Bengaluru Water Crisis : ವಾಟರ್ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್ ಹಾಕಿದ ಸರ್ಕಾರ: ದರ ನಿಗದಿ ಮಾಡಿ ಆದೇಶ!

ಬೆಂಗಳೂರು, ಮಾರ್ಚ್‌ 07: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳುತ್ತಿದೆ. ಹನಿ ಹನಿ ನೀರಿಗೂ ಸಹ ಜನ ಪರದಾಡುತ್ತಿದ್ದಾರೆ. ಟ್ಯಾಂಪರ್‌ ನೀರಿಗಾಗಿ ಮೂರ್ನಾಲ್ಕು ಗಂಟೆ ಕಾದು ಕುಳಿತರು ನೀರು ಸಿಗದೇ ಜನ ರೋಸಿ ಹೋಗಿದ್ದಾರೆ. ಈ ನಡುವೆ ಖಾಸಗಿ ವಾಟರ್‌ ಟ್ಯಾಂಕರ್‌ ಮಾಫಿಯಾ ಜೋರಾಗಿಯಾಗಿದ್ದು, ದುಬಾರಿ ಬೆಲೆ ನೀರನ್ನ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗಿತ್ತಿವೆ.

ದುಬಾರಿ ಬೆಲೆಗೆ ಖಾಸಗಿ ಟ್ಯಾಂಕರ್‌ ಗಳ ಹಾವಳಿಗೆ ಬ್ರೇಕ್‌ ಹಾಕಲು ಇದೀಗ ರಾಜ್ಯ ಸರ್ಕಾರ ಟ್ಯಾಂಕರ್‌ ಗಳಿಗೆ ದರ ನಿಗದಿ ಮಾಡಿದೆ. ಖಾಸಗಿ ಟ್ಯಾಂಕರ್‌ ಗಳ ಮಾಫಿಯಾದ ಬಗ್ಗೆ ಕೂಡ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು. ಡಿಸಿಎಂ ಡಿ ಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇದರ ಬಳಿಕ ಜಲ ಮಂಡಳಿ ಹಾಗೂ ಬಿಬಿಎಂಪಿ ಜಂಟಿಯಾಗಿ ಸಭೆ ನಡೆಸಿ, ಅಕ್ರಮ ನೀರಿನ ಟ್ಯಾಂಕರ್‌ ಗಳ ಸಂಖ್ಯೆ, ಹಾಗೂ ಟ್ಯಾಂಕರ್‌ ಮಾಲೀಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದು, ಇದೀಗ ಕೊನೆಗೂ ಟ್ಯಾಂಕರ್ ನೀರಿಗೆ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Bengaluru Water Crisis To Curb Tanker Mafia In Bangalore Finally Price Fix For Tanker Water

ಟ್ಯಾಂಕರ್ ನೀರಿನ ದರ ವಿವರ ಇಲ್ಲಿದೆ

* 6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.

* 6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.

* 8 ಸಾವಿರ ಲೀಟರ್ ಟ್ಯಾಂಕರ್​ಗೆ 700 ರೂ. ದರ ನಿಗದಿ‌‌ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.

* 8 ಸಾವಿರ ಲೀಟರ್​ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.

* 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್​​ಗೆ 1000 ರೂ. ದರ ನಿಗದಿ ಮಾಡಲಾಗಿದೆ.

* 1200 ಲೀಟರ್ ಟ್ಯಾಂಕರ್​​​ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.

ನೀರಿಗೆ ದರ ನಿಗದಿಪಡಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶದಲ್ಲಿ ಜಿಎಸ್​​ಟಿ ಸೇರಿಸಿ ಈ ದರ ಫಿಕ್ಸ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್​​​ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+