B Khata: ಬಿ ಖಾತಾಗೆ ಎಷ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕು, ಪ್ರಮುಖ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

B Khata New Updates: ಕರ್ನಾಟಕ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಸಂಬಂಧಿಸಿದ ಒಂದು ಬಾರಿ ಬಿ ಖಾತಾ ನೀಡುವುದಕ್ಕೆ ನಿರ್ಧರಿಸಿದೆ. ಇದರೊಂದಿಗೆ ಮೂರು ತಿಂಗಳ ಅವಧಿಗೆ ಮೊದಲು ಬಿ ಖಾತಾ ನೀಡಲು ನಿರ್ಧರಿಸಲಾಗಿತ್ತು. ಇದೀಗ ಇನ್ನೂ ಮೂರು ತಿಂಗಳ ಅವಧಿಗೆ ಬಿ ಖಾತಾ ನೀಡುವುದನ್ನು ವಿಸ್ತರಿಸಲಾಗಿದ್ದರೂ ಬಿ ಖಾತಾಗೆ ಸಂಬಂಧಿಸಿದ ಗೊಂದಲಗಳು ಪರಿಹಾರವಾಗಿಲ್ಲ. ಅಲ್ಲದೇ ಬಿ ಖಾತಾ ಮಾಡಿಸಿಕೊಳ್ಳಬೇಕಾದರೆ ಎಷ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕು ಎನ್ನುವ ಬಗ್ಗೆ ಜನರಲ್ಲಿ ಇನ್ನೂ ಗೊಂದಲಗಳು ಮುಂದುವರಿದಿದೆ. ಅಲ್ಲದೇ ಬಿ ಖಾತಾಗೆ ಸಂಬಂಧಿಸಿದಂತೆ ಆಸ್ತಿದಾರರು ಯಾವ ವಿಷಯಕ್ಕೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಸರ್ಕಾರದ ಉತ್ತರವೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಯಾವುದೇ ಖಾತಾ ಇಲ್ಲದೆ ಇರುವ ಹಾಗೂ ಅನಧಿಕೃತ ಆಸ್ತಿಗಳಿಗೆ ರಾಜ್ಯ ಸರ್ಕಾರವು ಬಿ ಖಾತಾ ಗುಡ್‌ನ್ಯೂಸ್‌ ನೀಡಿದೆ. ಆದರೆ ಬಿ ಖಾತಾ ಪಡೆದುಕೊಳ್ಳುವಾಗ ಎಷ್ಟು ದುಡ್ಡು ಕಟ್ಟಬೇಕು ಎನ್ನುವ ಬಗ್ಗೆ ಜನರಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಬಿ ಖಾತಾ ಹಾಗೂ ಎ ಖಾತಾ ವಿಚಾರದಲ್ಲಿ ರಾಜ್ಯ ಸರ್ಕಾರವೇ ಗುಡ್‌ನ್ಯೂಸ್‌ ನೀಡಿದರೂ, ಕೆಲವು ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಹಾಗೂ ತಾಂತ್ರಿಕ ಸಮಸ್ಯೆ ಆಗುತ್ತಿದೆ ಎನ್ನುವ ವಿಚಾರವೂ ಪದೇ ಪದೇ ಚರ್ಚೆಯಾಗುತ್ತಿದೆ. ಇದರೊಂದಿಗೆ ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ಬಗ್ಗೆಯೂ ಗೊಂದಲ ಮುಂದುವರಿದಿದೆ. ಇದಕ್ಕೆ ಇದೀಗ ಉತ್ತರ ಸಿಗುತ್ತಿದೆ. ಬಿ ಖಾತಾ ಗೊಂದಲ ಪರಿಹರಿಸುವ ಪ್ರಮುಖ ಉತ್ತರಗಳನ್ನು ನೋಡೋಣ.

B Khata New Updates How much property tax should be paid for B Khata answers important questions

ಬಿ ಖಾತಾ ಮಾಡಿಸಿಕೊಳ್ಳುವುದಕ್ಕೆ ಲಕ್ಷಾಂತರ ಜನ ಆಸ್ತಿದಾರರು ಕಾಯುತ್ತಿದ್ದಾರೆ. ಲಕ್ಷಾಂತರ ಜನ ಆಸ್ತಿದಾರರಿಗಾಗಿ ಈಗಲೂ ಬಿ - ಖಾತಾಗೆ ಸಂಬಂಧಿಸಿದಂತೆ ಕೆಲವೊಂದು ಗೊಂದಲಗಳು ಮುಂದುವರಿದಿವೆ. ಬಿ ಖಾತೆ ತೆರಿಗೆ ಪಾವತಿಸಲು ಜನರಲ್ಲಿಗೊಂದಲ ಇದೆ. ಕೆಲವೊಂದು ಪ್ರಮುಖ ನಗರಗಳಲ್ಲಿ ಆಸ್ತಿದಾರರು ಬಿ-ಖಾತೆ ಮಾಡಿಸಿಕೊಳ್ಳಲು ದುಪ್ಪಟ್ಟು ತೆರಿಗೆ ಪಾವತಿ ಮಾಡಬೇಕು ಎನ್ನುವ ತಪ್ಪು ಸಂದೇಶ ಸೃಷ್ಟಿಯಾಗಿದ್ದು ಜನ ಗೊಂದಲದಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಆದೇಶದ ಪ್ರಕಾರ, ಮನೆಗಳು ಹಾಗೂ ನಿವೇಶನಗಳನ್ನು ಬಿ ಖಾತಾ ಮಾಡಿಸಿಕೊಳ್ಳಬೇಕಾದರೆ, ಒಂದು ವರ್ಷದ ತೆರಿಗೆಯನ್ನು ದುಪ್ಪಟ್ಟು ಕಟ್ಟಿಸಿ ಕೊಳ್ಳಬೇಕಾಗಿದೆ. ಆದರೆ ಕೆಲವೊಂದು ಕಡೆ ಈ ಬಗ್ಗೆ ಗೊಂದಲ ಮುಂದುವರಿದಿದೆ. ಸರ್ಕಾರದ ಆದೇಶದ ಅನುಸಾರ ನಿರ್ದಿಷ್ಟ ಅವಧಿಯ ಆಸ್ತಿ ತೆರಿಗೆ ದುಪ್ಪಟ್ಟು ಕಟ್ಟಿದರೆ ಸಾಕು.

ಎಲ್ಲ ವರ್ಷಗಳ ತೆರಿಗೆ ದುಪ್ಪಟ್ಟು ಬೇಡ: ಇನ್ನು ಬಿ ಖಾತಾ ಮಾಡಿಸಿಕೊಳ್ಳುವಾಗ ಎಲ್ಲಾ ವರ್ಷಗಳ ಆಸ್ತಿ ತೆರಿಗೆಯ ದುಪ್ಪಟ್ಟು ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರವು ಹೇಳಿದೆ.

ಆಸ್ತಿದಾರರು ಎ ಖಾತಾ ಹಾಗೂ ಬಿ ಖಾತಾಗೆ ಸಂಬಂಧಿಸಿದಂತೆ ಕೇಳಿದ ಪ್ರಮುಖ ಪ್ರಶ್ನೆಗಳು

* ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವ ಪ್ರಮುಖ ಅಥವಾ ಯಾವೆಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸಬೇಕು ?

* ಇನ್ನು ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯ - 1976 ಪ್ರಕರಣ 110ರಲ್ಲಿ ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತುಪಡಿಸಿ ಉಳಿದಂತಹ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಹೇಳಲಾಗಿದೆ.

* ಎ ರಿಜಿಸ್ಟರ್‌ನಲ್ಲಿ ನಮೂದಿಸಬೇಕಾದ ಆಸ್ತಿಗಳು ಯಾವುದು ?

ಈ ಪ್ರಮುಖ ಆಸ್ತಿಗಳನ್ನು ಅಧಿಕೃತ ಪರಿಗಣಿಸಲಾಗಿದೆ. ಈ ಆಸ್ತಿಗಳನ್ನು "ಎ" ರಿಜಿಸ್ಟರ್‌ನಲ್ಲಿ ನಮೂದಿಸಬೇಕು.

ಅ) ಗ್ರಾಮಠಾಣಾ.

ಆ) ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು

ಇ) ಕಂದಾಯ ಇಲಾಖೆಯಿಂದ 94 cc ಅಡಿ ನೀಡಲದ ಹಕ್ಕು ಪತ್ರ

ಈ) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಆಗಿರುವ ಬಡಾವಣೆಯಲ್ಲಿನ ಸ್ವತ್ತುಗಳು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+