ಬೆಂಗಳೂರು ವ್ಯಾಮೋಹ: ಕರ್ನಾಟಕದ ಹೆಸರು ಬದಲಾವಣೆ ಅಂತ... ಕನ್ನಡಿಗರಿಗೆ ಎದುರಾಯ್ತು ಆತಂಕ!

ರಾಜ್ಯ ಸರ್ಕಾರವು ಒಂದೊಂದೆ ಜಿಲ್ಲೆಗಳ ಹೆಸರು ಬದಲಾಯಿಸುತ್ತಿದೆ. ಅಲ್ಲದೇ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳನ್ನು ಗ್ರೇಟರ್ ಬೆಂಗಳೂರು ಜಿಲ್ಲೆಗೆ ಸೇರಿಸಬೇಕು ಎನ್ನುವ ಒತ್ತಡವನ್ನು ರಾಜ್ಯ ಸರ್ಕಾರದ ಪ್ರಭಾವಿ ಸಚಿವರು ಹೇರುತ್ತಿದ್ದಾರೆ. ರಾಜ್ಯ ಸರ್ಕಾರವು ಈ ರೀತಿ ನಡೆದುಕೊಳ್ಳುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಕರ್ನಾಟಕದ ಹೆಸರು ಬದಲಾವಣೆಯಾದರೂ ಅಚ್ಚರಿಯಿಲ್ಲ ಅಂತಲೇ ಹೇಳಲಾಗುತ್ತಿದೆ. ರಾಜ್ಯ ಸರ್ಕಾರದ ಬೆಂಗಳೂರು ವ್ಯಾಮೋಹದ ಬೆನ್ನಲ್ಲೇ ಕರ್ನಾಟಕದ ಹೆಸರು ಬದಲಾವಣೆ ಆಗುತ್ತೆ ಅಂತ ಗಂಭೀರ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರು ಈಗಾಗಲೇ ಬೆಳೆದಿದೆ. ಬೆಂಗಳೂರಿನ ರಿಯಲ್‌ ಎಸ್ಟೇಟ್ ವ್ಯಾಪ್ತಿಯನ್ನು ಅಕ್ಕಪಕ್ಕದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಕೆಲವು ಪ್ರಭಾವಿಗಳು ಪ್ರಯತ್ನಿಸುತ್ತಿದ್ದು ಸದ್ದಿಲ್ಲದೆ ಒಂದೊಂದೆ ಜಿಲ್ಲೆಗಳಿಗೆ ಬೆಂಗಳೂರಿನ ಹೆಸರು ಸೇರುತ್ತಿದ್ದರೆ. ಇನ್ನೂ ಕೆಲವು ಜಿಲ್ಲೆಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಒತ್ತಡ ಶುರುವಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರು ಮೇಲಿನ ರಾಜ್ಯ ಸರ್ಕಾರದ ವ್ಯಾಮೋಹಕ್ಕೆ ಕನ್ನಡಿಗರು ಗರಂ ಆಗಿದ್ದಾರೆ. ಮುಂದೊಂದು ದಿನ ಕರ್ನಾಟಕದ ಹೆಸರು ಬದಲಾದರೂ ಬದಲಾಗಬಹುದು ಅಂತ ಜನ ಹೇಳ್ತಾ ಇದ್ದಾರೆ. ಇದು ಯಾಕೆ ಎನ್ನುವುದನ್ನು ನೋಡೋಣ...

Bengaluru obsession Kannadigas face fear over Karnatakas name change

ರಾಜ್ಯ ಸರ್ಕಾರದ ಬೆಂಗಳೂರು ವ್ಯಾಮೋಹವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇಡೀ ಕರ್ನಾಟಕವನ್ನು ಬೆಂಗಳೂರಿಗೆ ಸೇರಿಸಿ ಬಿಡಿ ಕರ್ನಾಟಕ ಹೆಸರನ್ನು ಬದಲಾಯಿಸಿ ಬೆಂಗಳೂರು ಅಂತ ಮಾಡಿಬಿಡಿ ಅಂತ ಕನ್ನಡಿಗರು ರಾಜ್ಯ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇನ್ನು ಇದೀಗ ಗೃಹ ಸಚಿವ ಜಿ. ಪರಮೇಶ್ವರ್ ಅವರು ತುಮಕೂರು ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸುವುದಕ್ಕೆ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಅಂತ ಹೇಳಿದ್ದಾರೆ.

ಈ ರೀತಿ ರಾಜ್ಯ ಸರ್ಕಾರವು ದಕ್ಷಿಣ ಕರ್ನಾಟಕ ಕೇಂದ್ರೀತ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಿರುವುದು ಹಾಗೂ ಬೆಂಗಳೂರು ವ್ಯಾಮೋಹ ಹೆಚ್ಚಾಗುತ್ತಿರುವುದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ಸರ್ಕಾರವು ಮುಂದೊಂದು ದಿನ ಕರ್ನಾಟಕದ ಹೆಸರನ್ನು ಬದಲಾಯಿಸಿ ಬೆಂಗಳೂರು ಅಂತ ಮಾಡಿದರೂ ಅಚ್ಚರಿ ಇಲ್ಲ ಅಂತಲೇ ಹೇಳಲಾಗುತ್ತಿದೆ. ಬೆಂಗಳೂರು.. ಹೆಸರನ್ನು ಎಲ್ಲಾ ಜಿಲ್ಲೆಗಳಿಗೂ ಹೋಲ್‌ಸೆಲ್‌ ಆಗಿ ಇರಿಸಿಬಿಡಿ ಅಂಯ ಜನ ವ್ಯಂಗ್ಯವಾಡುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಕೆಲವು ಪ್ರಭಾವಿಗಳ ಬೆಂಗಳೂರು ವ್ಯಾಮೋಹ. ಕೆಲವರು ಇದನ್ನು ಮುಕ್ತವಾಗಿಯೇ ಹೇಳಿದ್ದಾರೆ. ಬೆಂಗಳೂರಿಗೆ ರಿಯಲ್‌ ಎಸ್ಟೇಟ್ ಬ್ರ್ಯಾಂಡ್‌ ಇದೆ. ಇದನ್ನೇ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿದರೆ ರಿಯಲ್ ಎಸ್ಟೇಟ್‌ ಅಭಿವೃದ್ಧಿಗೂ ಬಳಸಿಕೊಳ್ಳಬಹುದು ಎನ್ನುವುದು ಕೆಲವರ ಲೆಕ್ಕಾಚಾರವಾಗಿದೆ. ಆದರೆ, ಹೆಸರು ಬದಲಾವಣೆ ಆದರೆಷ್ಟೇ ಸಾಕೇ ಅಭಿವೃದ್ಧಿ ಬೇಡವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+