ಕರ್ನಾಟಕಕ್ಕೆ ಬೇಸಿಗೆ ಬಿಸಿ ಜೊತೆಗೆ ಲೋಡ್ ಶೆಡ್ಡಿಂಗ್ ಹೊರೆ

Posted By:
Subscribe to Oneindia Kannada

ಬೆಂಗಳೂರು, ಫೆ. 23: ಶರಾವತಿ ಜಲವಿದ್ಯುತ್ ಘಟಕದಲ್ಲಿನ ಬೆಂಕಿ ಆಕಸ್ಮಿಕದ ನೆಪವೊಡ್ಡಿ ವಿದ್ಯುತ್ ಕೊರತೆ ಹೊಂದಿಸಲು ಮತ್ತೊಮ್ಮೆ ಲೋಡ್ ಶೆಡ್ಡಿಂಗ್ ಹೊರೆಯನ್ನು ರಾಜ್ಯದ ಸಮಸ್ತ ಜನತೆ ಮೇಲೆ ಹೊರೆಸಲು ಸಿದ್ದರಾಮಯ್ಯ ಸರ್ಕಾರ ಅನುಮತಿ ನೀಡಿದೆ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಇದೀಗ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದು, ಇನ್ನೇನು ಲೋಡ್ ಶೆಡ್ಡಿಂಗ್ ವೇಳಾಪಟ್ಟಿ ನಿರೀಕ್ಷಿಸಬಹುದು.

ಪ್ರತಿ ನಿತ್ಯ ಸರಾಸರಿ 1,000 ದಿಂದ 2,500 ಮೆಗಾ ವ್ಯಾಟ್ ವಿದ್ಯುತ್‌ ಕೊರತೆ ಬೀಳುತ್ತಿದ್ದು, ಅದನ್ನು ಹೊಂದಿಸಲು ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಸೋಮವಾರದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.[ಸೌರಶಕ್ತಿಯಿಂದ ಮನೆ ಬೆಳಗಿಸಿದ ಮೈಸೂರಿನ 'ಭಕ್ತವತ್ಸಲ']

ಪ್ರಸ್ತುತ 9,300 ಮೆಗಾ ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದೆ. ಮಾರ್ಚ್‌ ವೇಳೆಗೆ ಅದು 10,026 ಮೆಗಾ ವ್ಯಾಟ್ ಗೆ ಏರುವ ಸಾಧ್ಯತೆ ಇದೆ. ರಾಜ್ಯದ ಎಲ್ಲ ಮೂಲಗಳಿಂದ ಸೇರಿ ಹೆಚ್ಚೆಂದರೆ 9,218 ಮೆಗಾ ವ್ಯಾಟ್ ವಿದ್ಯುತ್‌ ಸರಬರಾಜು ಮಾಡಬಹುದು. ಮಳೆ ಕೊರತೆ ಕಾರಣದಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ40ರಷ್ಟು ಮಾತ್ರ ಇದೆ.[ಇನ್ಮುಂದೆ ಎಲ್ ಇಡಿ ಬಳಕೆ ಕಡ್ಡಾಯ]

DK shivakumar

ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ವಿಶ್ವ ಟಿ20 ಪಂದ್ಯ, ಹಲವು ಪರೀಕ್ಷೆಗಳು ಎದುರಾಗಲಿದೆ. ಮುಂಬರುವ ಎರಡು ಮೂರು ತಿಂಗಳುಗಳಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು, ವಿದ್ಯುತ್ ಉಳಿತಾಯ, ಲೋಡ್ ಶೆಡ್ಡಿಂಗ್, ಪರ್ಯಾಯ ಇಂಧನ ಬಳಕೆಗೆ ಆದ್ಯತೆ ನೀಡಬೇಕಾಗುತ್ತದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದರು.[ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]

ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲು:

ಕಳೆದ ಹತ್ತು ವರ್ಷಗಳಲ್ಲೇ ಕಾಣದಷ್ಟು ಬಿಸಿಲಿನ ಝಳ ಕಂಡಿರುವ ಬೆಂಗಳೂರು ತತ್ತರಿಸಿದೆ. ಸೋಮವಾರ (ಫೆಬ್ರವರಿ 22) 35.5 ಡಿಗ್ರಿ ಸೆಲ್ಸಿಯಸ್ ಇತ್ತು. ಸಾಮಾನ್ಯ ತಾಪಮಾನಕ್ಕಿಂತ 4 ಡಿ.ಸೆ. ಅಧಿಕವಾಗಿದ್ದು, ಕಳೆದ 10 ವರ್ಷಗಳಲ್ಲೇ ಇದು 'ಹಾಟೆಸ್ಟ್ ಡೇ' ಎಂದು ಹವಾಮಾನ ಇಲಾಖೆ (ಎಂಐಡಿ) ಅಂಕಿ ಅಂಶಗಳು ಹೇಳುತ್ತಿವೆ. ಪಾದರಸದ ಮಟ್ಟ ಇನ್ನೂ ಏರಿಕೆ ಕಾಣಲಿದ್ದು, ಬೇಸಿಗೆಯಲ್ಲಿ ಬಿಸಿ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ಸಿಕ್ಕಿದೆ. ಈ ನಡುವೆ ಲೋಡ್ ಶೆಡ್ಡಿಂಗ್ ಶುರುವಾದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಬಿಸಿ ಏರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
CM Siddaramaiah led cabinet has granted permission to energy department to impose load shedding, scheduled power cuts across the state. Energy minister DK Shivakumar said state is facing a power crisis with a shortage 1,000 to 2,500 MW at present.
Please Wait while comments are loading...