊಂದು ಬೆಲೆ ಏರಿಕೆಯ ಶಾಕ್‌ ಎದುರಾಗುತ್ತಲ್ಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+