Bank Holiday 2025: ಜನವರಿ 1 ಬ್ಯಾಂಕ್ ರಜೆ ಗೊಂದಲ: ಸ್ಪಷ್ಟನೆ ಇಲ್ಲಿದೆ
ಹೊಸ ವರ್ಷದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. 2024ಕ್ಕೆ ಹೃದಯ ಪೂರ್ವಕವಾಗಿ ವಿದಾಯ ಹೇಳಿ 2025ನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲೆಡೆ ಸಿದ್ಧತೆ ಜೋರಾಗಿದೆ. ಹೊಸ ನಿರೀಕ್ಷೆಯೊಂದಿಗೆ ನೂತನ ವರ್ಷಾರಂಭಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಹಾಗೆಯೇ ಸಡಗರ ಸಂಭ್ರಮದಿಂದ ಹೊಸವರ್ಷವನ್ನು ಸ್ವಾಗತಿಸಲು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.
ಹೊಸ ವರ್ಷದ ದಿನ ಏನಾದರೂ ವಿಶೇಷವಾದ ಹೊಸತನದ ಕೆಲಸ ಮಾಡಬೇಕು ಎನ್ನುವುದು ಕೆಲವರಿಗೆ ಇರುತ್ತದೆ. ಈ ಹೊಸ ವರ್ಷದ ದಿನ ಹಣಕಾಸು ಅಥವಾ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಆರಂಭಿಸಬೇಕು ಎಂದುಕೊಂಡವರು ಈ ಸುದ್ದಿಯನ್ನು ಸರಿಯಾಗಿ ಗಮನಿಸಿ. ಹೊಸ ವರ್ಷದ ದಿನ ಅಂದರೆ ಜನವರಿ ೧ ಬುಧವಾರ ಬ್ಯಾಂಕ್ ರಜೆ ಇದೆಯೋ? ಇಲ್ಲವೋ ಎನ್ನುವ ಗೊಂದಲಕ್ಕೆ ಉತ್ತರ ಇಲ್ಲಿದೆ.

ಹೊಸ ವರ್ಷದ ದಿನ ಅಂದರೆ ಜನವರಿ ೧ ಬುಧವಾರ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇನ್ನು ಸ್ಥಳೀಯ ಬ್ಯಾಂಕ್‌ಗಳು ಅವುಗಳ ಕಾರ್ಯವೈಖರಿಗೆ ಅನುಕೂಲಕ್ಕೆ ತಕ್ಕಂತೆ ರಜೆ ನೀಡುವ ಸಾಧ್ಯತೆ ಇದೆ. ಆದರೆ ಜನವರಿ ೧ ಬುಧವಾರ ದೇಶದಾದ್ಯಂತ ಬಹುತೇಕ ಬ್ಯಾಂಕ್‌ಗಳು ರಜೆ ಇರುತ್ತದೆ.
ಆರ್ಬಿಐ ಕ್ಯಾಲಂಡರ್ ಪ್ರಕಾರ 2025ರ ಜನವರಿ ತಿಂಗಳ ರಜೆಯನ್ನು ಘೋಷಿಸಲಾಗಿದ್ದು, ಈ ಪ್ರಕಾರ ಹೊಸ ವರ್ಷದ ಮೊದಲ ದಿನ ಜನವರಿ ೧ ಬ್ಯಾಂಕ್ ರಜೆ ಇರುತ್ತದೆ. ಆರ್ಬಿಐ ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಸೇರಿದಂತೆ 2025ರ ಜನವರಿ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ ಇರುತ್ತದೆ.
ಇನ್ನು ಕರ್ನಾಟಕದಲ್ಲಿ 2025ರ ಜನವರಿ ತಿಂಗಳಲ್ಲಿ ಎಂಟು ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಈ ಬಗ್ಗೆ ವಿವರ ಇಲ್ಲಿದೆ.
*ಜನವರಿ 1, ಬುಧವಾರ- ಹೊಸ ವರ್ಷದ ರಜೆ
* ಜನವರಿ 5- ಭಾನುವಾರದ ರಜೆ
* ಜನವರಿ 11- ಎರಡನೇ ಶನಿವಾರದ ರಜೆ
*ಜನವರಿ 12_ ಭಾನುವಾರದ ರಜೆ
*ಜನವರಿ 14, ಮಂಗಳವಾರ- ಸಂಕ್ರಾಂತಿ ಹಬ್ಬದ ರಜೆ
*ಜನವರಿ 19-ಭಾನುವಾರದ ರಜೆ
*ಜನವರಿ 25- ನಾಲ್ಕನೇ ಶನಿವಾರದ ರಜೆ
*ಜನವರಿ 26-ಭಾನುವಾರದ ರಜೆ ಹಾಗೂ ಗಣರಾಜ್ಯೋತ್ಸವ












Click it and Unblock the Notifications