ಅಪರೂಪದ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿದ ಯಾದಗಿರಿಯ ಉಪನ್ಯಾಸಕ

ಯಾದಗಿರಿ, ಅಕ್ಟೋಬರ್ 14: ಅವರು ವೃತ್ತಿಯಲ್ಲಿ ಉಪನ್ಯಾಸಕ. ಅಧ್ಯಯನದ ಜೊತೆಗೆ ಸಂಶೋಧನೆ ಮಾಡುತ್ತಾ ನೂರಾರು ನಾಣ್ಯಗಳು, ಹಸ್ತಪ್ರತಿ, ಶಾಸನಗಳನ್ನ ಪತ್ತೆ ಹಚ್ಚಿದ್ದಾರೆ. ಅವರ ಮನೆಯೇ ವಸ್ತು ಸಂಗ್ರಾಲಯವಾಗಿ ಪರಿವರ್ತನೆಯಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರದ ಡಾ.ಧರ್ಮಣ್ಣ ಬಡಿಗೇರ್​​ ಉಪನ್ಯಾಸಕರಾಗಿದ್ದರೂ ಬಿಡುವಿನ ಸಮಯದಲ್ಲಿ ಸಂಶೋಧಕರಾಗಿ ನಮ್ಮ ಐತಿಹಾಸಿಕ ಶ್ರೀಮಂತಿಕೆಯನ್ನು ಕಾಪಿಡುವ ಯತ್ನ ಮಾಡುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಣ್ಣ ಬಡಿಗೇರ್​​​, ದೇಶ-ವಿದೇಶಗಳ ನಾಣ್ಯಗಳು, ಹಸ್ತಪ್ರತಿ, ತಾಳೆಗರಿಗಳನ್ನ ಸಂಗ್ರಹಿಸಿದ್ದಾರೆ. ವಿವಿಧ ರಾಜರ ಕಾಲದ ಶಾಸನಗಳ ಸಂಶೋಧನೆ ಮಾಡಿದ್ದಾರೆ.

22 ಶಿಲಾಶಾಸನ ಪತ್ತೆ ಹಚ್ಚಿದ ಕೀರ್ತಿ

22 ಶಿಲಾಶಾಸನ ಪತ್ತೆ ಹಚ್ಚಿದ ಕೀರ್ತಿ

ಬಂಗಾರ, ಬೆಳ್ಳಿ, ತಾಮ್ರದ ಎಂಟು ನೂರು ನಾಣ್ಯಗಳು, ಎರಡೂವರೆ ಸಾವಿರ ಹಸ್ತಪ್ರತಿಗಳು, ಎರಡು ಸಾವಿರ ತಾಳೆಗರಿ ಹಾಗೂ ಯರಗೋಳ, ಹೆಗ್ಗಣದೊಡ್ಡಿ, ಹುಲಕಲ್, ಶಹಾಪುರ ಬೆಟ್ಟ ಸೇರಿದಂತೆ ವಿವಿಧೆಡೆ 22 ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ.

ಅಪರೂಪದ ನಾಣ್ಯ ಸಂಗ್ರಹ

ಅಪರೂಪದ ನಾಣ್ಯ ಸಂಗ್ರಹ

ಕಳೆದ 20 ವರ್ಷಗಳಿಂದ ಇತಿಹಾಸ ಅಧ್ಯಯನ, ಸಂಶೋಧನೆಯಲ್ಲಿ ತೊಗಡಿಸಿಕೊಂಡಿರುವ ಧರ್ಮಣ್ಣ ಬಡಿಗೇರ್​​, ಪ್ರಾಚೀನ ಕಾಲದ ವಿವಿಧ ವಸ್ತುಗಳು, ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಟಿಪ್ಪು ಸುಲ್ತಾನ್​​, ಆದಿಲ್​ ಶಾಹಿ ಆಡಳಿತ ಸೇರಿದಂತೆ ಪ್ರಚಲಿತ ನಾಣ್ಯಗಳನ್ನ ಸಂಗ್ರಹಿಸಿದ್ದಾರೆ. ಹಲವಾರು ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ.

ಇತಿಹಾಸಕ್ತರಿಗೆ ಅನುಕೂಲ

ಇತಿಹಾಸಕ್ತರಿಗೆ ಅನುಕೂಲ

ಈ ಮೂಲಕ ವಿದ್ಯಾರ್ಥಿ ಹಾಗೂ ಇತಿಹಾಸದ ಸಂಶೋಧಕರಿಗೆ ಮಾಹಿತಿ ನೀಡುತ್ತಿದ್ದಾರೆ. ವಿವಿಧ ಕಾಲದ ನಾಣ್ಯಗಳು, ಹಸ್ತಪ್ರತಿ, ತಾಳೆಗರಿಗಳನ್ನು ಸಂಗ್ರಹಿಸಿ ಶಿಲಾ ಶಾಸನಗಳನ್ನ ಪತ್ತೆ ಹಚ್ಚಿರುವುದು ಇತಿಹಾಸಕ್ತರಿಗೆ ಅನುಕೂಲವಾಗಿದೆ. ಹೆಚ್ಚಾಗಿ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಕಾರಿಯಾಗಿದೆ.

ಮ್ಯೂಸಿಯಂ ತೆರೆವ ಕನಸು

ಮ್ಯೂಸಿಯಂ ತೆರೆವ ಕನಸು

ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಹಾಯ ಮಾಡಿದರೆ ಮ್ಯೂಸಿಯಂ ತೆರೆಯುವ ಯೋಚನೆಯಲ್ಲಿದ್ದಾರೆ. ಈ ಮೂಲಕ ಇನ್ನಷ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಸಿದ್ಧತೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+