Arecanut Price: 57 ಸಾವಿರ ದಾಟಿದ ಅಡಿಕೆ ದರ: ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ
ಅಡಿಕೆ ದರ ಸದ್ಯ ಏರಿಕೆಯ ಹಾದಿಯಲ್ಲಿದ್ದು ರೈತರಲ್ಲಿ ಸಂತಸ ತಂದಿದೆ. ಚನ್ನಗಿರಿಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ 57000 ರೂಪಾಯಿ ದಾಟಿದ್ದು, ವಿವಿಧ ಪ್ರಮುಖ ಮಾರುಕಟ್ಟೆಗಳಲ್ಲಿ ಕೂಡ 55-57 ಸಾವಿರ ಆಸುಪಾಸಿನಲ್ಲಿದೆ.
ಜುಲೈ 14ರಂದು ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ 57399 ರೂಪಾಯಿಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಕೂಡ ಅಡಿಕೆ 56-57 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ 55 ಸಾವಿರ ದಾಟಿದ್ದು, ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಚನ್ನಗಿರಿ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ 57399 ರೂಪಾಯಿ ಆಗಿರುವುದು ಈ ವರ್ಷದಲ್ಲಿ ಅತ್ಯಧಿಕ ಧಾರಣೆ ಎನಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೂ, ಬೆಲೆ ಏರಿಕೆ, ಇಳಿಕೆಯ ಬಗ್ಗೆ ಖಚಿತವಾಗಿ ಅಂದಾಜಿಸುವುದು ಸಾಧ್ಯವಿಲ್ಲ.
ಜುಲೈ 15ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹54032 | ₹57,399 | ₹54,911 |
| 2 | ಗುಬ್ಬಿ | ರಾಶಿ | ₹51,100 | ₹53,000 | ₹52,500 |
| 3 | ಬಂಟ್ವಾಳ | ಕೋಕಾ | ₹12,500 | ₹25,000 | ₹22,500 |
| 4 | ಬಂಟ್ವಾಳ | ಹಳೆ ವೆರೈಟಿ | ₹46,000 | ₹49,500 | ₹47,500 |
| 5 | ಹೊನ್ನಳ್ಳಿ | ರಾಶಿ | ₹55,499 | ₹55,499 | ₹55,499 |
| 6 | ಪುತ್ತೂರು | ಹೊಸ ವೆರೈಟಿ | ₹34,000 | ₹42,500 | ₹38,250 |
| 7 | ಶಿವಮೊಗ್ಗ | ರಾಶಿ | ₹40,300 | ₹55,421 | ₹54,599 |
| 8 | ಶಿವಮೊಗ್ಗ | ಸರಕು | ₹56,100 | ₹77,700 | ₹73,100 |
| 9 | ಸಾಗರ | ರಾಶಿ | ₹42,009 | ₹55,399 | ₹54,599 |
| 10 | ಸಾಗರ | ಕೆಂಪುಗೋಟು | ₹28,569 | ₹42,259 | ₹41,799 |
| 11 | ಹುಳಿಯಾರು | ಕೆಂಪು | ₹45,000 | ₹47,000 | ₹46,235 |
| 12 | ಸಿದ್ದಾಪುರ | ತಟ್ಟಿ ಬೆಟ್ಟೆ | ₹40,219 | ₹46,249 | ₹44,249 |
| 13 | ಬೆಂಗಳೂರು | ಇತರೆ | ₹55,000 | ₹60,000 | ₹57,500 |
| 14 | ಸಿರಾ | ಇತರೆ | ₹9,000 | ₹47,000 | ₹45,144 |
ಮುಂಗಾರು ಮಳೆ; ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣಾ ಕ್ರಮಗಳು
ಮತ್ತೆ ಅಡಿಕೆ ಸೀಸನ್ ಆರಂಭವಾಗುವವರೆಗೆ ಇದೇ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಅಡಿಕೆ ಬೆಲೆ ಹೆಚ್ಚಳದಿಂದ ರೈತರಿಗೆ ಒಂದು ಕಡೆ ಖಷಿಯಾಗಿದ್ದರೆ ಮತ್ತೆ ಅಡಿಕೆ ದರ ಕುಸಿಯುವ ಆತಂಕ ಕೂಡ ಇದೆ. ಹೆಚ್ಚಿನ ರೈತರು ಈಗಾಗಲೇ ಅಡಿಕೆಯನ್ನು ಮಾರಾಟ ಮಾಡಿದ್ದು, ಬೆಲೆ ಏರಿಕೆಯಾದರೂ ಲಾಭದಿಂದ ವಂಚಿತವಾಗಿದ್ದಾರೆ. 2000 ನೋಟ್ ವಾಪಸ್ ಪಡೆದಿರುವುದು ಕೂಡ ಅಡಿಕೆ ದರ ಹೆಚ್ಚಳಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಅಡಿಕೆ ಧಾರಣೆ 65 ಸಾವಿರ ರೂಪಾಯಿವರೆಗೆ ತಲುಪಿ ದಾಖಲೆ ಬರೆದಿತ್ತು, ಇದು ಇತ್ತೀಚಿನ ದಿನಗಳಲ್ಲಿ ದಾಖಲಾದ ಗರಿಷ್ಠ ಬೆಲೆಯಾಗಿದೆ. ಇದಕ್ಕೂ ಮುನ್ನ ಕಳೆದ 10 ವರ್ಷಗಳ ಹಿಂದೆ ಅಡಿಕೆ 85000 ರೂಪಾಯಿಗೆ ಹೆಚ್ಚಳವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು.












Click it and Unblock the Notifications