ಬೆಂಗಳೂರಿನ ಮತದಾರರ ಪಟ್ಟಿಗೆ ಬಾಂಗ್ಲಾ ವಲಸಿಗರು : ಬಿಎಸ್‌ವೈ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 07 : 'ಬೆಂಗಳೂರು ನಗರದಲ್ಲಿ ಎರಡೂವರೆ ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ' ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಬೆಂಗಳೂರಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಪರಿವವರ್ತನಾ ಯಾತ್ರೆ ಉದ್ದೇಶಿಸಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ಕಾಂಗ್ರೆಸ್ ಈ ದೇಶದ ದೊಡ್ಡ ಸಮಸ್ಯೆ : ಯೋಗಿ ಆದಿತ್ಯನಾಥ್

'ಎರಡೂವರೆ ಲಕ್ಷ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಮತದಾರರ ಪಟ್ಟಿಗೆ ಸೇರಿರುವ ಕೆಲಸವನ್ನು ಸಚಿವ ಜಾರ್ಜ್, ಶಾಸಕ ಬೈರತಿ ಬಸವರಾಜ್‌ಗೆ ವಹಿಸಲಾಗಿದೆ' ಎಂದು ದೂರಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಧಿ ವಿಸ್ತರಣೆ

Bangladeshi migrants name adding to Voter list Yeddyurappa

'ಬೆಂಗಳೂರು ನಗರದಲ್ಲಿ ಮತದಾರರ ಪಟ್ಟಿಗೆ ನಕಲಿ ಹೆಸರುಗಳು ಸೇರ್ಪಡೆಗೊಳ್ಳುತ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು' ಎಂದು ಯಡಿಯೂರಪ್ಪ ಹೇಳಿದರು.

ಸಿದ್ದರಾಮಯ್ಯ ರಿವರ್ಸ್ ಗೇರ್ : ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್, 'ಪ್ರಧಾನಿ ನರೇಂದ್ರ ಮೋದಿ ಟಾಪ್ ಗೇರ್, ಮನಮೋಹನ್ ಸಿಂಗ್ ನ್ಯೂಟ್ರಲ್ ಗೇರ್, ಸಿದ್ದರಾಮಯ್ಯ ರಿವರ್ಸ್ ಗೇರ್' ಎಂದು ಹೇಳಿದರು.

'ಸಿದ್ದರಾಮಯ್ಯ ರಿವರ್ಸ್ ಗೇರ್. ಆದ್ದರಿಂದ, ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದೆ. ನಿಮಗೆ ರಿವರ್ಸ್ ಗೇರ್ ಬೇಕಾ?, ಟಾಪ್ ಗೇರ್ ಮೋದಿ, ಯಡಿಯೂರಪ್ಪ ಬೇಕಾ?' ಎಂದು ಜನರನ್ನು ಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 2 lakh Bangladeshi migrants in Bengaluru city and illegally their name adding to voter list said, Karnataka BJP president B.S.Yeddyurappa. He addressed Nava Karnataka Parivarthana Yatra in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ