ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ರಚನೆ, ಡಿಕೆಶಿಗೆ ಸ್ಥಾನ

ಬೆಂಗಳೂರು, ಜೂನ್ 14 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಸಮಿತಿಯನ್ನು ರಚನೆ ಮಾಡಲಾಗಿದೆ. 5 ಸದಸ್ಯರ ಸಮಿತಿಯಲ್ಲಿ ಡಿ.ಕೆ.ಶಿವಕುಮಾರ್‌ಗೆ ಸ್ಥಾನ ನೀಡಲಾಗಿದೆ.

ಶುಕ್ರವಾರ ಕರ್ನಾಟಕ ಕಾಂಗ್ರೆಸ್ 5 ಸದಸ್ಯರ ಸಮಿತಿಯನ್ನು ಕನಿಷ್ಠ ಕಾರ್ಯಕ್ರಮ ರೂಪಿಸಲು ರಚನೆ ಮಾಡಿದೆ. 10 ದಿನದಲ್ಲಿ ಈ ಸಮಿತಿ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡನ್ನು ಸಿದ್ಧಪಡಿಸಲಿದೆ.

5 member committee set up for common minimum programme

ಸಮಿತಿಯ ಸದಸ್ಯರು : ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಲ್ಲಿ ಕಾಂಗ್ರೆಸ್‌ನಿಂದ 3, ಜೆಡಿಎಸ್‌ನಿಂದ 2 ಸದಸ್ಯರಿದ್ದಾರೆ.

* ಎಂ.ವೀರಪ್ಪ ಮೊಯ್ಲಿ

* ಆರ್.ವಿ.ದೇಶಪಾಂಡೆ

* ಡಿ.ಕೆ.ಶಿವಕುಮಾರ್

* ಎಚ್.ಡಿ.ರೇವಣ್ಣ

* ಎಸ್.ಸುಬ್ರಮಣ್ಯ (ಸಿಎಂ ಆರ್ಥಿಕ ಸಲಹೆಗಾರ) ಸಮಿತಿಯ ಸದಸ್ಯರು.

ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕನಿಷ್ಠ ಕಾರ್ಯಕ್ರಮ ಸಮಿತಿ ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಶುಕ್ರವಾರ ಸಮಿತಿಯನ್ನು ರಚನೆ ಮಾಡಲಾಗಿದೆ.

'ಎರಡೂ ಪಕ್ಷ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿವೆ. ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಸಾಧ್ಯ. ಆದ್ದರಿಂದ, ಸಾಮಾನ್ಯ ಕನಿಷ್ಠ ಕಾರ್ಯಕ್ರ ರೂಪಿಸಲಾಗುತ್ತದೆ. 10 ದಿನದಲ್ಲಿ ಸಮಿತಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ರೂಪಿಸಿ, ಸಲ್ಲಿಕೆ ಮಾಡಲಿದೆ' ಎಂದು ಸಿದ್ದರಾಮಯ್ಯ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+