ಬಿಡದಿ ಟೌನ್​ಶಿಪ್: ರೈತರಿಗೆ ಹೈಕೋರ್ಟ್ ಬಿಗ್​ ರಿಲೀಫ್; ಕಾನೂನು ಹೋರಾಟಕ್ಕೆ ಜಯ ಎಂದ ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಜಂಟಿಯಾಗಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ ಪ್ರತಿಷ್ಠಿತ ಬಿಡದಿ ಟೌನ್‌ಶಿಪ್ (ಸ್ಮಾರ್ಟ್ ಸಿಟಿ) ಯೋಜನೆಗೆ ಉಚ್ಚ ನ್ಯಾಯಾಲಯ (ಹೈಕೋರ್ಟ್) ಮಧ್ಯಂತರ ತಡೆಯಾಜ್ಞೆ ನೀಡಿದೆ. ರೈತರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ನ್ಯಾಯಾಲಯದ ಈ ನಿರ್ಧಾರದಿಂದಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾದಂತಾಗಿದೆ.

ಬಿಡದಿ ಟೌನ್​ಶಿಪ್ ಯೋಜನೆ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಹೋರಾಟವನ್ನ ನಡೆಸಿದ್ದರು. ಬಿಡದಿ ಟೌನ್​ಶಿಪ್ ಯೋಜನೆಗೆ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸರ್ಕಾರ, ಬಿಡದಿಯ ಮಂಡಲಹಳ್ಳಿ, ವಡೇರಹಳ್ಳಿ, ಕೆಂಪಯ್ಯನಪಾಳ್ಯ ಗ್ರಾಮಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದನ್ನ ಪ್ರಶ್ನಿಸಿ ರೈತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ರೈತರ ಪರ ತೀರ್ಪು ನೀಡಿದ್ದು, ಬಿಗ್‌ ರಿಲೀಫ್‌ ನೀಡಿದಂತಾಗಿದೆ.

Bidadi Township Big Relief for Farmers Karnataka High Court Delivers Key Verdict on Bidadi Township Project

ಕಾನೂನು ಹೋರಾಟಕ್ಕೆ ಜಯ: ನಿಖಿಲ್ ಕುಮಾರಸ್ವಾಮಿ

ರಾಮನಗರ ರೈತರ ಪರವಾಗಿ ಜೆಡಿಎಸ್ ಕಾನೂನು ಹೋರಾಟ ಆರಂಭಿಸಿತ್ತು. ಯೋಜನೆಗೆ ವಿರೋಧ ಇರುವ ರೈತರು ವಕಾಲತ್ತು ನೀಡಿದ್ದರು. ವಕಾಲತ್ತು ಹಾಕಿದ್ದ ರೈತರಿಗೆ ಇದೀಗ ತಾತ್ಕಾಲಿಕ ಜಯ ಸಿಕ್ಕಿದೆ. ಇದು ಟೌನ್ ಶಿಪ್ ವಿರುದ್ಧದ ಹೋರಾಟಕ್ಕೆ ಶುಭಸೂಚನೆಯಾಗಿದೆ

ಈ ಕುರಿತು ರಾಮನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು, ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ರೈತರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪರಿಹಾರದ ಮೊತ್ತ ನಿಗದಿಯಾಗುವವರೆಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸದಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ ಎಂದು ತಿಳಿಸಿದರು. ಇನ್ನುಳಿದ ಗ್ರಾಮಗಳ ರೈತರ ವಕಾಲತ್ತು ಪತ್ರಗಳನ್ನು ಸಹ ಕೋರ್ಟ್‌ಗೆ ಸಲ್ಲಿಸಲಾಗಿದ್ದು, ಈ ಶುಕ್ರವಾರ ಆ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಅವರು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಸರ್ಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಯೋಜನೆ ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದ ನಿಖಿಲ್, "2013ರ ಭೂ ಸ್ವಾಧೀನ ಕಾಯ್ದೆಯ ಪ್ರಕಾರ ಈ ಯೋಜನೆ ಜಾರಿಯಾಗುತ್ತಿಲ್ಲ. ಆದರೂ ಅದೇ ಕಾಯ್ದೆಯನ್ನು ಉಲ್ಲೇಖಿಸಿ ಸರ್ಕಾರ ಮುಂದುವರೆಯುತ್ತಿದೆ. ಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ. ಅಂತಿಮವಾಗಿ ರೈತರ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸ ನಮಗಿದೆ" ಎಂದರು.

ಟೌನ್ ಶಿಪ್ ಯೋಜನೆ ಜಾರಿಗೆ ಜಿಬಿಡಿಎ ಬಳಿ ಸಾಕಷ್ಟು ಹಣವೇ ಇಲ್ಲ ಎಂದು ದೂರಿದ ಅವರು, "ಬಿಎಂಆರ್‌ಡಿಎ ಆಸ್ತಿಯನ್ನು ಅಡಮಾನ ಇಟ್ಟು ಸ್ವಲ್ಪ ಹಣ ಸಂಗ್ರಹಿಸಲಾಗಿದೆ. ಸರ್ಕಾರದ ಬೊಕ್ಕಸವೂ ಖಾಲಿಯಾಗಿದೆ. ಕೆಲವರಿಗೆ ಚೆಕ್ ನೀಡಿ ರೈತರನ್ನು ಆಕರ್ಷಿಸುವ ತಂತ್ರ ಸರ್ಕಾರದ್ದು. ಆದರೆ ಯಾವುದೇ ಕಾರಣಕ್ಕೂ ರೈತರು ಭೂಮಿ ನೀಡುವುದಿಲ್ಲ" ಎಂದು ನಿಖಿಲ್ ಅವರು ಸ್ಪಷ್ಟಪಡಿಸಿದರು. ಯಾರು ಮಂತ್ರಿ ಆದರೂ, ಮುಖ್ಯಮಂತ್ರಿ ಆದರೂ ರೈತರ ವಿರುದ್ಧ ಹೋಗಬಾರದು" ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಇದು ಸರ್ಕಾರಕ್ಕೆ ಮತ್ತು ಆ ಪಕ್ಷಕ್ಕೆ ಬಿಟ್ಟ ವಿಚಾರ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಅವರ ತೀರ್ಮಾನ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದಾರೆ. ಆ ರಾಜೀನಾಮೆಗಳು ಅಂಗೀಕಾರವಾಗುತ್ತವೆಯೇ ಅಥವಾ ಇದು ಬ್ಲಾಕ್‌ಮೇಲ್ ತಂತ್ರವೇ ಎಂಬುದನ್ನು ಕಾದು ನೋಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+