ರಾಜದ್ರೋಹ ಪ್ರಕರಣದ ಬಗ್ಗೆ ಸಂತೋಷ್ ಹೆಗ್ಡೆ ಹೇಳುವುದೇನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 19 : 'ನಮ್ಮ ಸಂಸ್ಥೆಯವರು ದೇಶ ವಿರೋಧಿ ಘೋಷಣೆಗಳನ್ನು ಕೂಗಿಲ್ಲ ಎಂದು ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆ ರಾಜದ್ರೋಹದ ಆರೋಪಗಳಿಂದ ನುಣುಚಿಕೊಳ್ಳುವಂತಿಲ್ಲ' ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಒನ್ ಇಂಡಿಯಾ ಜೊತೆ ಮಾತನಾಡಿದ ಸಂತೋಷ್ ಹೆಗ್ಡೆ ಅವರು, 'ಸುಪ್ರೀಂಕೋರ್ಟ್‌ ತೀರ್ಪುಗಳ ಅನ್ವಯ ದೇಶದ್ರೋಹದ ಘೋಷಣೆಗಳ ಬಳಿಕ ಹಿಂಸಾಚಾರಗಳು ನಡೆದರೆ ಮಾತ್ರ ರಾಜದ್ರೋಹ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ' ಎಂದರು.['ಎಬಿವಿಪಿ ಪ್ರತಿಭಟನೆ ಹಿಂದೆ ಬಿಜೆಪಿ ಕೈವಾಡವಿದೆ']

santhosh hegde

'ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮಗಳ ಬಳಿಕವೂ ಪ್ರತಿಭಟನೆ, ಹಿಂಸಾಚಾರ ನಡೆದಿದೆ. ಕೋರ್ಟ್ ತೀರ್ಪಿನಂತೆ ಇಂತಹ ಪ್ರಕರಣ ದಾಖಲು ಮಾಡಿರಬಹುದು' ಎಂದು ಹೇಳಿದರು.[ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಚೇರಿಗಳಿಗೆ ಬೀಗ!]

'ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆ ತನ್ನ ಸಂಸ್ಥೆಯವರು ಘೋಷಣೆ ಕೂಗಿಲ್ಲ ಎಂದು ನುಣುಚಿಕೊಳ್ಳುವಂತಿಲ್ಲ. ಕಾರ್ಯಕ್ರಮವನ್ನು ಆಯೋಜಿಸಿದ್ದು ಅವರು, ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವೇದಿಕೆ ನೀಡಿದ್ದು ಅವರು. ಆದ್ದರಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ' ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.[Amnesty International ಬಗ್ಗೆ ತಿಳಿಯಿರಿ]

'ಸಂಸ್ಥೆಯ ಕಾರ್ಯಕ್ರಮದಲ್ಲಿ ಇಂತಹ ಘೋಷಣೆ ಕೂಗಿದ್ದಾರೆ ಎಂದರೆ ಅವರ ಘನತೆಗೆ ಧಕ್ಕೆ ಉಂಟಾಗುವುದಿಲ್ಲವೇ?, ಯೋಧರು ಹುತಾತ್ಮರಾದಾಗ?, ಭಯೋತ್ಪಾದಕ ದಾಳಿ ನಡೆದಾಗ ಸಂಸ್ಥೆಯವರು ಏನು ಹೇಳುವರು?' ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amnesty International cannot run away from its responsibility of saying no one shouted slogans says former Judge of the Supreme Court, Justice Santhosh Hegde.
Please Wait while comments are loading...