Anand Mahindra: ಡಿಕೆಶಿ ಟ್ವೀಟ್‌ಗೆ ಕನ್ನಡದಲ್ಲಿ ಉತ್ತರ ಕೊಟ್ಟ ಆನಂದ್ ಮಹೀಂದ್ರಾ!

ಬೆಂಗಳೂರು, ಸೆಪ್ಟೆಂಬರ್ 05: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸದಾ ಆಸಕ್ತಿದಾಯಕ ಟ್ವೀಟ್‌ಗಳನ್ನು ಮಾಡುವ ಭಾರತದ ಉದ್ಯಮಿಗಳಲ್ಲಿ ಅಗ್ರಸ್ಥಾನದಲ್ಲಿರುವುದು ಆನಂದ್ ಮಹೀಂದ್ರಾ. ಕರ್ನಾಟಕದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್‌ವೊಂದಕ್ಕೆ ಆನಂದ್ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷ ಎಂದರೆ ಕನ್ನಡ ಭಾಷೆಯಲ್ಲಿಯೇ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಡಿ. ಕೆ. ಶಿವಕುಮಾರ್ ಬೈಕ್ ಕುರಿತು ಮಾಡಿದ ಟ್ವೀಟ್‌ಗೆ ಆನಂದ್ ಮಹೀಂದ್ರಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡಿ. ಕೆ. ಶಿವಕುಮಾರ್ ಟ್ವೀಟ್‌ ಅನ್ನು ರಿ ಟ್ವೀಟ್ ಮಾಡಿದ್ದಾರೆ. ಮಹೀಂದ್ರಾ ಗ್ರೂಪ್, ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಮತ್ತು ಟೆಕ್ ಮಹೀಂದ್ರಾ ಲಿಮಿಟೆಡ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಕನ್ನಡ ಬಳಕೆ ಈಗ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.

Anand Mahindra Reply For DK Shivakumar Tweet On Yezdi Bike

ಡಿ. ಕೆ. ಶಿವಕುಮಾರ್ ಟ್ವೀಟ್: ಸೆಪ್ಟೆಂಬರ್ 1ರಂದು ಡಿ. ಕೆ. ಶಿವಕುಮಾರ್, 'ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು, ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು' ಎಂದು ಹೇಳಿದ್ದಾರೆ.

ಆನಂದ್ ಮಹೀಂದ್ರಾ ಡಿ. ಕೆ. ಶಿವಕುಮಾರ್ ಟ್ವೀಟ್ ರಿ ಟ್ವೀಟ್ ಮಾಡಿದ್ದು, 'ನೆನಪಿನ ಶಕ್ತಿ...' ಎಂದು ಹೇಳಿದ್ದು, #yezdi ಎಂಬ ಹ್ಯಾಷ್‌ ಟ್ಯಾಗ್‌ ಬಳಕೆ ಮಾಡಿದ್ದಾರೆ.

ಡಿ. ಕೆ. ಶಿವಕುಮಾರ್ ಅವರ ಯಜ್ಜಿ ಬೈಕ್ ಸಂಖ್ಯೆ CAE 7684. ಅದನ್ನು ಈಗ ಮರು ವಿನ್ಯಾಸ ಮಾಡಲಾಗಿದೆ. ತಮ್ಮ ನಿವಾಸದಲ್ಲಿ ಅದನ್ನು ಡಿಕೆಶಿ ಕಿಕ್ ಹೊಡೆದು ಸ್ಟಾರ್ಟ್‌ ಮಾಡಿ ಖುಷಿಪಟ್ಟರು. ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಒಂದು ಕಾಲದಲ್ಲಿ ಬೈಕ್ ಪ್ರಿಯರ ನಿದ್ದೆ ಕದ್ದ ಬೈಕ್ yezdi. ರಸ್ತೆಯಲ್ಲಿ ಗತ್ತಿನಿಂದ ಬೈಕ್ ಸಾಗುತ್ತಿದ್ದರೆ ತಿರುಗಿ ನೋಡಿದವರು ಅದೆಷ್ಟೋ ಮಂದಿ. ಡಿ. ಕೆ. ಶಿವಕುಮಾರ್ ಬೆಂಗಳೂರು ನಗರದಲ್ಲಿ ಕಾಲೇಜಿಗೆಗೆ ಹೋಗುತ್ತಿದ್ದಾಗ yezdi ಅವರ ಮನಸ್ಸು ಕದ್ದಿತ್ತು. ಯುವ ಕಾಂಗ್ರೆಸ್‌ನಲ್ಲಿ ಇದ್ದಾಗಲೂ ಇದೇ ಬೈಕ್‌ ಅನ್ನು ಡಿ. ಕೆ. ಶಿವಕುಮಾರ್ ಬಳಕೆ ಮಾಡುತ್ತಿದ್ದರು.

ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಬಹಳ ಕಾಳಜಿಯಿಂದ ಡಿ. ಕೆ. ಶಿವಕುಮಾರ್ ಅವರಿಗೆ ಸೇರಿದ yezdi ಬೈಕ್‌ ಅನ್ನು ಮರು ವಿನ್ಯಾಸಗೊಳಿಸಿದ್ದಾರೆ. ಈಗ ಬೈಕ್ ಬಿಡಿಭಾಗಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಅವುಗಳನ್ನು ತರಿಸಿ ಬೈಕ್ ಮತ್ತೆ ಸಿದ್ಧಗೊಳಿಸಿದ್ದಾರೆ. ಸುಮಾರು 10 ತಿಂಗಳ ಕಾಲ 2 ಲಕ್ಷ ರೂ.ಗಳಿಗೂ ಅಧಿಕ ಖರ್ಚು ಮಾಡಿ ಬೈಕ್ ಮರು ವಿನ್ಯಾಸಗೊಳಿಸಿದ್ದು, ಇದು ಡಿ. ಕೆ. ಶಿವಕುಮಾರ್‌ಗೂ ಸಹ ಇಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+