ಕರ್ನಾಟಕದಲ್ಲಿ 932 ಮಂದಿ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಮಾರ್ಚ್ 15: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, 932 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಆಸ್ಪತ್ರೆಯಿಂದ 429 ಮಂದಿ ಬಿಡುಗಡೆಯಾಗಿದ್ದಾರೆ, ಇದುವರೆಗೆ ಒಟ್ಟು 939928 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 8860 ಸಕ್ರಿಯ ಪ್ರಕರಣಗಳಿವೆ, 7 ಮಂದಿ ಸಾವನ್ನಪ್ಪಿದ್ದಾರೆ, 12,397 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. 961204 ಖಚಿತ ಪ್ರಕರಣಗಳಿವೆ.
125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ 18, ಬೆಳಗಾವಿಯಲ್ಲಿ 03, ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 550, ಬೀದರ್ 33, ಚಾಮರಾಜನಗರ 07, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 02, ಚಿತ್ರದುರ್ಗ 08, ದಕ್ಷಿಣ ಕನ್ನಡ 65, ಧಾರವಾಡ 11, ಗದಗ 02, ಹಾಸನ 16, ಹಾವೇರಿ 1, ಕಲಬುರಗಿ 43, ಕೊಡಗು 04, ಕೋಲಾರ 8, ಕೊಪ್ಪಳ 2, ಮಂಡ್ಯ 13, ಮೈಸೂರು 46, ರಾಯಚೂರು 2, ರಾಮನಗರ 2, ಶಿವಮೊಗ್ಗ 5, ತುಮಕೂರು 40, ಉಡುಪಿ 24, ಉತ್ತರ ಕನ್ನಡ 6, ಯಾದಗಿರಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications